ಮೌನಿ ರಾಯ್ ರೆಸ್ಟೋರೆಂಟ್ ಸಖತ್ ದುಬಾರಿ; ಜಾಮೂನು, ಭೇಲ್​ ಪುರಿಗೆ 400 ರೂಪಾಯಿ

ಮೌನಿ ರಾಯ್ ಅವರ 'ಬದ್ಮಾಶ್' ರೆಸ್ಟೋರೆಂಟ್ ಬೆಂಗಳೂರು ಸೇರಿದಂತೆ ಹಲವೆಡೆ ದುಬಾರಿ ಬೆಲೆಗಳಿಂದ ಸುದ್ದಿಯಾಗಿದೆ. ಜಾಮೂನು, ಅವಕಾಡೋ ಭೇಲ್ ಪುರಿ, ತಂದೂರಿ ರೋಟಿ ಸೇರಿದಂತೆ ಹಲವು ತಿನಿಸುಗಳಿಗೆ 300 ರೂ.ನಿಂದ 800 ರೂ.ವರೆಗೆ ಬೆಲೆ ಇದೆ. ಸೆಲೆಬ್ರಿಟಿಗಳ ಹೋಟೆಲ್‌ಗಳಿಗೆ ಅಭಿಮಾನಿಗಳು ಖಂಡಿತಾ ಬರುತ್ತಾರೆ ಎಂಬ ನಂಬಿಕೆಯೇ ಈ ದುಬಾರಿ ಬೆಲೆಗೆ ಕಾರಣ ಎನ್ನಲಾಗಿದೆ.

ಮೌನಿ ರಾಯ್ ರೆಸ್ಟೋರೆಂಟ್ ಸಖತ್ ದುಬಾರಿ; ಜಾಮೂನು, ಭೇಲ್​ ಪುರಿಗೆ 400 ರೂಪಾಯಿ
ಮೌನಿ ರಾಯ್

Updated on: Oct 27, 2025 | 12:49 PM

ಎಲ್ಲಾ ಸೆಲೆಬ್ರಿಟಿಗಳು ಸಿನಿಮಾ ರಂಗದಲ್ಲಿ ಯಶಸ್ಸು ಕಂಡ ಬಳಿಕ ಯಾವುದಾದರೂ ಒಂದು ಉದ್ಯಮ ಆರಂಭಿಸುತ್ತಾರೆ. ಬಾಲಿವುಡ್​ನಲ್ಲಿ ಈ ಟ್ರೆಂಡ್ ಜೋರಾಗಿದೆ. ಅನೇಕ ಸೆಲೆಬ್ರಿಟಿಗಳು ಬಟ್ಟೆ ಬ್ರ್ಯಾಂಡ್ ಹೊಂದಿದ್ದಾರೆ. ಇನ್ನೂ ಕೆಲವು ಸೆಲೆಬ್ರಿಟಿಗಳು ತಮ್ಮದೇ ಹೋಟೆಲ್ ಉದ್ಯಮ ಹೊಂದಿದ್ದಾರೆ. ಇದಕ್ಕೆ ಮೌನಿ ರಾಯ್ (Mouni Roy) ಕೂಡ ಹೊರತಾಗಿಲ್ಲ. ಅವರು ಬೆಂಗಳೂರು, ಮುಂಬೈ ಸೇರಿದಂತೆ ದೇಶದ ವಿವಿಧೆಡೆ ಆರು ರೆಸ್ಟೋರೆಂಟ್ ಹೊಂದಿದ್ದಾರೆ. ಈ ರೆಸ್ಟೋರೆಂಟ್​ನ ತಿನಿಸುಗಳ ಬೆಲೆ ಅನೇಕರಿಗೆ ಅಚ್ಚರಿ ಮೂಡಿಸಿದೆ.

‘ಬದ್​ಮಾಶ್’ ಅನ್ನೋದು ಮೌನಿ ರಾಯ್ ರೆಸ್ಟೋರೆಂಟ್ ಹೆಸರು. ಬೆಂಗಳೂರಿನ ಸರ್ಜಾಪುರದಲ್ಲಿ ಅವರು 2023ರಲ್ಲಿ ಮೊದಲ ಔಟ್​ಲೆಟ್ ಆರಂಭಿಸಿದರು. ಈಗ ಮುಂಬೈ, ಕೋಲ್ಕತ್ತ ಸೇರಿದಂತೆ ಆರು ಕಡೆಗಳಲ್ಲಿ ಅವರ ಹೋಟೆಲ್ ಇದೆ. ಈ ರೆಸ್ಟೋರೆಂಟ್​​ಗೆ ಭೇಟಿ ನೀಡಬೇಕು ಎಂದರೆ ನೀವು ದೊಡ್ಡ ಮೊತ್ತ ತೆತ್ತಲು ರೆಡಿ ಇರಬೇಕು. ಇಲ್ಲಿನ ತಿಂಡಿಗಳ ಬೆಲೆ 300 ರೂಪಾಯಿಯಿಂದ ಆರಂಭ ಆಗಿ 800 ರೂಪಾಯಿವರೆಗೆ ಇದೆ.

ಇಂಡಿಯನ್ ಎಕ್ಸ್​​ಪ್ರೆಸ್ ವರದಿ ಮಾಡಿದ ಪ್ರಕಾರ, ಜಾಮೂನಿನ ಬೆಲೆ 410 ರೂಪಾಯಿ. ಅವಕಾಡೋ ಭೇಲ್ ಬೆಲೆ 395 ರೂಪಾಯಿ.  ಮಸಾಲಾ ಪೀನಟ್, ಮಸಾಲಾ ಪಾಪಡ್, ಕ್ರಿಸ್ಪಿ ಕಾರ್ನ್ ಹಾಗು ಶೇವ್ ಪುರಿ ಬೆಲೆ 295 ರೂಪಾಯಿ. ಸಿಗಡಿಯಿಂದ ಮಾಡಿದ ತಿಂಡಿಗಳ ಬೆಲೆ 795 ರೂಪಾಯಿ. ತಂದೂರಿ ರೋಟಿ ಒಂದಕ್ಕೆ 105 ರೂಪಾಯಿ. ನಾನ್ ಬೆಲೆ 115 ರೂಪಾಯಿ.

ತಾವು ಆರಂಭಿಸಿದ ಹೋಟೆಲ್ ಎಂಬ ಕಾರಣಕ್ಕೆ ಅವರ ಫ್ಯಾನ್ಸ್ ಬಂದೇ ಬರುತ್ತಾರೆ ಎಂಬ ನಂಬಿಕೆ ಸೆಲೆಬ್ರಿಟಿಗಳದ್ದು. ಈ ಕಾರಣದಿಂದಲೇ ದುಬಾರಿ ಬೆಲೆಯನ್ನು ನಿಗದಿ ಮಾಡಲಾಗುತ್ತದೆ. ಶಿಲ್ಪಾ ಶೆಟ್ಟಿ ಅವರು ಮುಂಬೈನಲ್ಲಿ ತಮ್ಮದೇ ಆದ ಹೋಟೆಲ್ ಹೊಂದಿದ್ದಾರೆ. ಈ ಹೋಟೆಲ್​​ನಿಂದ ಶಿಲ್ಪಾ ಕೋಟಿ ಕೋಟಿ ಬಿಸ್ನೆಸ್ ಮಾಡುತ್ತಿದೆ.

ಇದನ್ನೂ ಓದಿ: ವೇದಿಕೆಯಲ್ಲಿ ಕೆಜಿಎಫ್ ಹಾಡಿಗೆ ಮೌನಿ ರಾಯ್ ಭರ್ಜರಿ ಡ್ಯಾನ್ಸ್

ಮೌನಿ ರಾಯ್ ಅವರು 2006ರಲ್ಲಿ ಚಿತ್ರರಂಗಕ್ಕೆ ಬಂದರು. ಅವರು ಸಿನಿಮಾ ಮಾಡಿದ್ದು ಕಡಿಮೆ. ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡುತ್ತಾ ಗಮನ ಸೆಳೆಯುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.