ಫಾರಂ ಹೌಸ್​ನಲ್ಲಿ ಸಲ್ಮಾನ್ ಖಾನ್ ಕೊಲ್ಲಲು ಯೋಜನೆ, ನಾಲ್ವರ ಬಂಧನ

ಸಲ್ಮಾನ್ ಖಾನ್​ರ ಪನ್ವೇಲ್​ನ ಫಾರಂ ಹೌಸ್​ನಲ್ಲಿಯೇ ಸಲ್ಮಾನ್ ಖಾನ್ ಅನ್ನು ಕೊಲ್ಲಲು ಯೋಜನೆ ಹಾಕಿಕೊಂಡಿದ್ದ ನಾಲ್ವರು ಪಾತಕಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಫಾರಂ ಹೌಸ್​ನಲ್ಲಿ ಸಲ್ಮಾನ್ ಖಾನ್ ಕೊಲ್ಲಲು ಯೋಜನೆ, ನಾಲ್ವರ ಬಂಧನ
Follow us
|

Updated on:Jun 01, 2024 | 6:52 PM

ಬಾಲಿವುಡ್ (Bollywood) ಸ್ಟಾರ್ ನಟ ಸಲ್ಮಾನ್ ಖಾನ್ (Salman Khan) ಅನ್ನು ಕೊಲ್ಲಲು ಕೆಲ ಪಾತಕಿಗಳು ಪದೇ ಪದೇ ಪ್ರಯತ್ನ ಮಾಡುತ್ತಲೇ ಇದ್ದಾರೆ. ತಿಂಗಳ ಹಿಂದಷ್ಟೆ ಸಲ್ಮಾನ್ ಖಾನ್​ರ ಮುಂಬೈನ ಗ್ಯಾಲೆಕ್ಸಿ ಅಪಾರ್ಟ್​ಮೆಂಟ್ ಮೇಲೆ ಕೆಲ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು. ಗುಂಡು ಹಾರಿಸಿದ್ದ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಮತ್ತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಸಲ್ಮಾನ್ ಖಾನ್​ರ ಪನ್ವೇಲ್ ಫಾರಂ ಹೌಸ್​ನಲ್ಲಿ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದರು ಎನ್ನಲಾಗುತ್ತಿದೆ.

ಸಲ್ಮಾನ್ ಖಾನ್​ ಮೇಲೆ ವರ್ಷಗಳಿಂದಲೂ ದ್ವೇಷ ಸಾಧಿಸುತ್ತಿರುವ ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್​ಗೆ ಸೇರಿದ ನಾಲ್ವರನ್ನು ನವೀ ಮುಂಬೈ ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ನಾಲ್ವರು ಪಾತಕಿಗಳು ಕೆಲವು ಆಘಾತಕಾರಿ ವಿಷಯಗಳನ್ನು ಬಾಯ್ಬಿಟ್ಟಿದ್ದಾರೆ. ಪನ್ವೇಲ್​ನ ಕಾಲಂಬೋಲಿ ಎಂಬಲ್ಲಿ ಈ ಪಾತಕಿಗಳು ಉಳಿದುಕೊಂಡಿದ್ದು, ಇವರ ಚಲನವಲನ ಗಮಿಸಿದ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದ ಕಾರಣ ಪೊಲೀಸರು ಇವರನ್ನು ಬಂಧಿಸಿದ್ದಾರೆ.

ಈ ನಾಲ್ವರು ಸಲ್ಮಾನ್ ಖಾನ್​ರ ಪನ್ವೇಲ್ ಫಾರಂ ಹೌಸ್, ಬಾಂದ್ರಾ ಮನೆಯ ಗಸ್ತು ತಿರುಗುತ್ತಿದ್ದರು ಎನ್ನಲಾಗಿದೆ. ಈ ನಾಲ್ವರು ಫಾರ್ಪ್ ಶೂಟರ್​ಗಳಾಗಿದ್ದು, ಪನ್ವೇಲ್ ಫಾರಂ ಹೌಸ್ ಅಥವಾ ಬಾಂದ್ರಾದ ಸಲ್ಮಾನ್ ಖಾನ್​ರ ಮನೆಯಲ್ಲಿ ಸಲ್ಮಾನ್​ರನ್ನು ಕೊಲ್ಲಲೆಂದು ಸಂಚು ರೂಪಿಸಿದ್ದರು ಎನ್ನಲಾಗಿದೆ. ಮನೆ ಮತ್ತು ಫಾರಂ ಹೌಸ್ ಮಾತ್ರವೇ ಅಲ್ಲದೆ, ಸಲ್ಮಾನ್ ಖಾನ್​ ಶೂಟಿಂಗ್ ನಡೆಸುವ ಸ್ಥಳಗಳನ್ನೂ ಸಹ ಗಸ್ತು ತಿರುಗಿ ಗುರುತು ಹಾಕಿಕೊಂಡಿದ್ದರು ಎನ್ನಲಾಗುತ್ತಿದೆ.

ಇದನ್ನೂ ಓದಿ:ಸಲ್ಮಾನ್ ಖಾನ್ ಹತ್ಯೆ ಪ್ರಕರಣದಲ್ಲಿ ಹೊಸ ಹೆಸರು ಮುನ್ನಲೆಗೆ

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪೊಲೀಸ್ ಉಪ ಆಯುಕ್ತ ವಿವೇಕ್ ಪಾನ್ಸರೆ, ‘ಪ್ರಸ್ತುತ ನಾಲ್ಕು ಜನರನ್ನು ಬಂಧಿಸಲಾಗಿದೆ. ಇವರು ಪನ್ವೇಲ್​ನಲ್ಲಿಯೇ ನೆಲೆಸಿದ್ದರು. ಮುಂಬೈ ಅಥವಾ ಪನ್ವೇಲ್​ನಲ್ಲಿ ಸಲ್ಮಾನ್ ಮೇಲೆ ದಾಳಿ ಮಾಡಲು ಯೋಜನೆ ಹಾಕಿಕೊಂಡಿದ್ದರು. ಇವರು ಬಿಷ್ಣೋಯಿ ಗ್ಯಾಂಗ್​ನವರಾಗಿದ್ದು, ಬಿಷ್ಣೋಯಿ ಈ ರೀತಿಯ ಹಲವು ಗ್ಯಾಂಗ್​ಗಳನ್ನು ಹೊಂದಿದ್ದಾನೆ. ಕೆಲವು ಗ್ಯಾಂಗ್​ಗಳನ್ನು ಸಲ್ಮಾನ್ ಖಾನ್ ಅನ್ನು ಕೊಲ್ಲಲು ನಿಯೋಜಿಸಿದ್ದಾನೆ’ ಎಂದಿದ್ದಾರೆ.

ಬಂಧಿತರನ್ನು ಅಜಯ್ ಕಶ್ಯಪ್, ಗೌರವ್ ಭಾಟಿಯಾ, ವಾಸೀಮ್ ಚಿಂಕಾ, ರಿಜ್ವಾನ್ ಖಾನ್ ಎಂದು ಗುರುತಿಸಲಾಗಿದೆ. ಅಜಯ್ ಕಶ್ಯಪ್ ಗೆ ಪಾಕಿಸ್ತಾನದೊಂದಿಗೆ ನಂಟು ಇದ್ದು, ಪಾಕಿಸ್ತಾನದ ಡಗೋರ್ ಎಂಬ ವ್ಯಕ್ತಿಯಿಂದ ಎಕೆ 47 ಬಂದೂಕು ಖರೀದಿ ಮಾಡಲು ಪ್ರಯತ್ನಗಳನ್ನು ನಡೆಸಿದ್ದ. ಸಲ್ಮಾನ್ ಖಾನ್ ಅನ್ನು ಕೊಂದ ಬಳಿಕ ಕನ್ಯಾಕುಮಾರಿಗೆ ತೆರಳಿ ಅಲ್ಲಿಂದ ಶ್ರೀಲಂಕಾಗೆ ಪರಾರಿಯಾಗಿ ಅಲ್ಲಿ ತಲೆಮರೆಸಿಕೊಳ್ಳುವ ಯೋಜನೆಯನ್ನು ಈ ನಾಲ್ವರು ಹಾಕಿಕೊಂಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:21 pm, Sat, 1 June 24

ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ