ಬಾಲಿವುಡ್​​ನಲ್ಲಿ ಪಿಆರ್​ ತಂತ್ರ ಹೇಗೆ ನಡೆಯುತ್ತೆ ನೋಡಿ; ಎಕ್ಸ್​​ಪೋಸ್ ಮಾಡಿದ ಫ್ಯಾನ್ಸ್

ಬಾಲಿವುಡ್‌ನಲ್ಲಿ ಪಿಆರ್ ತಂತ್ರಗಳು ವಿಫಲವಾಗುತ್ತಿವೆ ಎನ್ನುವುದಕ್ಕೆ 'ಓ ರೋಮಿಯೋ' ಸಿನಿಮಾ ಇತ್ತೀಚಿನ ಉದಾಹರಣೆ. ಆರಂಭದಲ್ಲಿ ನಕಲಿ ವಿಮರ್ಶೆಗಳಿಂದ ದೊಡ್ಡ ಗಳಿಕೆ ಕಂಡರೂ, ಪ್ರೇಕ್ಷಕರು ಸಿನಿಮಾದ ಹಿಂಸೆ ಮತ್ತು ಕಳಪೆ ಗುಣಮಟ್ಟವನ್ನು ಗುರುತಿಸಿ ನಿರಾಕರಿಸಿದ್ದಾರೆ. ಮೀಶೋ ಅನಿಮಲ್ ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ಈ ಚಿತ್ರ, ನಿರ್ಮಾಣ ಸಂಸ್ಥೆ ರೇಟಿಂಗ್ ಆಯ್ಕೆಯನ್ನೇ ನಿಷ್ಕ್ರಿಯಗೊಳಿಸುವಂತೆ ಮಾಡಿದೆ.

ಬಾಲಿವುಡ್​​ನಲ್ಲಿ ಪಿಆರ್​ ತಂತ್ರ ಹೇಗೆ ನಡೆಯುತ್ತೆ ನೋಡಿ; ಎಕ್ಸ್​​ಪೋಸ್ ಮಾಡಿದ ಫ್ಯಾನ್ಸ್
ಓ ರೊಮಿಯೋ

Updated on: Feb 18, 2026 | 7:03 AM

ಬಾಲಿವುಡ್ ಅಲ್ಲಿ ಪಿಆರ್​ ತಂತ್ರಗಳು ಹೆಚ್ಚು ಕೆಲಸ ಮಾಡುತ್ತವೆ. ಕೆಲವು ಸಿನಿಮಾ ಹಿಟ್ ಅಥವಾ ಫ್ಲಾಪ್​​ನ ನಿರ್ಧಾರ ಮಾಡೋದು ಇವರೇ. ಆದರೆ, ಈಗ ಆಡಿಯನ್ಸ್ ಬದಲಾಗಿದ್ದಾರೆ. ಸರಿ ಯಾವುದು, ತಪ್ಪು ಯಾವುದು ಎಂಬುದನ್ನು ಸ್ಪಷ್ಟವಾಗಿ ಕಂಡು ಹಿಡಿಯುತ್ತಿದ್ದಾರೆ. ಇದಕ್ಕೆ ಹೊಸ ಉದಾಹರಣೆ ಸಿಕ್ಕಿದೆ. ಬಾಲಿವುಡ್​ ಅಲ್ಲಿ ಪಿಆರ್ ಟೆಕ್ನಿಕ್ ಮೂಲಕ ಗೆಲ್ಲುವ ಪ್ರಯತ್ನವನ್ನು ‘ಓ ರೋಮಿಯೋ’ ಸಿನಿಮಾ ಮಾಡಿತ್ತು. ಆದರೆ, ಈ ತಂತ್ರಕ್ಕೆ ಬ್ರೇಕ್ ಬಿದ್ದಿದೆ. ಈ ಸಿನಿಮಾ ಹೀನಾಯವಾಗಿ ಸೋಲುವ ಸೂಚನೆ ಸಿಕ್ಕಿದೆ.

‘ಓ ರೋಮಿಯೋ’ ಚಿತ್ರದಲ್ಲಿ ಶಾಹಿದ್ ಕಪೂರ್, ತೃಪ್ತಿ ದಿಮ್ರಿ ಮೊದಲಾದವರು ನಟಿಸಿದ್ದಾರೆ. ಫೆಬ್ರವರಿ 13ರಂದು ಸಿನಿಮಾ ರಿಲೀಸ್ ಆಯಿತು. ಈ ಚಿತ್ರವನ್ನು ನೋಡಿದ ಅನೇಕ ವಿಮರ್ಶಕರು ಹಾಡಿ ಹೊಗಳಿದರು. ‘ಸಿನಿಮಾ ಅದ್ಭುತವಾಗಿದೆ, ಮತ್ತೊಂದು ಅನಿಮಲ್ ರೀತಿಯಲ್ಲಿ ಸಿನಿಮಾ ಇದೆ’ ಎಂದೆಲ್ಲ ವಿಮರ್ಶೆ ಕೊಟ್ಟರು. ಮೊದಲ ದಿನ ಈ ಚಿತ್ರ 8.5 ಕೋಟಿ ರೂಪಾಯಿ ಗಳಿಕೆ ಮಾಡಿತು.

ಒಳ್ಳೆಯ ವಿಮರ್ಶೆ ಸಿಕ್ಕಿದೆ ಎಂದು ಎರಡನೇ ದಿನ ಪ್ರೇಕ್ಷಕರು ಥಿಯೇಟರ್​​ಗೆ ತೆರಳಿದರು. ಇದರಿಂದ ಸಿನಿಮಾ 12.65 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಭಾನುವಾರ ಕೂಡ ಸಿನಿಮಾ ಒಳ್ಳೆಯ ಗಳಿಕೆ ಮಾಡಿತು. ಚಿತ್ರದ ಒಟ್ಟಾರೆ ಕಲೆಕ್ಷನ್ 32 ಕೋಟಿ ರೂಪಾಯಿ ಆಗಿದೆ.

ಆ ಬಳಿಕ ಗೊತ್ತಾಯ್ತು ನೋಡಿ ಸಿನಿಮಾದ ನಿಜವಾದ ಬಣ್ಣ. ಒಳ್ಳೆಯ ವಿಮರ್ಶೆ ಸಿಕ್ಕಿದೆ ಎಂದು ಥಿಯೇಟರ್​ಗೆ ತೆರಳಿದ ಅನೇಕರು ಸಿಟ್ಟಲ್ಲಿ ಮರಳಿದ್ದಾರೆ. ‘ಇದು ಮೀಶೋ ಅನಿಮಲ್’ ಎಂದು ಹೇಳಿದ್ದಾರೆ. ಚಿತ್ರದಲ್ಲಿ ತುಂಬಾನೇ ಹಿಂಸೆ ಇದೆ ಎಂದು ಹೇಳಿದ್ದಾರೆ. ಸಿನಿಮಾ ಸದ್ಯ ಸೋಲಿನ ಹಾದಿಯಲ್ಲಿ ಸಾಗುತ್ತಿದೆ. ಇದು ಪಿಆರ್ ತಂತ್ರ ಎಂದು ಅನೇಕರು ಆರೋಪಿಸಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ ಖಾನ್​​ಗಳ ಬುಡ ಅಲ್ಲಾಡಿಸುತ್ತಿರುವ ಮೂವರು ಸ್ಟಾರ್ ನಟರು

ಐಎಂಡಿಬಿಯಲ್ಲಿ ಚಿತ್ರಕ್ಕೆ 6.4 ರೇಟಿಂಗ್ ಸಿಕ್ಕಿದೆ. ಬುಕ್ ಮೈ ಶೋನಲ್ಲಿ ನೆಗೆಟಿವ್ ವಿಮರ್ಶೆ ಸಿಗುತ್ತಿದ್ದಂತೆ ಕೋರ್ಟ್​​ನಿಂದ ಆದೇಶ ತಂದ ನಿರ್ಮಾಣ ಸಂಸ್ಥೆ ರೇಟಿಂಗ್​​ ನೀಡುವ ಆಯ್ಕೆಯನ್ನೇ ನಿಷ್ಕ್ರಿಯ ಗೊಳಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us