AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾವಣನಾಗಿ ಯಶ್, ‘ರಾಮಾಯಣ’ದಿಂದ ಹೊಸ ಪೋಸ್ಟರ್ ರಿಲೀಸ್

ಸಿನಿಮಾದ ಒಂದು ಹಂತದ ಪ್ರಚಾರ ಈಗಾಗಲೇ ಮುಗಿದಿದ್ದು, ಇದೀಗ ಎರಡನೇ ಹಂತದ ಪ್ರಚಾರವನ್ನು ಚಿತ್ರತಂಡ ಆರಂಭಿಸಿದೆ. ಇತ್ತೀಚೆಗಷ್ಟೆ ಸಿನಿಮಾದ ಪ್ರಚಾರ ಕಾರ್ಯಕ್ರಮವೊಂದನ್ನು ಚಿತ್ರತಂಡ ಹಮ್ಮಿಕೊಂಡಿತ್ತು. ಅದರ ಬೆನ್ನಲ್ಲೆ ಇದೀಗ ಸಿನಿಮಾದ ಪೋಸ್ಟರ್​​ಗಳನ್ನು ಚಿತ್ರತಂಡ ರಿಲೀಸ್ ಮಾಡಿದೆ. ಯಶ್ ಅವರ ಪ್ರತ್ಯೇಕ ಪೋಸ್ಟರ್ ಜೊತೆಗೆ ರಣ್​​ಬೀರ್ ಕಪೂರ್, ಸಾಯಿ ಪಲ್ಲವಿ ಅವರ ಪೋಸ್ಟರ್​​ಗಳನ್ನು ಚಿತ್ರತಂಡ ರಿಲೀಸ್ ಮಾಡಿದೆ.

ರಾವಣನಾಗಿ ಯಶ್, ‘ರಾಮಾಯಣ’ದಿಂದ ಹೊಸ ಪೋಸ್ಟರ್ ರಿಲೀಸ್
Yash Ramayana
ಮಂಜುನಾಥ ಸಿ.
|

Updated on: Sep 27, 2026 | 4:52 PM

Share

ನಮಿತ್ ಮಲ್ಹೋತ್ರಾ ನಿರ್ಮಿಸಿ ನಿತೇಶ್ ತಿವಾರಿ ನಿರ್ದೇಶನ ಮಾಡಿರುವ ‘ರಾಮಾಯಣ’ ಭಾರತದ ಬಹು ನಿರೀಕ್ಷಿತ ಸಿನಿಮಾ ಆಗಿದೆ. ಈ ಸಿನಿಮಾ, ವಿಶ್ವ ಚಿತ್ರರಂಗಕ್ಕಾಗಿ ನಿರ್ಮಾಣ ಆಗಿರುವ ಭಾರತದ ಸಿನಿಮಾ ಆಗಿದ್ದು, ಸಿನಿಮಾ ಅನ್ನು ಭಾರಿ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ನಿರ್ಮಾಪಕ ನಮಿತ್ ಮಲ್ಹೋತ್ರಾ ವೇದಿಕೆ ಸಜ್ಜುಗೊಳಿಸಿದ್ದಾರೆ. ಸಿನಿಮಾದ ಒಂದು ಹಂತದ ಪ್ರಚಾರ ಈಗಾಗಲೇ ಮುಗಿದಿದ್ದು, ಇದೀಗ ಎರಡನೇ ಹಂತದ ಪ್ರಚಾರವನ್ನು ಚಿತ್ರತಂಡ ಆರಂಭಿಸಿದೆ. ಇತ್ತೀಚೆಗಷ್ಟೆ ಸಿನಿಮಾದ ಪ್ರಚಾರ ಕಾರ್ಯಕ್ರಮವೊಂದನ್ನು ಚಿತ್ರತಂಡ ಹಮ್ಮಿಕೊಂಡಿತ್ತು. ಅದರ ಬೆನ್ನಲ್ಲೆ ಇದೀಗ ಸಿನಿಮಾದ ಪೋಸ್ಟರ್​​ಗಳನ್ನು ಚಿತ್ರತಂಡ ರಿಲೀಸ್ ಮಾಡಿದೆ. ಯಶ್ ಅವರ ಪ್ರತ್ಯೇಕ ಪೋಸ್ಟರ್ ಜೊತೆಗೆ ರಣ್​​ಬೀರ್ ಕಪೂರ್, ಸಾಯಿ ಪಲ್ಲವಿ ಅವರ ಪೋಸ್ಟರ್​​ಗಳನ್ನು ಚಿತ್ರತಂಡ ರಿಲೀಸ್ ಮಾಡಿದೆ.

ರಾಮನಾಗಿ ರಣಬೀರ್, ಸೀತೆಯಾಗಿ ಸಾಯಿ ಪಲ್ಲವಿ ಮತ್ತು ವನವಾಸದಲ್ಲಿದ್ದಾಗ ಕಾಡಿನಲ್ಲಿ ಲಕ್ಷ್ಮಣನಾಗಿ ರವಿ ದುಬೆ ಇರುವ ಪೋಸ್ಟರ್ ಅನ್ನು ರಿಲೀಸ್ ಮಾಡಿದ್ದು, ಪೋಸ್ಟರ್​​ಗೆ ‘ಧರ್ಮದಲ್ಲಿ ಎಂದೆಂದಿಗೂ ಒಟ್ಟಿಗೆ’ ಎಂಬ ಕ್ಯಾಪ್ಷನ್ ಬರೆದಿದ್ದಾರೆ. ಈ ಪೋಸ್ಟರ್‌ನಲ್ಲಿ ಮೂವರೂ ಸರಳ, ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿ ಒಟ್ಟಿಗೆ ನಿಂತಿರುವುದನ್ನು ಕಾಣಬಹುದು. ಯಶ್ ಅವರ ಪೋಸ್ಟರ್ ಅನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಿದ್ದು, ಅದರಲ್ಲಿ ಯಶ್ ಅವರ ರಾವಣ ಪಾತ್ರವು ತನ್ನ ಸುವರ್ಣ ಲಂಕೆಯಲ್ಲಿ ಕಾಣಿಸಿಕೊಂಡಿದೆ. ಕಪ್ಪು ಬಟ್ಟೆ ಧರಿಸಿ, ಚಿನ್ನದ ಆಭರಣಗಳಿಂದ ಅಲಂಕೃತಗೊಂಡಿರುವ ಅವರು ತಮ್ಮ ಅರಮನೆಯ ಮುಂದೆ ನಿಂತು ಭಯಾನಕವಾಗಿ ಕಾಣುತ್ತಾರೆ. ‘ಮೂರು ಲೋಕಗಳ ಆಡಳಿತಗಾರ, ರಾವಣ’ ಎಂಬ ಕ್ಯಾಪ್ಷನ್ ಜೊತೆಗೆ ‘ನಮ್ಮ ಸತ್ಯ. ನಮ್ಮ ಇತಿಹಾಸ’ ಎಂದೂ ಸಹ ಸೇರಿಸಲಾಗಿದೆ.

ಎರಡೂ ಪೋಸ್ಟರ್​​ಗಳಿಗೆ ಧನಾತ್ಮಕ ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ. ಯಶ್ ಪೋಸ್ಟರ್ ಬಗ್ಗೆ ಅಂತೂ ಬಹಳ ಜನ ಧನಾತ್ಮಕವಾಗಿ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಯಶ್ ಅವರು ರಾವಣನ ಪಾತ್ರಕ್ಕೆ ಅದ್ಭುತವಾಗಿ ಸೂಟ್ ಆಗಿದ್ದಾರೆ. ಸರಿಯಾಗ ಗಾಂಭೀರ್ಯ ಮತ್ತು ಭಯಾನಕತೆಯನ್ನು ಅವರು ಪಾತ್ರಕ್ಕೆ ತಂದಿರುವುದು ಪೋಸ್ಟರ್​​ನಿಂದ ತಿಳಿಯುತ್ತಿದೆ ಎಂದೆಲ್ಲ ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:ಯಶ್ ಸಿನಿಮಾ ಕಾಪಿ ಮಾಡಲು ಹೋಗಿ ಸೋತ ‘ಪ್ಯಾರಡೈಸ್​’

‘ರಾಮಾಯಣ’ ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಎನ್ನಲಾಗುತ್ತಿದೆ. ವಿಶ್ವ ವಿಖ್ಯಾತ ಡಿನಿಜ್ (DNEG) ಸಂಸ್ಥೆಯ ಮಾಲೀಕ ನಮಿತ್ ಮಲ್ಹೋತ್ರಾ ಅವರು ಈ ಸಿನಿಮಾದ ನಿರ್ಮಾಪಕರಾಗಿದ್ದಾರೆ. ಸಿನಿಮಾ ಅನ್ನು ವಿಶ್ವ ಸಿನಿಮಾ ಮಾರುಕಟ್ಟೆಯಲ್ಲಿ ಭಾರಿ ಅದ್ಧೂರಿಯಾಗಿ ರಿಲೀಸ್ ಮಾಡುತ್ತಿದ್ದಾರೆ. ಇದಕ್ಕಾಗಿ ವಿದೇಶಗಳಲ್ಲಿಯೇ ಸಿನಿಮಾದ ಪ್ರಚಾರವನ್ನು ಅದ್ಧೂರಿಯಾಗಿ ಮಾಡಲಾಗುತ್ತಿದೆ. ಸಿನಿಮಾವನ್ನು ನಿತೀಶ್ ತಿವಾರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಆಸ್ಕರ್ ವಿಜೇತರಾದ ಎಆರ್ ರೆಹಮಾನ್ ಮತ್ತು ಹಾನ್ಸ್ ಜೀಮರ್ ಸಂಗೀತ ನೀಡಿದ್ದಾರೆ. ಸಿನಿಮಾ ಇದೇ ದೀಪಾವಳಿಗೆ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More