AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಿಕಂದರ್’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಎದುರು ಕಟ್ಟಪ್ಪ ಸತ್ಯರಾಜ್ ವಿಲನ್?​

ಸಲ್ಮಾನ್​ ಖಾನ್​ ಹಾಗೂ ಎ.ಆರ್​. ಮುರುಗದಾಸ್​ ಅವರ ಕಾಂಬಿನೇಷನ್​ನಲ್ಲಿ ಬರುತ್ತಿರುವ ‘ಸಿಕಂದರ್​’ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್​ ಇರಲಿದೆ. ಸಲ್ಲು ಎದುರು ವಿಲನ್​ ಯಾರು ಆಗುತ್ತಾರೆ ಎಂಬ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಒಂದು ಮಾಹಿತಿ ಹೊರಬಿದ್ದಿದೆ. ಕಟ್ಟಪ್ಪ ಅಲಿಯಾಸ್​ ಸತ್ಯರಾಜ್​ ಅವರು ‘ಸಿಕಂದರ್​’ ಚಿತ್ರದ ಖಳನಾಯಕ ಎನ್ನಲಾಗಿದೆ.

‘ಸಿಕಂದರ್’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಎದುರು ಕಟ್ಟಪ್ಪ ಸತ್ಯರಾಜ್ ವಿಲನ್?​
ಸತ್ಯರಾಜ್​, ಸಲ್ಮಾನ್​ ಖಾನ್​
ಮದನ್​ ಕುಮಾರ್​
|

Updated on: May 26, 2024 | 10:33 PM

Share

ನಟ ಸಲ್ಮಾನ್​ ಖಾನ್​ (Salman Khan) ಅವರು ಮುಂದಿನ ಸಿನಿಮಾದ ತಯಾರಿಯಲ್ಲಿ ಬ್ಯುಸಿ ಆಗಿದ್ದಾರೆ. ಈ ಬಾರಿ ಅವರು ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಎ.ಆರ್​. ಮುರುಗದಾಸ್​ ಜೊತೆ ಕೈ ಜೋಡಿಸಿದ್ದಾರೆ. ಈ ಸಿನಿಮಾಗೆ ‘ಸಿಕಂದರ್​’ (Sikandar) ಎಂದು ಶೀರ್ಷಿಕೆ ಇಡಲಾಗಿದೆ. ಸಲ್ಮಾನ್​ ಖಾನ್​ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿರುವ ಈ ಸಿನಿಮಾದ ಬಗ್ಗೆ ಒಂದು ಎಗ್ಸೈಟಿಂಗ್ ನ್ಯೂಸ್​ ಕೇಳಿಬಂದಿದೆ. ‘ಸಿಕಂದರ್​’ ಸಿನಿಮಾದಲ್ಲಿ ‘ಬಾಹುಬಲಿ’ ಖ್ಯಾತಿಯ ನಟ ಸತ್ಯರಾಜ್ (Sathyaraj)​ ಅವರು ವಿಲನ್​ ಪಾತ್ರ ಮಾಡಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಅನೇಕ ಪೋಸ್ಟ್​ಗಳು ಹರಿದಾಡುತ್ತಿವೆ.

‘ಬಾಹುಬಲಿ’ ಸಿನಿಮಾದಲ್ಲಿ ಸತ್ಯರಾಜ್​ ಅವರು ಕಟ್ಟಪ್ಪ ಎಂಬ ಪಾತ್ರ ಮಾಡಿ ಸಖತ್​ ಫೇಮಸ್​ ಆದರು. ದಕ್ಷಿಣ ಭಾರತ ಮಾತ್ರವಲ್ಲದೇ ಉತ್ತರ ಭಾರತದಲ್ಲೂ ಅವರಿಗೆ ತುಂಬ ಜನಪ್ರಿಯತೆ ಸಿಕ್ಕಿತು. ಈಗ ಅವರು ಸಲ್ಮಾನ್​ ಖಾನ್​ ಎದುರು ವಿಲನ್​ ಆಗಿ ಅಬ್ಬರಿಸಿದರೆ ಅವರ ಚಾರ್ಮ್​ ಇನ್ನಷ್ಟು ಹೆಚ್ಚಾಗಲಿದೆ. ಆದರೆ ಈ ವಿಷಯವನ್ನು ಚಿತ್ರತಂಡದವರು ಅಧಿಕೃತವಾಗಿ ಹೇಳುವುದು ಬಾಕಿ ಇದೆ. ಅದಕ್ಕಾಗಿ ಫ್ಯಾನ್ಸ್​ ಕಾದಿದ್ದಾರೆ.

ಸಲ್ಮಾನ್​ ಖಾನ್​ ನಟಿಸಿದ್ದ ‘ಟೈಗರ್​ 3’ ಸಿನಿಮಾ 2023ರಲ್ಲಿ ಬಿಡುಗಡೆ ಆಯಿತು. 2024ರಲ್ಲಿ ಅವರು ಯಾವುದೇ ಸಿನಿಮಾ ಬಿಡುಗಡೆ ಆಗುವುದಿಲ್ಲ. 2025ರಲ್ಲಿ ‘ಸಿಕಂದರ್​’ ಬಿಡುಗಡೆ ಆಗಲಿದೆ. ದೊಡ್ಡ ಗ್ಯಾಪ್​ ಆಗಲಿರುವುದರಿಂದ ಅಭಿಮಾನಿಗಳು ಹೆಚ್ಚು ಕಾತರದಿಂದ ಕಾಯುತ್ತಿರುತ್ತಾರೆ. ಅದಕ್ಕೆ ತಕ್ಕಂತೆ ಈ ಸಿನಿಮಾವನ್ನು ಮಾಡಬೇಕಿದೆ. ಸಾಜಿದ್​ ನಾಡಿಯದ್ವಾಲಾ ಅವರು ‘ಸಿಕಂದರ್​’ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ.

ಇದನ್ನೂ ಓದಿ: ‘ನನ್ನ ಮದುವೆ ಆಗ್ತೀಯಾ’: ಈ ನಟಿಗೆ ಪ್ರಪೋಸ್​ ಮಾಡಿದ್ದರು ಸಲ್ಮಾನ್​ ಖಾನ್​

‘ಸಿಕಂದರ್​’ ಸಿನಿಮಾದಲ್ಲಿ ಸೌತ್​ ಮಂದಿಯ ಪ್ರಾಬಲ್ಯ ಇರಲಿದೆ. ಎ.ಆರ್​. ಮುರುಗದಾಸ್​ ಅವರು ದಕ್ಷಿಣ ಭಾರತದವರು. ವಿಲನ್​ ಪಾತ್ರ ಮಾಡುತ್ತಾರೆ ಎನ್ನಲಾದ ಸತ್ಯರಾಜ್​ ಕೂಡ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೆಸರು ಮಾಡಿದವರು. ಅದೇ ರೀತಿ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಕೂಡ ದಕ್ಷಿಣ ಭಾರತದ ಪ್ರತಿಭೆ. ಆ ಕಾರಣದಿಂದಲೂ ‘ಸಿಕಂದರ್​’ ಸಿನಿಮಾ ವಿಶೇಷ ಎನಿಸಿಕೊಳ್ಳಲಿದೆ.

ಕೆಲವೇ ದಿನಗಳ ಹಿಂದೆ ಸತ್ಯರಾಜ್​ ಬಗ್ಗೆ ಒಂದು ಗಾಸಿಪ್​ ಹಬ್ಬಿತ್ತು. ನರೇಂದ್ರ ಮೋದಿ ಬಯೋಪಿಕ್​ನಲ್ಲಿ ಸತ್ಯರಾಜ್​ ಅವರು ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಆ ಸುದ್ದಿ ನಿಜವಲ್ಲ ಎಂದು ಸ್ವತಃ ಸತ್ಯರಾಜ್​ ಅವರು ಸ್ಪಷ್ಟಪಡಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More