‘ವಿಜಯ್-ರಶ್ಮಿಕಾ ಒಂದೇ ರೆಸಾರ್ಟ್ ಹೋಗಿದ್ದೇಕೆ’; ಕೊನೆಗೂ ಮೌನ ಮುರಿದ ಆನಂದ್ ದೇವರಕೊಂಡ
‘ನಿಮ್ಮ ಅಣ್ಣ, ಸ್ಟಾರ್ ಹೀರೋಯಿನ್ ಒಂದೇ ರೆಸಾರ್ಟ್ಗೆ ತೆರಳಿದ್ದರಲ್ಲ. ನೋಡಿ ನಮ್ಮ ಬಳಿ ಫೋಟೋ ಇದೆ’ ಎಂದು ಯೂಟ್ಯೂಬರ್ ತೋರಿಸಿದ್ದಾರೆ. ಇದಕ್ಕೆ ಆನಂದ್ ‘ನನ್ನ ಬಳಿಯೂ ಇದೆ’ ಎಂದು ಯಾವುದೋ ಒಂದು ಫೋಟೋ ತೋರಿಸಿದ್ದಾರೆ.
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ಆಗಾಗ ಬೇರೆ ಬೇರೆ ಕಡೆಗಳಲ್ಲಿ ಸುತ್ತಾಟ ನಡೆಸುತ್ತಾರೆ. ಅನೇಕ ಬಾರಿ ಇವರು ಒಟ್ಟಾಗಿ ವಿದೇಶಕ್ಕೆ ತೆರಳಿದ್ದು ಇದೆ. ಬೇರೆ ಬೇರೆ ಸಂದರ್ಭದಲ್ಲಿ ಈ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಆದಾಗ್ಯೂ ಅಭಿಮಾನಿಗಳು ಇದನ್ನು ಕಂಡು ಹಿಡಿಯುತ್ತಾರೆ. ಈ ಪೈಕಿ ಹೆಚ್ಚು ಸುದ್ದಿ ಮಾಡಿದ್ದು ರೆಸಾರ್ಟ್ ಫೋಟೋ. ಇಬ್ಬರೂ ಒಂದೇ ರೆಸಾರ್ಟ್ಗೆ ತೆರಳಿದ್ದರು. ಆದರೆ, ಬೇರೆ ಬೇರೆ ಸಂದರ್ಭದಲ್ಲಿ ಫೋಟೋ ಹಾಕಿದ್ದರು. ಇವರು ಒಟ್ಟಿಗೆ ಹೋಗಿದ್ದರು ಅನ್ನೋದು ಕೆಲವರ ಊಹೆ. ಈ ಬಗ್ಗೆ ಆನಂದ್ ದೇವರಕೊಂಡಗೆ ಪ್ರಶ್ನೆ ಎದುರಾಗಿದೆ.
ಇತ್ತೀಚೆಗೆ ಆನಂದ್ ದೇವರಕೊಂಡ ಅವರು ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದಾರೆ. ಆ ಯೂಟ್ಯೂಬರ್ ನೇರಾ ನೇರ ಪ್ರಶ್ನೆಗಳನ್ನು ಇಟ್ಟಿದ್ದಾರೆ. ‘ನಿಮ್ಮ ಅಣ್ಣ, ಸ್ಟಾರ್ ಹೀರೋಯಿನ್ ಒಂದೇ ರೆಸಾರ್ಟ್ಗೆ ತೆರಳಿದ್ದರಲ್ಲ. ನೋಡಿ ನಮ್ಮ ಬಳಿ ಫೋಟೋ ಇದೆ’ ಎಂದು ಯೂಟ್ಯೂಬರ್ ತೋರಿಸಿದ್ದಾರೆ. ಇದಕ್ಕೆ ಆನಂದ್ ‘ನನ್ನ ಬಳಿಯೂ ಇದೆ’ ಎಂದು ಯಾವುದೋ ಒಂದು ಫೋಟೋ ತೋರಿಸಿದ್ದಾರೆ.
View this post on Instagram
‘ಇದು ಕಾಕತಾಳೀಯ’ ಎಂದರು ಆನಂದ್. ‘ಒಂದೇ ರೆಸಾರ್ಟ್ಗೆ ಇಬ್ಬರೂ ಹೋಗಿದ್ದು ಹೇಗೆ’ ಎಂದು ಸಂದರ್ಶಕ ಕೇಳಿದ. ‘ದೂರವಲ್ಲವೇ, ವಿಮಾನದಲ್ಲಿ ತೆರಳಿದರು’ ಎಂದರು ಆನಂದ್. ‘ಅವರಿಬ್ಬರು ಏನು ನಡೆಯುತ್ತಿದೆ’ ಎಂದು ಕೇಳಿದರು ಯೂಟ್ಯೂಬರ್. ‘ಮುಂದಿನ ಸಿನಿಮಾಗೆ ಸ್ಕ್ರಿಪ್ಟ್ ಡಿಸ್ಕಶನ್ ನಡೆಯುತ್ತಿದೆ’ ಎಂದರು ಆನಂದ್. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಆನಂದ್ ದೇವರಕೊಂಡ ನನ್ನ ಕುಟುಂಬದ ಸದಸ್ಯ ಎಂದ ರಶ್ಮಿಕಾ; ಇದರ ಒಳಾರ್ಥ ಗೊತ್ತಾಯ್ತಾ?
ಆನಂದ್ ದೇವರಕೊಂಡ ನಟನೆಯ ‘ಗಂ ಗಂ ಗಣೇಶಾ’ ಇಂದು (ಮೇ 31) ರಿಲೀಸ್ ಆಗಿದೆ. ಈ ಕಾರ್ಯಕ್ರಮಕ್ಕೆ ರಶ್ಮಿಕಾ ಮಂದಣ್ಣ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ವಿಜಯ್ ಅವರನ್ನು ತಮ್ಮ ಕುಟುಂಬದವರು ಎಂದು ಕರೆದಿದ್ದಾರೆ ರಶ್ಮಿಕಾ. ಈ ವಿಡಿಯೋ ಸಾಕಷ್ಟು ಗಮನ ಸೆಳೆದಿದೆ. ರಶ್ಮಿಕಾ ಅವರು ಆಗಾಗ ವಿಜಯ್ ದೇವರಕೊಂಡ ಮನೆಗೆ ಭೇಟಿ ನೀಡುತ್ತಾರೆ. ಹಬ್ಬಗಳನ್ನು ಇವರು ಒಟ್ಟಾಗಿ ಆಚರಿಸುತ್ತಾರೆ. ಈ ಕಾರಣಕ್ಕೆ ಆನಂದ್ ಅವರಿಗೂ ರಶ್ಮಿಕಾ ಜೊತೆ ಒಳ್ಳೆಯ ಬಾಂಧವ್ಯ ಬೆಳೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:05 am, Fri, 31 May 24