AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋಸ, ಸುಲಿಗೆ, ಫೋರ್ಜರಿ ಆರೋಪ: ನಟ ಸನ್ನಿ ಡಿಯೋಲ್​ ವಿರುದ್ಧ ದೂರು ದಾಖಲು

ಹಿಂದಿ ಚಿತ್ರರಂಗದ ಅನೇಕ ನಿರ್ಮಾಪಕರಿಗೆ ಸನ್ನಿ ಡಿಯೋಲ್​ ಅವರಿಂದ ತೊಂದರೆ ಆಗಿದೆ. ಅಡ್ವಾನ್ಸ್​ ಹಣ ಪಡೆದು ಸಿನಿಮಾ ಮಾಡಲು ಸನ್ನಿ ಡಿಯೋಲ್​ ಹಿಂದೇಟು ಹಾಕಿದ್ದಾರೆ. ಅಲ್ಲದೇ ಅವರು ಸುಲಿಗೆ ಮತ್ತು ಫೋರ್ಜರಿ ಕೂಡ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ತಮಗೆ ಆದ ಅನ್ಯಾಯದ ವಿರುದ್ಧ ನಿರ್ಮಾಪಕರು ಪೊಲೀಸ್​ ಠಾಣೆ ಮೆಟ್ಟಿಲು ಏರಿದ್ದಾರೆ.

ಮೋಸ, ಸುಲಿಗೆ, ಫೋರ್ಜರಿ ಆರೋಪ: ನಟ ಸನ್ನಿ ಡಿಯೋಲ್​ ವಿರುದ್ಧ ದೂರು ದಾಖಲು
ಸನ್ನಿ ಡಿಯೋಲ್​
ಮದನ್​ ಕುಮಾರ್​
|

Updated on: May 30, 2024 | 10:11 PM

Share

ಬಾಲಿವುಡ್​ ನಟ ಸನ್ನಿ ಡಿಯೋಲ್​ (Sunny Deol) ಅವರ ಮೇಲೆ ಕೆಲವು ಗಂಭೀರ ಆರೋಪಗಳು ಕೇಳಿಬಂದಿವೆ. 2023ರಲ್ಲಿ ಬಿಡುಗಡೆ ಆದ ‘ಗದರ್​ 2’ (Gadar 2) ಸಿನಿಮಾದಿಂದ ಅವರ ಬೇಡಿಕೆ ಹೆಚ್ಚಾಗಿದೆ. ಆದರೆ ಅನೇಕ ನಿರ್ಮಾಪಕರಿಗೆ ಸನ್ನಿ ಡಿಯೋಲ್​ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಬಾಲಿವುಡ್​ ನಿರ್ಮಾಪಕ ಸೌರವ್​ ಗುಪ್ತ ಅವರು ಸುದ್ದಿಗೋಷ್ಠಿ ನಡೆಸಿ ಶಾಕಿಂಗ್​ ವಿಚಾರಗಳನ್ನು ಬಯಲು ಮಾಡಿದ್ದಾರೆ. ರಿಯಲ್​ ಎಸ್ಟೇಟ್​ ಕ್ಷೇತ್ರದಲ್ಲಿ ಪಳಗಿರುವ ಸೌರವ್​ ಗುಪ್ತಾ ಅವರು ಸಿನಿಮಾ ನಿರ್ಮಾಪಕನಾಗಿಯೂ ಗುರುತಿಸಿಕೊಂಡಿದ್ದಾರೆ. ಅವರಿಂದ ಕೋಟ್ಯಂತರ ರೂಪಾಯಿ ಹಣ ಪಡೆದ ಸನ್ನಿ ಡಿಯೋಲ್​ ಮೋಸ (Cheating) ಮಾಡಿದ್ದಾರೆ ಎನ್ನಲಾಗಿದೆ.

2016ರಲ್ಲಿಯೇ ಸನ್ನಿ ಡಿಯೋಲ್​ ಅವರಿಗೆ ಒಂದು ಸಿನಿಮಾದಲ್ಲಿ ನಟಿಸುವ ಸಲುವಾಗಿ ಸೌರವ್​ ಗುಪ್ತಾ ಅವರು 1 ಕೋಟಿ ರೂಪಾಯಿ ಅಡ್ವಾನ್ಸ್​ ನೀಡಿದ್ದರು. ಆದರೆ ಈ ಸಿನಿಮಾ ಈವರೆಗೆ ಸೆಟ್ಟೇರಿಲ್ಲ. ‘ನಾವು ಅವರಿಗೆ 1 ಕೋಟಿ ರೂಪಾಯಿ ಅಡ್ವಾನ್ಸ್​ ನೀಡಿದ್ದೆವು. ಆದರೆ ನಮ್ಮ ಸಿನಿಮಾ ಮಾಡುವ ಬದಲು ಅವರು ಬೇರೆ ಸಿನಿಮಾದಲ್ಲಿ ನಟಿಸಿದರು. ಅಲ್ಲದೇ ಪದೇ ಪದೇ ನನ್ನಿಂದ ಅವರು ಹೆಚ್ಚು ಹಣ ಕೇಳಿದರು. ಈತನಕ ನನ್ನಿಂದ 2.55 ಕೋಟಿ ರೂಪಾಯಿ ಹಣ ಸನ್ನಿ ಡಿಯೋಲ್​ ಅವರ ಖಾತೆಗೆ ಹೋಗಿದೆ’ ಎಂದು ಸೌರವ್​ ಗುಪ್ತಾ ಹೇಳಿದ್ದಾರೆ.

ಅಷ್ಟೇ ಅಲ್ಲದೇ ಸನ್ನಿ ಡಿಯೋಲ್​ ಅವರ ಮೇಲೆ ಫೋರ್ಜರಿ ಆರೋಪ ಕೂಡ ಎದುರಾಗಿದೆ. ‘ನಾವು ಒಪ್ಪಂದ ಪತ್ರ ಓದಿದಾಗ ಅವರು ಫೋರ್ಜರಿ ಮಾಡಿರುವುದು ತಿಳಿಯಿತು. 4 ಕೋಟಿ ರೂಪಾಯಿ ಸಂಭಾವನೆ ಬದಲಿಗೆ 8 ಕೋಟಿ ರೂಪಾಯಿ ಎಂದು ತಿದ್ದಿದ್ದರು’ ಎಂದಿದ್ದಾರೆ ಸೌರವ್​ ಗುಪ್ತಾ. ಮತ್ತೋರ್ವ ನಿರ್ಮಾಪಕ ಸುನೀಲ್​ ದರ್ಶನ್​ ಕೂಡ ತಮಗೆ ಸನ್ನಿ ಡಿಯೋಲ್​ ಅವರಿಂದ ಮೋಸ ಆಗಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಹನುಮಂತನ ಪಾತ್ರ ಮಾಡ್ತಾರಾ ಸನ್ನಿ ಡಿಯೋಲ್​? ‘ರಾಮಾಯಣ’ ಚಿತ್ರದ ಬಗ್ಗೆ ಬಿಗ್​ ನ್ಯೂಸ್​

ಕೆಲವು ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಸನ್ನಿ ಡಿಯೋಲ್​ ಅವರು ಹಲವು ವರ್ಷಗಳಿಂದ ಇಂಥ ವರ್ತನೆ ತೋರುತ್ತಾ ಬಂದಿದ್ದಾರೆ. ‘ರಾಮ ಜನ್ಮಭೂಮಿ’ ಎಂಬ ಸಿನಿಮಾದಲ್ಲಿ ನಟಿಸಲು ಅವರು 5 ಕೋಟಿ ರೂಪಾಯಿ ಸಂಭಾವನೆಗೆ ಸಹಿ ಮಾಡಿದ್ದರು. ಆದರೆ ‘ಗದರ್​ 2’ ಸಿನಿಮಾ ಹಿಟ್​ ಆದ ಬಳಿಕ ಅದೇ ‘ರಾಮ ಜನ್ಮಭೂಮಿ’ ಸಿನಿಮಾಗೆ 25 ಕೋಟಿ ರೂಪಾಯಿ ಡಿಮ್ಯಾಂಡ್​ ಮಾಡಲು ಶುರು ಮಾಡಿದರು ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಹೇಗಿದೆ ನೋಡಿ
ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಹೇಗಿದೆ ನೋಡಿ
ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು
ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್