ಆನಂದ್ ದೇವರಕೊಂಡ ನನ್ನ ಕುಟುಂಬದ ಸದಸ್ಯ ಎಂದ ರಶ್ಮಿಕಾ; ಇದರ ಒಳಾರ್ಥ ಗೊತ್ತಾಯ್ತಾ?
‘ಗಮ್ ಗಮ್ ಗಣೇಶ’ ಸಿನಿಮಾದ ಈವೆಂಟ್ ಇತ್ತೀಚೆಗೆ ನಡೆದಿದೆ. ಇದು ಆನಂದ್ ದೇವರಕೊಂಡ ಅವರ ಸಿನಿಮಾ. ‘ಬೇಬಿ’ ಬಳಿಕ ಅವರಿಗೆ ಬೇಡಿಕೆ ಹೆಚ್ಚಿದೆ. ‘ಗಮ್ ಗಮ್ ಗಣೇಶ’ ಕಾರ್ಯಕ್ರಮಕ್ಕೆ ರಶ್ಮಿಕಾ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಆನಂದ್ ಅವರು ರಶ್ಮಿಕಾನ ಇಕ್ಕಟ್ಟಿಗೆ ಸಿಲುಕಿಸಿದರು.
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ (Vijay Devarakonda) ಮಧ್ಯೆ ಪ್ರೀತಿ ಇದೆ ಎಂಬ ಗುಮಾನಿ ಮೊದಲಿನಿಂದಲೂ ಇದೆ. ಆದರೆ, ಈ ವಿಚಾರದಲ್ಲಿ ಯಾರೂ ಮೌನ ಮುರಿದಿಲ್ಲ. ರಶ್ಮಿಕಾ ಈ ವಿಚಾರದಲ್ಲಿ ಹೆಚ್ಚು ಮಾತನಾಡುವುದಿಲ್ಲ. ವಿಜಯ್ ದೇವರಕೊಂಡ ಅವರಂತೂ ಈ ರೀತಿಯ ಪ್ರಶ್ನೆಗಳನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ. ಇವೆಲ್ಲವುದರ ಮಧ್ಯೆ ಈ ಇಬ್ಬರು ಸ್ಟಾರ್ಗಳು ನಡೆದುಕೊಳ್ಳುವ ರೀತಿ ಆಗಾಗ ಅನುಮಾನ ಹುಟ್ಟುಹಾಕುತ್ತದೆ. ವಿಜಯ್ ಸಹೋದರ ಆನಂದ್ ಅವರನ್ನು ತಮ್ಮ ಕುಟುಂಬದ ಸದಸ್ಯ ಎಂದು ರಶ್ಮಿಕಾ ಕರೆದಿದ್ದಾರೆ.
‘ಗಮ್ ಗಮ್ ಗಣೇಶ’ ಸಿನಿಮಾದ ಈವೆಂಟ್ ಇತ್ತೀಚೆಗೆ ನಡೆದಿದೆ. ಇದು ಆನಂದ್ ದೇವರಕೊಂಡ ಅವರ ಸಿನಿಮಾ. ‘ಬೇಬಿ’ ಬಳಿಕ ಅವರಿಗೆ ಬೇಡಿಕೆ ಹೆಚ್ಚಿದೆ. ‘ಗಮ್ ಗಮ್ ಗಣೇಶ’ ಕಾರ್ಯಕ್ರಮಕ್ಕೆ ರಶ್ಮಿಕಾ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಆನಂದ್ ಅವರು ರಶ್ಮಿಕಾನ ಇಕ್ಕಟ್ಟಿಗೆ ಸಿಲುಕಿಸಿದರು. ಈ ವಿಡಿಯೋ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
‘ನಿಮ್ಮ ಫೇವರಿಟ್ ಸಹನಟನ ಹೆಸರು ಹೇಳಿ’ ಎಂದು ರಶ್ಮಿಕಾ ಮಂದಣ್ಣ ಬಳಿ ಕೇಳಿದರು ಆನಂದ್. ಯಾವ ಹೀರೋನ ಹೆಸರು ಹೇಳಿದರೂ ಮತ್ತೋರ್ವ ಹೀರೋನ ಅಭಿಮಾನಿಗಳಿಗೆ ಬೇಸರ ಆಗುತ್ತದೆ. ಇದರಿಂದ ರಶ್ಮಿಕಾ ಬಗ್ಗೆ ನೆಗೆಟಿವ್ ಟಾಕ್ ಶುರುವಾದರೂ ಅಚ್ಚರಿ ಏನಿಲ್ಲ. ಇದರಿಂದ ರಶ್ಮಿಕಾ ಚಿಂತೆಗೆ ಒಳಗಾದರು. ‘ನೀವು ನನ್ನ ಕುಟುಂಬದವರು. ಈ ರೀತಿ ಇಕ್ಕಟ್ಟಿಗೆ ಹೇಗೆ ಸಿಲುಕಿಸುತ್ತೀರಿ’ ಎಂದು ರಶ್ಮಿಕಾ ಪ್ರಶ್ನೆ ಮಾಡಿದ್ದಾರೆ.
‘ರೌಡಿ ಬಾಯ್ ನನ್ನ ಫೇವರಿಟ್ ಸಹನಟ’ ಎಂದು ರಶ್ಮಿಕಾ ಒಪ್ಪಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಅವರಿಗೆ ತೆಲುಗಿನಲ್ಲಿ ರೌಡಿ ಬಾಯ್ ಅನ್ನೋ ಹೆಸರಿದೆ. ಹೀಗಾಗಿ, ವಿಜಯ್ ಅವರನ್ನು ಫೇವರಿಟ್ ಹೀರೋ ಎಂದು ಕರೆದಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಇವರನ್ನು ಮತ್ತೆ ತೆರೆಮೇಲೆ ನೋಡಲು ಫ್ಯಾನ್ಸ್ ಕಾದಿದ್ದಾರೆ.
ಇದನ್ನೂ ಓದಿ: ‘ಅಭಿವೃದ್ಧಿಗೆ ಮತ ಹಾಕಿ’ ಎಂದ ರಶ್ಮಿಕಾ; ರೀಟ್ವೀಟ್ ಮಾಡಿದ ಪಿಎಂ ಮೋದಿ
ಆನಂದ್ ಅವರನ್ನು ರಶ್ಮಿಕಾ ಕುಟುಂಬ ಸದಸ್ಯ ಎಂದು ಕರೆದಿರುವುದು ಹೆಚ್ಚು ಚರ್ಚೆ ಆಗುತ್ತಿದೆ. ‘ಆನಂದ್ ದೇವರಕೊಂಡ ಅವರನ್ನು ಕುಟುಂಬದವರು ಎಂದು ರಶ್ಮಿಕಾ ಕರೆದಿದ್ದಾರೆ. ಈ ಮೂಲಕ ರಶ್ಮಿಕಾ ವಿಜಯ್ ಜೊತೆಗಿನ ಪ್ರೀತಿಯನ್ನು ಒಪ್ಪಿಕೊಂಡರಾ’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:02 am, Tue, 28 May 24