ಮಿಸ್ಟರ್ ದುಬೈ ಶಿಥಿಲ್ ಪೂಜಾರಿ ಈಗ ‘ಕರಾವಳಿ’ ಸಿನಿಮಾದಲ್ಲಿ ವಿಲನ್
ಕನ್ನಡ ಚಿತ್ರರಂಗಕ್ಕೆ ಹೊಸ ಖಳನಟನ ಎಂಟ್ರಿ ಆಗುತ್ತಿದೆ. ‘ಕರಾವಳಿ’ ಸಿನಿಮಾದಲ್ಲಿ ಶಿಥಿಲ್ ಪೂಜಾರಿ ಅವರು ವಿಲನ್ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾಗೆ ಪ್ರಜ್ವಲ್ ದೇವರಾಜ್ ಹೀರೋ. ಅವರ ಎದುರು ವಿಲನ್ ಆಗಿ ಶಿಥಿಲ್ ಪೂಜಾರಿ ಅಬ್ಬರಿಸಲಿದ್ದಾರೆ. ಈಗಾಗಲೇ ಅವರು ಮೊದಲ ಹಂತದ ಶೂಟಿಂಗ್ ಮುಗಿಸಿದ್ದಾರೆ. ಚಿತ್ರತಂಡದಿಂದ ಅವರ ಪೋಸ್ಟರ್ ಬಿಡುಗಡೆ ಆಗಿದೆ.
‘ಡೈನಾಮಿಕ್ ಪ್ರಿನ್ಸ್’ ಪ್ರಜ್ವಲ್ ದೇವರಾಜ್ (Prajwal Devaraj) ನಟನೆಯ ‘ಕರಾವಳಿ’ ಸಿನಿಮಾದ ಬಗ್ಗೆ ಅಭಿಮಾನಿಗಳ ವಲಯದಲ್ಲಿ ಹೈಪ್ ಚೆನ್ನಾಗಿದೆ. ಅದಕ್ಕೆ ಕಾರಣ ಆಗಿರುವುದು ಈ ಸಿನಿಮಾದ ಪಾತ್ರವರ್ಗ. ಸೆಟ್ಟೇರಿದ ದಿನದಿಂದಲೂ ಈ ಸಿನಿಮಾ ತಂಡ ಒಂದಿಲ್ಲೊಂದು ವಿಶೇಷ ಸುದ್ದಿಗಳನ್ನು ಹಂಚಿಕೊಳ್ಳುತ್ತಿದೆ. ‘ಕರಾವಳಿ’ (Karavali Movie) ಸಿನಿಮಾಗೆ ಗುರುದತ್ ಗಾಣಿಗ ಅವರು ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ ನಿರ್ಮಾಣದ ಜವಾಬ್ದಾರಿ ಕೂಡ ಅವರದ್ದೇ. ಈ ಚಿತ್ರದಲ್ಲಿ ವಿಲನ್ ಆಗಿ ಶಿಥಿಲ್ ಪೂಜಾರಿ (Shithil Poojary) ಅವರು ನಟಿಸುತ್ತಿದ್ದಾರೆ. ಈ ಸುದ್ದಿಯನ್ನು ಚಿತ್ರತಂಡ ನೀಡಿದೆ.
‘ಕರಾವಳಿ’ ಸಿನಿಮಾದಲ್ಲಿ ಖಳನಟ ಯಾರು ಎಂಬುದನ್ನು ತಿಳಿಸಲು ಹೊಸ ಪೋಸ್ಟರ್ ಅನಾವರಣ ಮಾಡಲಾಗಿದೆ. ಕೋಸ್ಟಲ್ ಭಾಗದ ಕಹಾನಿ ಇರುವ ಈ ಸಿನಿಮಾದಲ್ಲಿ ಖಳನಾಗಿ ಅಬ್ಬರಿಸಲು ಮಿಸ್ಟರ್ ದುಬೈ ಟೈಟಲ್ ಪಡೆದಿರುವ ಶಿಥಿಲ್ ಪೂಜಾರಿ ಅವರನ್ನು ಕರೆತರಲಾಗಿದೆ. ಈ ಸಿನಿಮಾದಲ್ಲಿ ಅವರು ಖಡಕ್ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಆ ಕಾರಣದಿಂದ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
ಈ ಸಿನಿಮಾದ ಪ್ರತಿ ಪಾತ್ರಧಾರಿಗಳನ್ನು ಡಿಫರೆಂಟ್ ಆಗಿ ಪರಿಚಯಿಸಲಾಗುತ್ತಿದೆ. ಇಂದು (ಮೇ 27) ನಿರ್ದೇಶಕ ಗುರುದತ್ ಗಾಣಿಗ ಅವರು ವಿಲನ್ ಪಾತ್ರದ ಪರಿಚಯ ಮಾಡಿಕೊಟ್ಟಿದ್ದಾರೆ. ಪ್ರಜ್ವಲ್ ದೇವರಾಜ್ ಎದುರು ಕಾದಾಡಲು ಶಿಥಿಲ್ ಪೂಜಾರಿ ಅವರನ್ನು ಆಯ್ಕೆ ಮಾಡಲಾಗಿದೆ. ಇವರು ಮೂಲತಃ ಮಂಗಳೂರಿನ ಪ್ರತಿಭೆ. ಆದರೆ ದುಬೈನಲ್ಲಿ ನೆಲೆಸಿದ್ದಾರೆ. ‘ಕರಾವಳಿ’ ಸಿನಿಮಾಗೆ ಅವರು ಆಡಿಷನ್ ಮೂಲಕ ಸೆಲೆಕ್ಟ್ ಆಗಿದ್ದಾರೆ.
View this post on Instagram
ಶಿಥಿಲ್ ಪೂಜಾರಿ ಅವರು ‘ಬೆಸ್ಟ್ ಎಂಟರ್ಟೇನರ್ ದುಬೈ’, ‘ಬೆಸ್ಟ್ ಫಿಜಿಕ್ ದುಬೈ’, ‘ಬೆಸ್ಟ್ ಪೀಪಲ್ ಚಾಯ್ಸ್ ದುಬೈ’ ಮುಂತಾದ ಟೈಟಲ್ಗಳನ್ನು ಪಡೆದುಕೊಂಡಿದ್ದಾರೆ. ಕಟ್ಟುಮಸ್ತಾದ ದೇಹ ಹೊಂದಿರುವ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ. ಅವರು ಈಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ‘ಕರಾವಳಿ’ ಸಿನಿಮಾದಲ್ಲಿ ಅವರ ಪಾತ್ರ ಹೇಗಿರಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಇದನ್ನೂ ಓದಿ: ಪ್ರಜ್ವಲ್ ದೇವರಾಜ್ ಹೊಸ ಸಿನಿಮಾಗೆ ‘ಕರಾವಳಿ’ ಶೀರ್ಷಿಕೆ; ಟೀಸರ್ ನೋಡಿ ವಾವ್ ಎಂದ ಸಿನಿಪ್ರಿಯರು
‘ಕರಾವಳಿ’ ಚಿತ್ರದಲ್ಲಿ ಶಿಥಿಲ್ ಪೂಜಾರಿ ಅವರು ವಾಲಿ ಎಂಬ ನೆಗೆಟಿವ್ ಶೇಡ್ ಇರುವ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಶೂಟಿಂಗ್ ಮುಗಿಸಿರುವ ಶಿಥಿಲ್ ಅವರು ಮತ್ತೆ 2ನೇ ಹಂತದ ಚಿತ್ರೀಕರಣದ ಸಲುವಾಗಿ ‘ಕರಾವಳಿ’ ಬಳಗವನ್ನು ಸೇರಿಕೊಳ್ಳಲಿದ್ದಾರೆ. ಶಿಥಿಲ್ ಅವರ ಫಸ್ಟ್ ಲುಕ್ ಪೋಸ್ಟರ್ ಗಮನ ಸೆಳೆಯುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಫೋಟೋ ನೋಡಿದವರು ವಾವ್ ಎನ್ನುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.