Mann ki Baat: ಮಕ್ಕಳಲ್ಲಿ ಬೊಜ್ಜು ನಾಲ್ಕು ಪಟ್ಟು ಹೆಚ್ಚಾಗಿದೆ ಎಂದ ಮೋದಿ, ಡಾ. ದೇವಿಶೆಟ್ಟಿ ಕೊಟ್ಟ ಸಲಹೆಗಳೇನು?
ದಿನದಿಂದ ದಿನಕ್ಕೆ ದೇಶದ ಜನರಲ್ಲಿ ಬೊಜ್ಜಿನ ಪ್ರಮಾಣ ಹೆಚ್ಚಳವಾಗುತ್ತಿದೆ. ಪ್ರತಿ 8 ಮಂದಿಯಲ್ಲಿ ಒಬ್ಬರಿಗೆ ಬೊಜ್ಜಿನ ಸಮಸ್ಯೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದರು. ಮನ್ ಕಿ ಬಾತ್ನಲ್ಲಿ ಮಾತನಾಡಿದ ಅವರು, ಕಳೆದ ಕೆಲವು ವರ್ಷಗಳಿಂದ ಬೊಜ್ಜು ಸಮಸ್ಯೆ ದ್ವಿಗುಣಗೊಂಡಿದೆ. ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. ನೀವು ಸಣ್ಣ ಸಣ್ಣ ಪ್ರಯತ್ನಗಲಿಂದಲೇ ಬೊಜ್ಜು ಸಮಸ್ಯೆ ನಿವಾರಿಸಬಹುದು.

ನವದೆಹಲಿ, ಫೆಬ್ರವರಿ 23: ದಿನದಿಂದ ದಿನಕ್ಕೆ ದೇಶದ ಜನರಲ್ಲಿ ಬೊಜ್ಜಿನ ಪ್ರಮಾಣ ಹೆಚ್ಚಳವಾಗುತ್ತಿದೆ. ಪ್ರತಿ 8 ಮಂದಿಯಲ್ಲಿ ಒಬ್ಬರಿಗೆ ಬೊಜ್ಜಿನ ಸಮಸ್ಯೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದರು. ಮನ್ ಕಿ ಬಾತ್ನಲ್ಲಿ ಮಾತನಾಡಿದ ಅವರು, ಕಳೆದ ಕೆಲವು ವರ್ಷಗಳಿಂದ ಬೊಜ್ಜು ಸಮಸ್ಯೆ ದ್ವಿಗುಣಗೊಂಡಿದೆ. ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. ನೀವು ಸಣ್ಣ ಸಣ್ಣ ಪ್ರಯತ್ನಗಲಿಂದಲೇ ಬೊಜ್ಜು ಸಮಸ್ಯೆ ನಿವಾರಿಸಬಹುದು.
ನೀವು ಆಹಾರದಲ್ಲಿ ಬಳಕೆ ಮಾಡುವ ಎಣ್ಣೆಯ ಪ್ರಮಾಣವನ್ನು ಶೇ. 10ರಷ್ಟು ಕಡಿಮೆ ಮಾಡಿ, ನೀವು ಅಡುಗೆ ಎಣ್ಣೆಯನ್ನು ಕೊಂಡುಕೊಳ್ಳುವಾಗಲೇ ಶೇ.10ರಷ್ಟು ಕಡಿಮೆ ಕೊಂಡುಕೊಳ್ಳಿ ಎಂದು ಸಲಹೆ ನೀಡಿದರು.
ಡಾ. ದೇವಿಶೆಟ್ಟಿ ಕೊಟ್ಟ ಸಲಹೆ ಏನು? ಹೃದ್ರೋಗ ತಜ್ಞ ಡಾ. ದೇವಿ ಶೆಟ್ಟಿ ಮಾತನಾಡಿ, ನಿತ್ಯ ಹೆಚ್ಚಿನ ಪ್ರಮಾಣ ಕಾರ್ಬೋಹೈಡ್ರೇಟ್ಗಳನ್ನು ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆ ಬರಬಹುದು. ಅನ್ನ, ಚಪಾತಿ, ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಬೇಕು. ಇದರಿಂದ ಅಧಿಕ ರಕ್ತದೊತ್ತಡ ಉಂಟಾಗಿ ಹಲವು ಕಾಯಿಲೆಗಳಿಗೆ ಎಡೆ ಮಾಡಿಕೊಡುತ್ತದೆ. ನಿತ್ಯ ವ್ಯಾಯಾಮ ಮಾಡಿ, ತೂಕವನ್ನು ಚೆಕ್ ಮಾಡುತ್ತಿರಿ, ಸಂತೋಷಭರಿತ, ಆರೋಗ್ಯವಂತ ಬದುಕು ನಿಮ್ಮದಾಗಲಿ ಎಂದು ಆಶಿಸಿದರು.
ಅಥ್ಲೀಟ್ ನಿಖತ್ ಝರೀನ್ ಮಾತನಾಡಿ, ಗಂಭೀರ ಆರೋಗ್ಯ ಸಮಸ್ಯೆಗಳು ಬರುತ್ತಿವೆ, ಎಷ್ಟಾಗುತ್ತೋ ಅಷ್ಟು ಉತ್ತಮ ಆಹಾರವನ್ನು ಸೇವನೆ ಮಾಡಿ, ಎಡಿಬಲ್ ಆಯಿಲ್ ಪ್ರಮಾಣ ಕಡಿಮೆ ಮಾಡಿ, ಕ್ಯಾನ್ಸರ್, ಹೃದಯ ಸಂಬಂಧಿ ರೋಗಗಳಿಂದ ದೂರವಿರಿ. ನಾವು ಆರೋಗ್ಯವಾಗಿದ್ದರೆ ದೇಶವೂ ಆರೋಗ್ಯವಾಗಿರುತ್ತದೆ ಎಂದರು.
ನೀರಜ್ ಛೋಪ್ರಾ ಮಾತನಾಡಿ, ನಿಮ್ಮ ಆಹಾರದಲ್ಲಿ ಬದಲಾವಣೆ ಮಾಡಿದಾಗ ಆರೋಗ್ಯದಲ್ಲೂ ಸುಧಾರಣೆಯಾಗುತ್ತದೆ. ಪೋಷಕರು ಕೂಡ ತಮ್ಮ ಮಕ್ಕಳ ಆಹಾರದ ಬಗ್ಗೆ ಗಮನಹರಿಸಬೇಕು. ನಿತ್ಯ ನಿಮಗಾದಷ್ಟು ಹೊತ್ತು ವ್ಯಾಯಾಮ ಮಾಡಬೇಕು. ಅಡುಗೆಯಲ್ಲಿ ಎಣ್ಣೆಯ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು.
ಮತ್ತಷ್ಟು ಓದಿ: Modi Mann Ki Baat: ಭಾರತದ ಸಂವಿಧಾನ ರಚನಾ ಸಭೆಗೆ ಸಂಬಂಧಿಸಿದ ಮಹಾನ್ ನಾಯಕರ ಧ್ವನಿ ಕೇಳಿಸಿದ ಪ್ರಧಾನಿ ಮೋದಿ
ಕರ್ನಾಟಕದಲ್ಲಿ ಪ್ರಾಣಿಗಳ ಸಂತತಿಯನ್ನು ಉಳಿಸಲು ಆದಿವಾಸಿಗಳು ಹೋರಾಡುತ್ತಿದ್ದಾರೆ. ಬಿಆರ್ಟಿ ಟೈಗರ್ ರಿಸರ್ವ್ನಲ್ಲಿ ಸೋಲಗ ಜನಾಂಗ ಹುಲಿಗಳನ್ನು ಸಂರಕ್ಷಣೆ ಮಾಡುತ್ತಿರುವದರಿಂದ ಹುಲಿಗಳ ಸಂತತಿ ಹೆಚ್ಚಿದೆ ಎಂದರು. ಕಳೆದ ತಿಂಗಳು ದೇಶವು ಇಸ್ರೋದ 100 ನೇ ಉಡಾವಣೆಗೆ ಸಾಕ್ಷಿಯಾಯಿತು ಎಂದು ಅವರು ಹೇಳಿದರು. ಇದು ಕೇವಲ ಒಂದು ಸಂಖ್ಯೆಯಲ್ಲ, ಪ್ರತಿದಿನ ಬಾಹ್ಯಾಕಾಶ ವಿಜ್ಞಾನದಲ್ಲಿ ಹೊಸ ಎತ್ತರವನ್ನು ಮುಟ್ಟುವ ನಮ್ಮ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ ಎಂದು ಮೋದಿ ಹೇಳಿದರು.
ಇಸ್ರೋ ಯಶಸ್ಸಿನ ವ್ಯಾಪ್ತಿ ಸಾಕಷ್ಟು ದೊಡ್ಡದಾಗಿದೆ ಎಂದು ಅವರು ಹೇಳಿದರು. ಕಳೆದ 10 ವರ್ಷಗಳಲ್ಲಿ ಸುಮಾರು 460 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ ಮತ್ತು ಇದರಲ್ಲಿ ಇತರ ದೇಶಗಳ ಅನೇಕ ಉಪಗ್ರಹಗಳು ಸೇರಿವೆ. ಇತ್ತೀಚಿನ ವರ್ಷಗಳಲ್ಲಿ, ಬಾಹ್ಯಾಕಾಶ ವಿಜ್ಞಾನದಲ್ಲಿ ನಮ್ಮ ತಂಡದಲ್ಲಿ ಮಹಿಳಾ ಶಕ್ತಿಯ ಭಾಗವಹಿಸುವಿಕೆ ನಿರಂತರವಾಗಿ ಹೆಚ್ಚುತ್ತಿದೆ ಎಂದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ