ಆರ್ಯನ್ ಖಾನ್ ಅವರು ಜೈಲು ಸೇರಿ 20 ದಿನಗಳ ಮೇಲಾಗಿದೆ. ಎಷ್ಟೇ ಪ್ರಯತ್ನ ಪಟ್ಟರೂ ಅವರಿಗೆ ಜಾಮೀನು ಸಿಗುತ್ತಿಲ್ಲ. ಜೈಲಿನಲ್ಲಿ ಕೊಡುವ ಊಟ ಅವರಿಗೆ ಹೊಂದುತ್ತಿಲ್ಲ. ಅವರಿಗೆ ಸರಿಯಾಗಿ ನಿದ್ದೆ ಬರುತ್ತಿಲ್ಲ. ಇದು ಶಾರುಖ್ ಖಾನ್ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆರ್ಯನ್ಗೆ ಜಾಮೀನು ಕೊಡಿಸಬೇಕು ಎನ್ನುವ ಪ್ರಯತ್ನದಲ್ಲಿ ಶಾರುಖ್ ಇದ್ದಾರೆ. ಈ ಮಧ್ಯೆ, ಆರ್ಯನ್ಗೆ ಸದ್ಯಕ್ಕೆ ಜಾಮೀನು ಸಿಗುವ ಲಕ್ಷಣ ಗೋಚರವಾಗುತ್ತಿಲ್ಲ. ಆರ್ಯನ್ಗೆ ಬಾಂಬೆ ಹೈಕೋರ್ಟ್ನಲ್ಲಿ ಜಾಮೀನು ಸಿಗಬಾರದು ಎಂದು ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ತಂತ್ರ ಒಂದನ್ನು ರೂಪಿಸಿದ್ದಾರೆ.
ಎನ್ಡಿಪಿಎಸ್ ವಿಶೇಷ ಕೋರ್ಟ್ನಲ್ಲಿ ಆರ್ಯನ್ ಅವರ ಜಾಮೀನು ಅರ್ಜಿ ರಿಜೆಕ್ಟ್ ಆಗಿದೆ. ಈ ಬೆನ್ನಲ್ಲೇ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಶೀಘ್ರವೇ ಅವರ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಆದರೆ, ಆರ್ಯನ್ಗೆ ಜಾಮೀನು ಸಿಗದಂತೆ ನೋಡಿಕೊಳ್ಳಲು ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಪ್ರಯತ್ನಿಸುತ್ತಿದ್ದಾರೆ.
ಆರ್ಯನ್ ಸ್ಟಾರ್ ಕಿಡ್. ಅವರು ಕೋರ್ಟ್ನಿಂದ ಹೊರ ಬಂದರೆ ಸಾಕ್ಷ್ಯಗಳನ್ನು ನಾಶ ಮಾಡಬಹುದು ಎನ್ನುವ ವಾದವನ್ನು ಎನ್ಸಿಬಿ ವಕೀಲರು ಬಾಂಬೆ ಹೈಕೋರ್ಟ್ನಲ್ಲಿಡಲು ಮುಂದಾಗಿದ್ದಾರೆ. ಇದಲ್ಲದೆ, ಈ ಪ್ರಕರಣದಲ್ಲಿ ಒಬ್ಬೊಬ್ಬರಾಗಿ ವಿಚಾರಣೆಗೆ ಹಾಜರುಪಡಿಸಲಾಗುತ್ತಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಎನ್ಸಿಬಿ ಜಾಮೀನಿಗೆ ವಿರೋಧ ವ್ಯಕ್ತಪಡಿಸಲು ನಿರ್ಧರಿಸಿದೆ. ಇದು ಆರ್ಯನ್ಗೆ ಜಾಮೀನು ಸಿಗದಿರಲು ಪ್ರಮುಖ ಕಾರಣವಾಗಬಹುದು.
ಬಾಂಬೆ ಹೈಕೋರ್ಟ್ನಲ್ಲೂ ಜಾಮೀನು ಸಿಗದಿದ್ದರೆ ಆರ್ಯನ್ ಖಾನ್ ಪರ ವಕೀಲರು ಸುಪ್ರೀಂಕೋರ್ಟ್ಗೆ ಹೋಗಲು ಅವಕಾಶವಿದೆ. ಅಲ್ಲಿಯೂ ಜಾಮೀನು ರಿಜೆಕ್ಟ್ ಆದರೆ, ಜೈಲಿನಲ್ಲೇಯೇ ಉಳಿಯಬೇಕಾಗುತ್ತದೆ. ಸದ್ಯ, ಹೈಕೋರ್ಟ್ನಲ್ಲಿ ನಡೆಯುವ ವಿಚಾರಣೆ ಮೇಲೆ ಎಲ್ಲರ ಚಿತ್ತ ಇದೆ. ಆರ್ಯನ್ ಬಳಿ ಡ್ರಗ್ಸ್ ಸಿಕ್ಕಿಲ್ಲ ಎಂಬ ವಾದವನ್ನು ಅವರ ವಕೀಲರು ಮುಂದಿಡುತ್ತಿದ್ದಾರೆ. ಆದರೆ, ಅದು ವರ್ಕೌಟ್ ಆಗುತ್ತಿಲ್ಲ. ಹೀಗಾಗಿ, ಬೇರೆ ರೀತಿಯ ವಾದ ಮಂಡಿಸುವ ಸಾಧಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: ಆರ್ಯನ್ ಖಾನ್ ಪ್ರಕರಣದ ತನಿಖಾಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ‘ವಸೂಲಿ’ ಆರೋಪ ಮಾಡಿದ ಮಹಾರಾಷ್ಟ್ರ ಸಚಿವ
ಆರ್ಯನ್ ಖಾನ್ಗೆ ಡ್ರಗ್ ಸಪ್ಲೈ ಮಾಡಿದ್ದು ಅನನ್ಯಾ ಪಾಂಡೆ? ವಾಟ್ಸಾಪ್ ಚಾಟ್ನಿಂದ ಹೊರ ಬಿತ್ತು ರಹಸ್ಯ