ಮುಂಬೈ: ರಾಜ್ ಕುಂದ್ರಾ ತಮ್ಮ ಬಂಧನದ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ. ತಮ್ಮ ಬಂಧನವನ್ನು ಪ್ರಶ್ನಿಸಿ ಮತ್ತು ತತ್ಕ್ಷಣದ ಬಿಡುಗಡೆಯನ್ನು ಕೋರಿ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಮೇಲ್ಮನವಿಯನ್ನು ಸಲ್ಲಿಸಿದ್ದರು. ಆದರೆ ನ್ಯಾಯಾಲಯವು ರಾಜ್ ಕುಂದ್ರಾ ಹಾಗೂ ರಿಯಾನ್ ಥಾರ್ಪೆ ಅವರ ಮೇಲ್ಮನವಿಯನ್ನು ತಿರಸ್ಕರಿಸಿದ್ದು, ರಾಜ್ ಕುಂದ್ರಾ ಬಂಧನ ಮುಂದುವರೆಯಲಿದೆ ಎಂದು ಎಎನ್ಐ ವರದಿ ಮಾಡಿದೆ.
ಜುಲೈ 27ರಂದು ಮುಂಬೈನ ನ್ಯಾಯಾಲಯವೊಂದು ರಾಜ್ ಕುಂದ್ರಾಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿತ್ತು. ಈ ಕುರಿತು ಬಾಂಬೆ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ ರಾಜ್ ಕುಂದ್ರಾ ಮತ್ತು ರಿಯಾನ್ ಥಾರ್ಪೆ, ಬಂಧನದ ಪ್ರಕ್ರಿಯೆ ಸರಿಯಾಗಿ ನಡೆದಿರಲಿಲ್ಲ ಎಂದು ಹೇಳಿ, ಬಿಡುಗಡೆಗೊಳಿಸುವಂತೆ ಕೋರಿದ್ದರು. ಆದರೆ ಇದನ್ನು ವಿಚಾರಣೆ ನಡೆಸಿದ ನ್ಯಾಯಾಲಯವು, ಬಂಧನದ ಪ್ರಕ್ರಿಯೆಯಲ್ಲಿ ಯಾವುದೇ ದೋಷವಿಲ್ಲ. ಮತ್ತು ಸೆಷನ್ ನ್ಯಾಯಾಲಯವು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದೂ ಸರಿಯಾಗಿದೆ ಎಂದು ಇಂದು ತೀರ್ಪಿತ್ತಿದೆ.
ರಾಜ್ ಕುಂದ್ರಾ ಜಾಮೀನು ಅರ್ಜಿಯ ವಿಚಾರಣೆ ವಿಳಂಬ:
ಮುಂಬೈನ ಸೆಷನ್ಸ್ ನ್ಯಾಯಾಲಯದಲ್ಲಿ ಇಂದು ನಡೆಯಬೇಕಿದ್ದ ರಾಜ್ ಕುಂದ್ರಾ ಜಾಮೀನು ಅರ್ಜಿಯ ವಿಚಾರಣೆ ಕಾರಣಾಂತರಗಳಿಂದ ಮುಂದೆ ಹೋಗಿದೆ. ವಿಚಾರಣೆ ನಡೆಸಬೇಕಿದ್ದ ನ್ಯಾಯಾಧೀಶರು ಇಂದು ಲಭ್ಯರಿಲ್ಲದ ಕಾರಣ ವಿಚಾರಣೆಯನ್ನು ಮುಂದೂಡಲಾಗಿದೆ.
ಈ ಕುರಿತು ಎನ್ಎಐ ಮಾಡಿರುವ ಟ್ವೀಟ್:
Mumbai: Order on businessman & actor Shilpa Shetty’s husband Raj Kundra’s anticipatory bail application in Sessions Court will not be pronounced today due to unavailability of the concerned judge. Kundra has filed this plea in Maharashtra cyber’s case of pornography
(File photo) pic.twitter.com/qKIbUmUw1R
— ANI (@ANI) August 7, 2021
ನೀಲಿಚಿತ್ರ ತಯಾರಿಕೆ ಮತ್ತು ಹಂಚಿಕೆ ಪ್ರಕರಣದಲ್ಲಿ ಇದುವರೆಗೆ ಒಟ್ಟು ಹನ್ನೊಂದು ಮಂದಿಯನ್ನು ಬಂಧಿಸಲಾಗಿದೆ. ನಿನ್ನೆ (ಆಗಸ್ಟ್ 6) ಶೆರ್ಲಿನ್ ಚೋಪ್ರಾ ಪೊಲೀಸರ ಮುಂದೆ ಹಾಜರಾಗಿ ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದಾರೆ.
(Mumbai High Court dismisses Raj Kundra s immediate release application)
Published On - 11:58 am, Sat, 7 August 21