
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೊಜ್ಜಿನ ವಿರುದ್ಧ ಸಮರ ಸಾರಿದ್ದಾರೆ. ದೇಶದಲ್ಲಿ ಏರುತ್ತಿರುವ ಸ್ಥೂಲಕಾಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶ್ರಮ ಹಾಕುತ್ತಿದ್ದಾರೆ. ಈ ಆಂದೋಲನಕ್ಕೆ ಸಿನಿಮಾ ರಂಗದವರನ್ನು ರಾಯಭಾರಿ ಆಗಿಆಯ್ಕೆ ಮಾಡಿದ್ದಾರೆ. ಮಲಯಾಳಂ ನಟ ಮೋಹನ್ಲಾಲ್, ಆರ್ ಮಾಧವನ್ ಹಾಗೂ ಗಾಯಕಿ ಶ್ರೇಯಾ ಘೋಷಾಲ್ ಅವರನ್ನು ಈ ಆಂದೋಲನಕ್ಕೆ ಕರೆ ತಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಬೊಜ್ಜಿನ ಸಮಸ್ಯೆ ವಿರುದ್ಧ ಸಮರ ಸಾರಿದ್ದಾರೆ. ಈ ಕಾರಣಕ್ಕೆ ರಾಜಕಾರಣಿಗಳು, ಕ್ರೀಡಾಪಟುಗಳು, ಉದ್ಯಮಿಗಳನ್ನು ಈ ಕ್ಯಾಂಪೇನ್ಗೆ ಆಯ್ಕೆ ಮಾಡಿದ್ದಾರೆ. ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ, ಉದ್ಯಮಿ ಆನಂದ್ ಮಹಿಂದ್ರಾ, ವೇಟ್ಲಿಫ್ಟರ್ ಮೀರಾಬಾಯ್ ಚನು, ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನೀಲೆಕಣಿ, ಸುಧಾ ಮೂರ್ತಿ, ಶೂಟರ್ ಮನು ಭಾಕರ್ ಮೊದಲಾದವರು ಲಿಸ್ಟ್ನಲ್ಲಿ ಇದ್ದಾರೆ.
As mentioned in yesterday’s #MannKiBaat, I would like to nominate the following people to help strengthen the fight against obesity and spread awareness on reducing edible oil consumption in food. I also request them to nominate 10 people each so that our movement gets bigger!… pic.twitter.com/bpzmgnXsp4
— Narendra Modi (@narendramodi) February 24, 2025
ಈ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ‘ಮನ್ಕಿಬಾತ್ನಲ್ಲಿ ಹೇಳಿದಂತೆ ಬೊಜ್ಜಿನ ವಿರುದ್ಧದ ಹೋರಾಟವನ್ನು ಬಲಪಡಿಸಲು ಮತ್ತು ಆಹಾರದಲ್ಲಿ ತೈಲ ಬಳಕೆಯನ್ನು ಕಡಿಮೆ ಮಾಡುವ ಕುರಿತು ಜಾಗೃತಿ ಮೂಡಿಸಲು ನಾನು ಈ ಕೆಳಗಿನ ಜನರನ್ನು ನಾಮನಿರ್ದೇಶನ ಮಾಡಲು ಬಯಸುತ್ತೇನೆ. ನಮ್ಮ ಚಳುವಳಿ ದೊಡ್ಡದಾಗಲು ತಲಾ 10 ಜನರನ್ನು ಅವರು ನಾಮನಿರ್ದೇಶನ ಮಾಡಬೇಕು ಎಂಬುದು ನನ್ನ ವಿನಂತಿ’ ಎಂದು ಮೋದಿ ಟ್ವೀಟ್ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: Mann ki Baat: ಮಕ್ಕಳಲ್ಲಿ ಬೊಜ್ಜು ನಾಲ್ಕು ಪಟ್ಟು ಹೆಚ್ಚಾಗಿದೆ ಎಂದ ಮೋದಿ, ಡಾ. ದೇವಿಶೆಟ್ಟಿ ಕೊಟ್ಟ ಸಲಹೆಗಳೇನು?
ಭಾರತದಲ್ಲಿ ಇತ್ತೀಚೆಗೆ ಸ್ಥೂಲಕಾಯ ಸಮಸ್ಯೆ ಹೆಚ್ಚಿದೆ. ಎಂಟರಲ್ಲಿ ಒಬ್ಬರು ಈ ಸಮಸ್ಯೆಗೆ ಒಳಗಾಗಿದ್ದಾರೆ ಎಂದು ವರದಿ ಹೇಳುತ್ತದೆ. ‘ಫಿಟ್ ಮತ್ತು ಆರೋಗ್ಯಕರ ರಾಷ್ಟ್ರವಾಗಲು ನಾವು ಸ್ಥೂಲಕಾಯದ ಸಮಸ್ಯೆಯನ್ನು ನಿಭಾಯಿಸಬೇಕು. ಒಂದು ಅಧ್ಯಯನದ ಪ್ರಕಾರ, ಇಂದು ಪ್ರತಿ ಎಂಟು ಜನರಲ್ಲಿ ಒಬ್ಬರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ’ ಎಂದು ಮೋದಿ ಈ ಮೊದಲು ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.