ರಾಮಾಯಣ: ಶ್ರೀರಾಮನನ್ನು ಆ್ಯಕ್ಷನ್ ಹೀರೋ ಮಾಡಿದ್ದಕ್ಕೆ ಮುಕೇಶ್ ಖನ್ನಾ ಆಕ್ರೋಶ

‘ರಾಮಾಯಣ’ ಸಿನಿಮಾದ ಮೊದಲ ಭಾಗವು ಈ ವರ್ಷದ ದೀಪಾವಳಿಗೆ ತೆರೆಕಾಣಲಿದೆ. ಟ್ರೇಲರ್ ನೋಡಿದ ಬಳಿಕ ‘ಶಕ್ತಿಮಾನ್’ ಖ್ಯಾತಿಯ ನಟ ಮುಕೇಶ್ ಖನ್ನಾ ಅವರು ಈ ಸಿನಿಮಾದ ದೃಶ್ಯಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಮನ ಪಾತ್ರವನ್ನು ತೋರಿಸಿರುವ ರೀತಿಯನ್ನು ಕಂಡು ಅವರು ಟೀಕೆ ವ್ಯಕ್ತಪಡಿಸಿದ್ದಾರೆ.

ರಾಮಾಯಣ: ಶ್ರೀರಾಮನನ್ನು ಆ್ಯಕ್ಷನ್ ಹೀರೋ ಮಾಡಿದ್ದಕ್ಕೆ ಮುಕೇಶ್ ಖನ್ನಾ ಆಕ್ರೋಶ
Ranbir Kapoor, Mukesh Khanna

Updated on: Oct 01, 2026 | 9:21 PM

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದಲ್ಲಿ ನಟ ರಣಬೀರ್ ಕಪೂರ್ ಅವರನ್ನು ಶ್ರೀರಾಮನ ಪಾತ್ರಕ್ಕೆ ಆಯ್ಕೆ ಮಾಡಿರುವುದು ಹಾಗೂ ಚಿತ್ರದಲ್ಲಿ ರಾಮನನ್ನು ಬಿಂಬಿಸಿರುವ ರೀತಿಯನ್ನು ಹಿರಿಯ ನಟ ಮುಕೇಶ್ ಖನ್ನಾ ಖಾರವಾಗಿ ಟೀಕಿಸಿದ್ದಾರೆ. ಶ್ರೀರಾಮನು ಮರ್ಯಾದಾ ಪುರುಷೋತ್ತಮನೇ ಹೊರತು ಮಾಸ್ ಆ್ಯಕ್ಷನ್ ಹೀರೋ ಅಲ್ಲ ಎಂದು ಅವರು ಕಿಡಿಕಾರಿದ್ದಾರೆ. ‘ಬಾಲಿವುಡ್ ನೌ’ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.

‘ಶಕ್ತಿಮಾನ್’ ಖ್ಯಾತಿಯ ಮುಕೇಶ್ ಖನ್ನಾ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಹಿಂದೇಟು ಹಾಕುವವರಲ್ಲ. ‘ಚಿತ್ರದಲ್ಲಿ ಶ್ರೀರಾಮ ಮರ ಹತ್ತಿ ಬಾಣ ಬಿಡುವಂತಹ ಆ್ಯಕ್ಷನ್ ದೃಶ್ಯಗಳನ್ನು ತೋರಿಸಲಾಗಿದೆ. ಯಾವುದೇ ಪೌರಾಣಿಕ ಗ್ರಂಥಗಳಲ್ಲಿ ಅಥವಾ ರಾಮಲೀಲೆಯಲ್ಲಿ ಇಂತಹ ದೃಶ್ಯಗಳ ಉಲ್ಲೇಖವಿಲ್ಲ. ನೀವು ಶ್ರೀರಾಮನನ್ನು ಸಲ್ಮಾನ್ ಖಾನ್, ಅಮಿತಾಭ್ ಬಚ್ಚನ್ ಅಥವಾ ರಜನಿಕಾಂತ್ ಅವರಂತೆ ಬಿಂಬಿಸಲು ಹೊರಟಿದ್ದೀರಿ. ಆದರೆ ರಾಮ ಎಂದರೆ ರಾಮನೇ. ಅವನು ಮರ್ಯಾದಾ ಪುರುಷೋತ್ತಮ. ಸಮುದ್ರಕ್ಕೂ ಕೈಜೋಡಿಸಿ ಪ್ರಾರ್ಥಿಸುತ್ತಿದ್ದ ಶಾಂತಮೂರ್ತಿ ಆತ’ ಎಂದು ಅವರು ಹೇಳಿದ್ದಾರೆ.

‘ಶ್ರೀರಾಮನನ್ನು ಕ್ಲಿಂಟ್ ಈಸ್ಟ್‌ವುಡ್ ಮಾದರಿಯ ಆ್ಯಕ್ಷನ್ ಮ್ಯಾನ್ ರೀತಿ ತೋರಿಸಿದರೆ, ಅವನು ಯುದ್ಧ ಮಾಡಿದ ರೀತಿಯೇ ಬೇರೆ ಎನಿಸುತ್ತದೆ. ರಾಮ ಈ ರೀತಿ ಒಬ್ಬನೇ ಹೋರಾಡುವುದಾಗಿದ್ದರೆ, ಅವನಿಗೆ ವಾನರ ಸೇನೆಯ ಸಹಾಯ ಏಕೆ ಬೇಕಾಗುತ್ತಿತ್ತು?’ ಎಂದು ಮುಖೇಶ್ ಖನ್ನಾ ಅವರು ಪ್ರಶ್ನಿಸಿದ್ದಾರೆ. ಅವರ ಈ ಮಾತಿನಿಂದಾಗಿ ಹೊಸ ಚರ್ಚೆ ಶುರುವಾಗಿದೆ.

‘ರಾಮಾಯಣ’ ಚಿತ್ರದಲ್ಲಿನ ವಿಎಫ್‌ಎಕ್ಸ್ ಬಳಕೆಯನ್ನೂ ಮುಖೇಶ್ ಖನ್ನಾ ಅವರು ಟೀಕಿಸಿದ್ದಾರೆ. ‘ಈ ಚಿತ್ರವನ್ನು ಹಾಲಿವುಡ್​ನ ‘ಸ್ಟಾರ್ ವಾರ್ಸ್’ಗೆ ಹೋಲಿಸಿ ಪ್ರದರ್ಶಿಸಬಹುದು, ಹಣವನ್ನೂ ಗಳಿಸಬಹುದು. ಆದರೆ ಭಾರತದಲ್ಲಿ ಭಾರತೀಯರ ಶ್ರದ್ಧೆ ಮತ್ತು ಭಕ್ತಿಗೆ ತಕ್ಕಂತೆ ಸಿನಿಮಾ ನಿರ್ಮಿಸಬೇಕು. ನಮಗೆ ಸ್ಪೆಷಲ್ ಎಫೆಕ್ಟ್ಸ್ ಗಿಂತ ಸಂಸ್ಕೃತಿ ಮತ್ತು ಗೌರವ ಮುಖ್ಯ’ ಎಂದು ಮುಖೇಶ್ ಖನ್ನಾ ಹೇಳಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’ದ ಇಂಗ್ಲೀಷ್ ಮತ್ತು ಹಿಂದಿ ಆವೃತ್ತಿಯಲ್ಲಿ ಇರಲಿದೆ ಭಿನ್ನತೆ

ಸುಮಾರು 4 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ‘ರಾಮಾಯಣ’ ಸಿನಿಮಾವನ್ನು ನಮಿತ್ ಮಲ್ಹೋತ್ರಾ ಮತ್ತು ಯಶ್ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ರಣಬೀರ್ ಕಪೂರ್ ಅವರು ಶ್ರೀರಾಮನಾಗಿ ಮತ್ತು ಪರಶುರಾಮನಾಗಿ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಾಯಿ ಪಲ್ಲವಿ (ಸೀತೆ), ಯಶ್ (ರಾವಣ), ಸನ್ನಿ ಡಿಯೋಲ್ (ಹನುಮಂತ), ರವಿ ದುಬೆ (ಲಕ್ಷ್ಮಣ) ಸೇರಿದಂತೆ ದೊಡ್ಡ ತಾರಾಗಣವೇ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us