AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್ ಸಿನಿಮಾ ಕಾಪಿ ಮಾಡಲು ಹೋಗಿ ಸೋತ ‘ಪ್ಯಾರಡೈಸ್​’

ನಾನಿ ಅಭಿನಯದ ‘ಪ್ಯಾರಡೈಸ್’ ಸಿನಿಮಾ ಭಾರಿ ಹೈಪ್ ಮಧ್ಯೆ ಬಿಡುಗಡೆಯಾಗಿದ್ದರೂ, ಮೊದಲ ದಿನವೇ ತೀವ್ರ ನೆಗೆಟಿವ್ ವಿಮರ್ಶೆಗಳನ್ನು ಎದುರಿಸುತ್ತಿದೆ. ಸಿನಿಮಾದಲ್ಲಿ ಅತಿಯಾದ ವೈಲೆನ್ಸ್ ಹಾಗೂ ದ್ವಿತೀಯಾರ್ಧದ ಕಥೆಯ ಬಗ್ಗೆ ಪ್ರೇಕ್ಷಕರು ಅಸಮಾಧಾನ ಹೊರಹಾಕಿದ್ದು, ಪ್ರಮುಖ ದೃಶ್ಯಗಳು ಮತ್ತು ಸೆಟ್‌ಗಳು ರಾಕಿ ಬಾಯ್ ‘ಕೆಜಿಎಫ್’ ಚಿತ್ರವನ್ನು ಹೋಲುತ್ತಿವೆ ಎಂದು ನೆಟ್ಟಿಗರು ಆರೋಪಿಸುತ್ತಿದ್ದಾರೆ.

ಯಶ್ ಸಿನಿಮಾ ಕಾಪಿ ಮಾಡಲು ಹೋಗಿ ಸೋತ ‘ಪ್ಯಾರಡೈಸ್​’
ಯಶ್-ನಾನಿ
ರಾಜೇಶ್ ದುಗ್ಗುಮನೆ
|

Updated on:Sep 25, 2026 | 10:58 AM

Share

ಮುಖ್ಯಾಂಶಗಳು

  • ಬಿಡುಗಡೆಯಾದ ಮೊದಲ ದಿನವೇ ನೆಗೆಟಿವ್ ಟಾಕ್
  • ಸೋಲಿನ ಸುಳಿಯಲ್ಲಿ ‘ಪ್ಯಾರಡೈಸ್’?
  • ಕೆಜಿಎಫ್ ಕಾಪಿ ಆರೋಪ

ನಾನಿ ನಟನೆಯ ‘ಪ್ಯಾರಡೈಸ್’ ಸಿನಿಮಾ ಸೂಪರ್ ಹಿಟ್ ಆಗಬಹುದು ಎಂದು ಎಲ್ಲರೂ ಭಾವಿಸಿದ್ದರು. ಸಿನಿಮಾದ ಮೇಲಿನ ಹೈಪ್ ಅಷ್ಟಿತ್ತು. ಆದರೆ, ನಿರೀಕ್ಷೆ ಹುಸಿಯಾಗಿದೆ. ಸಿನಿಮಾ ಮೊದಲ ದಿನವೇ ಹೀನಾಯ ವಿಮರ್ಶೆ ಪಡೆದು ಸೋಲಿನ ಸುಳಿಯಲ್ಲಿ ಸಿಲುಕುವ ಭೀತಿಯಲ್ಲಿ ಇದೆ. ಈ ಚಿತ್ರದ ಮೊದಲ ದಿನದ ಗಳಿಕೆ ಏನೋ ಜೋರಾಗಿಯೇ ಆಗಿದೆ. ಆದರೆ, ಈ ಅಬ್ಬರ ಹೆಚ್ಚು ದಿನ ಇರೋದು ಅನುಮಾನ. ಈಗ ‘ಪ್ಯಾರಡೈಸ್’ ದೃಶ್ಯಗಳು ‘ಕೆಜಿಎಫ್’ ಹಾಗೂ ‘ಕೆಜಿಫ್ 2’ ಸಿನಿಮಾಗಳಿಂದ ಸ್ಫೂರ್ತಿ ಪಡೆದಿದೆ ಎಂದು ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಆರೋಪಿಸುತ್ತಿದ್ದಾರೆ.

‘ಪ್ಯಾರಡೈಸ್’ ಸಿನಿಮಾ ಸೆಪ್ಟೆಂಬರ್ 24ರಂದು ರಿಲೀಸ್ ಆಗಿದೆ. ಮೊದಲ ದಿನವೇ ಸಿನಿಮಾ ನೋಡಿದವರು ನಾನಿ ಚಿತ್ರವನ್ನು ಒಪ್ಪಿಲ್ಲ. ಸಿನಿಮಾದಲ್ಲಿ ಅಗತ್ಯಕ್ಕೆ ಮೀರಿ ವೈಲೆನ್ಸ್ ಇದೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಚಿತ್ರದ ಕಥೆಯ ಬಗ್ಗೆ ಹಾಗೂ ದ್ವಿತೀಯಾರ್ಧದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ದ್ವಿತೀಯಾರ್ಧದಲ್ಲಿ ಬರುವ ಅನಗತ್ಯ ವಿಷಯಗಳ ಬಗ್ಗೆ ತಕರಾರು ತೆಗೆದಿದ್ದಾರೆ.

ಇನ್ನು, ‘ಪ್ಯಾರಡೈಸ್’ ಸಿನಿಮಾದಲ್ಲಿ ಬರುವ ಅನೇಕ ದೃಶ್ಯಗಳು ಯಶ್ ಸಿನಿಮಾ ಆಧರಿಸಿವೆ ಎಂಬುದು ಕೆಲವರ ಆರೋಪ. ಇಂಟರ್ವಲ್ ಬ್ಲಾಕ್​ನಲ್ಲಿ ಬರುವ ತಲೆ ಕತ್ತರಿಸೋ ದೃಶ್ಯ ಸಂಪೂರ್ಣವಾಗಿ ‘ಕೆಜಿಎಫ್’ ಕ್ಲೈಮ್ಯಾಕ್ಸ್​​ನಲ್ಲಿ ಗರುಡನ ತಲೆಯನ್ನು ರಾಕಿ ಕತ್ತರಿಸುವ ದೃಶ್ಯವನ್ನು ಸ್ಫೂರ್ತಿಯಾಗಿ ಪಡೆದಿದೆ ಎಂದು ಕೆಲವರು ಆರೋಪಿಸಿದ್ದಾರೆ.

ಇದನ್ನೂ ಓದಿ: ‘ಪ್ಯಾರಡೈಸ್’ ವಿಮರ್ಶೆ; ಅಸ್ಮಿತೆಯ ಹೋರಾಟದಲ್ಲಿ ನರಕದ ಅನುಭವ

ಇನ್ನು, ಪ್ಯಾರಡೈಸ್ ಸಿನಿಮಾದಲ್ಲಿ ಬರುವ ಸೆಟ್​​ಗಳು ನರಾಚಿಯಲ್ಲಿ ಬರುವ ಮನೆಗಳನ್ನು ಹೋಲುತ್ತವೆ ಎಂದು ಅನೇಕರು ಹೇಳಿದ್ದಾರೆ. ಇನ್ನು, ಸಿನಿಮಾದ ಕಲರಿಂಗ್, ಮೇಕಿಂಗ್ ಸೇರಿದಂತೆ ಅನೇಕ ವಿಷಯಗಳು ‘ಕೆಜಿಎಫ್’ಗೆ ಹೋಲಿಕೆ ಮಾಡಲಾಗುತ್ತಿದೆ. ‘ಪ್ಯಾರಡೈಸ್’ ಸಿನಿಮಾಗೆ ನಾನಿ ಹೀರೋ. ಈ ಚಿತ್ರಕ್ಕೆ ಶ್ರೀಕಾಂತ್ ಒಡೆಲಾ ನಿರ್ದೇಶನ ಮಾಡಿದ್ದಾರೆ. ಈ ಮೊದಲು ‘ದಸರಾ’ ಹೆಸರಿನ ಸಿನಿಮಾ ಇವರ ಕಾಂಬಿನೇಷನ್​ನಲ್ಲಿಯೇ ಬಂದಿತ್ತು. ಆ ಸಿನಿಮಾ ಹಿಟ್ ಆಗಿತ್ತು. ಆದರೆ, ಮತ್ತೊಮ್ಮೆ ಬಂದ ಇವರ ಕಾಂಬಿನೇಷನ್​ನ ಜನರು ಒಪ್ಪಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:57 am, Fri, 25 September 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಸಂಗ್ರಹ ತೀವ್ರ ಕುಸಿತ
ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಸಂಗ್ರಹ ತೀವ್ರ ಕುಸಿತ
ವಿಶ್ವಸಂಸ್ಥೆಯಲ್ಲಿ ಹಫೀಜ್ ಸಯೀದ್ ಪ್ರಶ್ನೆಗೆ ಮುಖ ತಿರುಗಿಸಿದ ಪಾಕ್ ಪಿಎಂ
ವಿಶ್ವಸಂಸ್ಥೆಯಲ್ಲಿ ಹಫೀಜ್ ಸಯೀದ್ ಪ್ರಶ್ನೆಗೆ ಮುಖ ತಿರುಗಿಸಿದ ಪಾಕ್ ಪಿಎಂ
ಬಿಜೆಪಿ ನಾಯಕಿ ಮಾಧವಿ ಲತಾಗೆ ಬಾಗಲಕೋಟೆ ಪ್ರವೇಶಕ್ಕೆ ನಿರ್ಬಂಧ
ಬಿಜೆಪಿ ನಾಯಕಿ ಮಾಧವಿ ಲತಾಗೆ ಬಾಗಲಕೋಟೆ ಪ್ರವೇಶಕ್ಕೆ ನಿರ್ಬಂಧ
ಧಾರಾಕಾರ ಮಳೆಗೆ ನಡುಗಿದ ಸಿಕ್ಕಿಂ, ರಿಂಬಿ ಗ್ರಾಮದಲ್ಲಿ ಭೂಕುಸಿತ
ಧಾರಾಕಾರ ಮಳೆಗೆ ನಡುಗಿದ ಸಿಕ್ಕಿಂ, ರಿಂಬಿ ಗ್ರಾಮದಲ್ಲಿ ಭೂಕುಸಿತ
ಇಂದು ಅನಂತ ಪದ್ಮನಾಭ ವ್ರತ ಆಚರಣೆಯಿಂದ ಐಶ್ವರ್ಯ ಮತ್ತು ಯಶಸ್ಸು ಲಭ್ಯ
ಇಂದು ಅನಂತ ಪದ್ಮನಾಭ ವ್ರತ ಆಚರಣೆಯಿಂದ ಐಶ್ವರ್ಯ ಮತ್ತು ಯಶಸ್ಸು ಲಭ್ಯ
ಭಾರೀ ಭೂಕುಸಿತ, ತಡೆಗೋಡೆ ಕುಸಿತದಿಂದ ಒಡಿಶಾದ ಕಳಿಂಗ ಘಾಟ್ ರಸ್ತೆ ಬಂದ್
ಭಾರೀ ಭೂಕುಸಿತ, ತಡೆಗೋಡೆ ಕುಸಿತದಿಂದ ಒಡಿಶಾದ ಕಳಿಂಗ ಘಾಟ್ ರಸ್ತೆ ಬಂದ್
ಚಿತ್ರದುರ್ಗ ಎಸ್ಪಿ ವಿರುದ್ಧ ಶಾಸಕ ವೀರೇಂದ್ರ ಪಪ್ಪಿ ಕೆಂಡಾಮಂಡಲ
ಚಿತ್ರದುರ್ಗ ಎಸ್ಪಿ ವಿರುದ್ಧ ಶಾಸಕ ವೀರೇಂದ್ರ ಪಪ್ಪಿ ಕೆಂಡಾಮಂಡಲ
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್
ಬರದಿಂದ ನಲುಗಿದ ರೈತರಿಗೆ ಗುಡ್ ನ್ಯೂಸ್:ಬರ ಪರಿಹಾರ ಘೋಷಿಸಿದ ಸರ್ಕಾರ
ಬರದಿಂದ ನಲುಗಿದ ರೈತರಿಗೆ ಗುಡ್ ನ್ಯೂಸ್:ಬರ ಪರಿಹಾರ ಘೋಷಿಸಿದ ಸರ್ಕಾರ
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಟ್ರಂಪ್ ದಂಪತಿಯಿಂದ ಅದ್ದೂರಿ ಸ್ವಾಗತ
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಟ್ರಂಪ್ ದಂಪತಿಯಿಂದ ಅದ್ದೂರಿ ಸ್ವಾಗತ