ನಟಿ ದೀಪಿಕಾ ಪಡುಕೋಣೆ (Deepika Padukone) ಅವರ ಬದುಕಿನಲ್ಲಿ ಸದ್ಯದಲ್ಲೇ ಹೊಸ ಅಧ್ಯಾಯ ಆರಂಭ ಆಗಲಿದೆ. ಶೀಘ್ರವೇ ಅವರು ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ. ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ದಂಪತಿಗೆ ಗಂಡು ಮಗು ಜನಿಸಲಿದೆಯೋ ಅಥವಾ ಹೆಣ್ಣು ಮಗು ಜನಿಸಲಿದೆಯೋ ಎಂಬ ಬಗ್ಗೆ ಈಗಲೇ ಚರ್ಚೆ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ಪಂಡಿತ್ ಜಗನ್ನಾಥ್ ಗುರೂಜಿ (Pandit Jagannath Guruji) ಅವರು ಈ ವಿಚಾರದಲ್ಲಿ ಭವಿಷ್ಯ ನುಡಿದಿರುವುದು ಸುದ್ದಿ ಆಗಿದೆ. ದೀಪಿಕಾ ಪಡುಕೋಣೆ ಅವರು ಗಂಡು ಮಗುವಿಗೆ (Baby Boy) ಜನ್ಮ ನೀಡಲಿದ್ದಾರೆ ಎಂದು ಜಗನ್ನಾಥ್ ಗುರೂಜಿ ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪಂಡಿತ್ ಜಗನ್ನಾಥ್ ಗುರೂಜಿ ಅವರು ಭವಿಷ್ಯ ನುಡಿದಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರಿಗೆ ಜನಿಸಲಿರುವ ಗಂಡು ಮಗು ಅದೃಷ್ಟವನ್ನು ತರಲಿದೆ ಎಂದು ಅವರು ಹೇಳಿದ್ದಾರೆ. ಗಂಡು ಮಗು ಜನಿಸಲಿದೆ ಎಂದು ಅವರು ಹೇಳಿರುವ ಭವಿಷ್ಯ ನಿಜವಾಗುತ್ತೋ ಇಲ್ಲವೋ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.
ಇದನ್ನೂ ಓದಿ: 1.2 ಲಕ್ಷ ರೂಪಾಯಿ ಬೆಲೆಯ ಡ್ರೆಸ್ ಧರಿಸಿ ಬಂದ ಪ್ರೆಗ್ನೆಂಟ್ ದೀಪಿಕಾ ಪಡುಕೋಣೆ
ಈ ವರ್ಷ ಫೆಬ್ರವರಿ 29ರಂದು ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರು ಪ್ರೆಗ್ನೆನ್ಸಿ ವಿಷಯವನ್ನು ತಿಳಿಸಿದರು. ಸೆಪ್ಟೆಂಬರ್ನಲ್ಲಿ ದೀಪಿಕಾ ಪಡುಕೋಣೆ ಅವರು ತಾಯಿ ಆಗಲಿದ್ದಾರೆ. ತುಂಬು ಗರ್ಭಿಣಿ ಆಗಿರುವ ಅವರು ಇತ್ತೀಚೆಗೆ ‘ಕಲ್ಕಿ 2898 ಎಡಿ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಭಾಗಿ ಆಗಿದ್ದರು. ಈ ಸಿನಿಮಾದಲ್ಲಿಯೂ ಅವರು ಗರ್ಭಿಣಿಯ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ಸಂಭಾವನೆಯಲ್ಲಿ ದೀಪಿಕಾ ಪಡುಕೋಣೆ ನಂಬರ್ 1; ಕಂಗನಾ, ಆಲಿಯಾಗೆ ಎಷ್ಟನೇ ಸ್ಥಾನ?
ದೀಪಿಕಾ ಪಡುಕೋಣೆ ಅವರಿಗೆ ಚಿತ್ರರಂಗದಲ್ಲಿ ತುಂಬ ಬೇಡಿಕೆ ಇದೆ. ಈ ನಡುವೆ ಅವರು ವೈಯಕ್ತಿಕ ಜೀವನದ ಕಡೆಗೆ ಗಮನ ಹರಿಸಿದ್ದಾರೆ. ಪ್ರೆಗ್ನೆಂಟ್ ಆಗಿರುವುದರಿಂದ ಸದ್ಯಕ್ಕೆ ಸಿನಿಮಾ ಕೆಲಸಗಳಿಂದ ಅವರು ದೂರು ಉಳಿದುಕೊಂಡಿದ್ದಾರೆ. ಅವರು ನಟಿಸಿರುವ ‘ಸಿಂಗಂ ಅಗೇನ್’ ಸಿನಿಮಾದ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಇದೇ ಸಿನಿಮಾದಲ್ಲಿ ರಣವೀರ್ ಸಿಂಗ್ ಕೂಡ ನಟಿಸಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನ ಮಾಡಿರುವ ಈ ಸಿನಿಮಾ ನವೆಂಬರ್ 1ರಂದು ಬಿಡುಗಡೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.