AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಸ್ಸಿಂಗ್​ ಸೀನ್​ ಮಾಡಲ್ಲ ಅಂತ ಸಲ್ಮಾನ್​ ಖಾನ್​ ಸುಳ್ಳು ಹೇಳಿದ್ರಾ? ಫೋಟೋ ವೈರಲ್​

ಕಿಸ್ಸಿಂಗ್​ ದೃಶ್ಯದಲ್ಲಿ ನಟಿಸಲ್ಲ ಎಂದು ಸಲ್ಮಾನ್​ ಖಾನ್​ ಅವರು ಹಲವು ವರ್ಷಗಳ ಹಿಂದೆಯೇ ಶಪಥ ಮಾಡಿದ್ದಾರೆ. ಆದರೆ ಅವರ ಒಂದು ಹಳೇ ಫೋಟೋ ಈಗ ವೈರಲ್​ ಆಗಿದೆ. ನಟಿ ಕರೀಷ್ಮಾ ಕಪೂರ್ ಜೊತೆ ಸಲ್ಮಾನ್​ ಖಾನ್​ ಲಿಪ್​ ಲಾಕ್​ ಮಾಡಿದ್ದಾರೆ ಎಂಬುದು ಅನೇಕರ ವಾದ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಸಿನಿಪ್ರಿಯರ ನಡುವೆ ಚರ್ಚೆ ಜೋರಾಗಿದೆ.

ಕಿಸ್ಸಿಂಗ್​ ಸೀನ್​ ಮಾಡಲ್ಲ ಅಂತ ಸಲ್ಮಾನ್​ ಖಾನ್​ ಸುಳ್ಳು ಹೇಳಿದ್ರಾ? ಫೋಟೋ ವೈರಲ್​
ಕರೀಷ್ಮಾ ಕಪೂರ್​, ಸಲ್ಮಾನ್​ ಖಾನ್​
ಮದನ್​ ಕುಮಾರ್​
|

Updated on: May 30, 2024 | 11:00 PM

Share

ನಟ ಸಲ್ಮಾನ್​ ಖಾನ್​ (Salman Khan) ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಅನೇಕ ಬ್ಲಾಕ್​ ಬಸ್ಟರ್​ ಸಿನಿಮಾಗಳನ್ನು ಅವರು ನೀಡಿದ್ದಾರೆ. ಅನೇಕ ನಟಿಯರ ಜೊತೆ ಅವರು ತೆರೆ ಹಂಚಿಕೊಂಡಿದ್ದಾರೆ. ಆದರೆ ಇಷ್ಟು ವರ್ಷಗಳ ವೃತ್ತಿ ಜೀವನದಲ್ಲಿ ಸಲ್ಮಾನ್​ ಖಾನ್​ ಅವರು ಕಿಸ್ಸಿಂಗ್​ (Kiss) ದೃಶ್ಯಗಳಲ್ಲಿ ನಟಿಸಿಲ್ಲ. ಅಲ್ಲದೇ, ಅಂತಹ ಸೀನ್​ಗಳಲ್ಲಿ ತಾವು ಎಂದಿಗೂ ನಟಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ ಈಗ ಅವರ ಒಂದು ಫೋಟೋ ವೈರಲ್​ ಆಗಿದೆ. ನಟಿ ಕರೀಷ್ಮಾ ಕಪೂರ್​ (Karishma Kapoor) ಜೊತೆ ಅವರು ಕಿಸ್​ ಮಾಡಿದ್ದಾರೆ ಎನ್ನಲಾದ ಫೋಟೋ ಇಟ್ಟುಕೊಂಡು ಸೋಶಿಯಲ್​ ಮೀಡಿಯಾದಲ್ಲಿ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.

ಅಂದಹಾಗೆ, ವೈರಲ್​ ಆಗಿರುವ ಈ ಫೋಟೋ ‘ಜೀತ್’ ಸಿನಿಮಾದ್ದು. ‘ಜೀತ್​ ಸಿನಿಮಾದಲ್ಲಿ ಸಲ್ಮಾನ್​ ಖಾನ್​ ಅವರು ಕರೀಷ್ಮಾ ಕಪೂರ್​ ಜೊತೆ ಲಿಪ್​ ಲಾಕ್​ ದೃಶ್ಯದಲ್ಲಿ ನಟಿಸಿದ್ದಾರೆ ಎಂಬುದು ತಿಳಿದು ಅಚ್ಚರಿ ಆಯಿತು. ಯಾಕೆಂದರೆ, ಅವರು ನೋ ಕಿಸ್​ ಪಾಲಿಸಿ ಅನುಸರಿಸುವುದಾಗಿ ಹೇಳಿದ್ದಾರೆ’ ಎಂದು ನೆಟ್ಟಿಗರೊಬ್ಬರು ಈ ಫೋಟೋವನ್ನು ಶೇರ್​ ಮಾಡಿದ್ದಾರೆ.

ಸಲ್ಮಾನ್​ ಖಾನ್​ ಅವರ ಅಪ್ಪಟ ಅಭಿಮಾನಿಗಳು ಈ ಫೋಟೋದ ಹಿಂದಿನ ಅಸಲಿ ವಿಚಾರವನ್ನು ತಿಳಿಸಿ ಹೇಳಿದ್ದಾರೆ. ‘ಈ ಫೋಟೋದಲ್ಲಿ ಸಲ್ಮಾನ್​ ಖಾನ್​ ಮತ್ತು ಕರೀಷ್ಮಾ ಕಪೂರ್​ ನಿಜಕ್ಕೂ ಲಿಪ್​ ಲಾಕ್​ ಮಾಡಿಲ್ಲ. ಅವರು ನಟಿಯ ಕೆನ್ನೆಗಷ್ಟೇ ಚುಂಬಿಸಿದ್ದಾರೆ’ ಎಂಬುದು ಕೆಲವರ ವಾದ. ‘ಸಲ್ಮಾನ್​ ಖಾನ್​ ಅವರು ನೋ ಕಿಸ್​ ಪಾಲಿಸಿ ಆರಂಭಿಸಿದ್ದೇ ಈ ದೃಶ್ಯದ ನಂತರ’ ಎಂದು ಇನ್ನೂ ಕೆಲವರು ಹೇಳಿದ್ದಾರೆ.

ಇದನ್ನೂ ಓದಿ: ‘ನನ್ನ ಮದುವೆ ಆಗ್ತೀಯಾ’: ಈ ನಟಿಗೆ ಪ್ರಪೋಸ್​ ಮಾಡಿದ್ದರು ಸಲ್ಮಾನ್​ ಖಾನ್​

ಅಷ್ಟಕ್ಕೂ ಸಲ್ಮಾನ್​ ಖಾನ್​ ಅವರು ‘ನೋ ಕಿಸ್’​ ನಿಯಮ​ ಹಾಕಿಕೊಂಡಿರುವುದು ಯಾಕೆ? ಅದಕ್ಕೆ ಅವರೇ ಒಮ್ಮೆ ಉತ್ತರ ನೀಡಿದ್ದರು. ‘ಆ ರೀತಿಯ ಏನನ್ನೂ ನಾನು ಮಾಡಲ್ಲ. ಸಿನಿಮಾ ಹೀಗೆಯೇ ಇರಬೇಕು. ಆದರೆ ಒಟಿಟಿಯಿಂದ ಇಂದು ಬೇರೆಯದೇ ಟ್ರೆಂಡ್​ ನಡೆಯುತ್ತಿದೆ. ನಾನು ಅಂಥ ಕಂಟೆಂಟ್​ ವೀಕ್ಷಿಸಲ್ಲ. ಜನ ನೋಡ್ತಾರೆ ಅಂತ ಸಿನಿಮಾದವರು ಅದನ್ನೇ ಮಾಡುತ್ತಿದ್ದಾರೆ. ಎಲ್ಲರೂ ಮಾಡ್ತಾರೆ ಅಂತ ನಾನು ಮಾಡಲ್ಲ. ನನ್ನ ತಾಯಿ, ತಂದೆ, ಹಿರಿಯರು, ಕುಟುಂಬದವರು, ಮಕ್ಕಳು ಎಲ್ಲರೂ ನನ್ನ ಸಿನಿಮಾ ನೋಡುತ್ತಾರೆ. ಹಾಗಾಗಿ ನನ್ನ ಸಿನಿಮಾ ಶುದ್ಧವಾಗಿರಬೇಕು ಅಂತ ನಾನು ಬಯಸುತ್ತೇನೆ’ ಎಂದು ಸಲ್ಮಾನ್​ ಖಾನ್​ ಅವರು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ