Poonam Pandey: 3 ದಿನದ ಹಿಂದೆ ಆರಾಮಾಗಿದ್ದ ಪೂನಂ ಪಾಂಡೆ ಕ್ಯಾನ್ಸರ್​ನಿಂದ ನಿಧನ ಎಂದರೆ ನಂಬೋದು ಹೇಗೆ?

|

Updated on: Feb 02, 2024 | 12:21 PM

Poonam Pandey Death News: ವಿವಾದಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದ್ದ ನಟಿ ಪೂನಂ ಪಾಂಡೆ ಅವರು ಕ್ಯಾನ್ಸರ್​ನಿಂದ ನಿಧನರಾದರು ಎಂಬ ಸುದ್ದಿ ಕೇಳಿಬಂದಿದೆ. ಅವರಿಗೆ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಆದರೆ ಕೆಲವರಿಗೆ ಈ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ. ನಿಜಕ್ಕೂ ಅವರಿಗೆ ಅನಾರೋಗ್ಯ ಉಂಟಾಗಿತ್ತಾ ಅಥವಾ ಇದು ಪ್ರಚಾರಕ್ಕಾಗಿ ಮಾಡಿದ ಗಿಮಿಕ್​ ಇರಬಹುದಾ ಎಂಬ ಸಂಶಯ ಕಾಡಿದೆ. ಆ ಬಗ್ಗೆ ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ.

Poonam Pandey: 3 ದಿನದ ಹಿಂದೆ ಆರಾಮಾಗಿದ್ದ ಪೂನಂ ಪಾಂಡೆ ಕ್ಯಾನ್ಸರ್​ನಿಂದ ನಿಧನ ಎಂದರೆ ನಂಬೋದು ಹೇಗೆ?
ಪೂನಂ ಪಾಂಡೆ
Follow us on

ಬಾಲಿವುಡ್​ನ ವಿವಾದಿತ ನಟಿ ಪೂನಂ ಪಾಂಡೆ (Poonam Pandey) ಅವರು ನಿಧನರಾಗಿದ್ದಾರೆ ಎಂದು ಸುದ್ದಿ ಹಬ್ಬಿದೆ. ಈ ವಿಷಯವನ್ನು ಅವರ ಸೋಶಿಯಲ್​ ಮೀಡಿಯಾ ಖಾತೆಯಲ್ಲೇ ಹಂಚಿಕೊಂಡಿರುವುದರಿಂದ ಅಭಿಮಾನಿಗಳಿಗೆ ಶಾಕ್​ ಆಗಿದೆ. ಇಂದು (ಫೆಬ್ರವರಿ 2) ಕ್ಯಾನ್ಸರ್​ನಿಂದ ಅವರು ಮೃತಪಟ್ಟಿದ್ದಾರೆ (Poonam Pandey Death) ಎಂದು ಹೇಳಲಾಗಿದೆ. ಆದರೆ ಈ ಸುದ್ದಿಯನ್ನು ನಂಬಲು ಅವರ ಅಭಿಮಾನಿಗಳು ಸಿದ್ಧರಿಲ್ಲ. ಯಾಕೆಂದರೆ, ಕೇವಲ ಮೂರು ದಿನಗಳ ಹಿಂದೆ ಪೂನಂ ಪಾಂಡೆ ಅವರು ಖುಷಿಖುಷಿಯಿಂದ ಓಡಾಡಿಕೊಂಡಿದ್ದರು. ಆ ಸಂದರ್ಭದ ವಿಡಿಯೋವನ್ನು ಕೂಡ ಅವರು ಸೋಶಿಯಲ್​ ಮೀಡಿಯಾದಲ್ಲಿ (Poonam Pandey Instagram) ಹಂಚಿಕೊಂಡಿದ್ದರು. ಅದನ್ನು ನೋಡಿದ ಅಭಿಮಾನಿಗಳು ಈಗ ಸಾವಿನ ಸುದ್ದಿಯನ್ನು ಬಿಲ್​ಕುಲ್​ ನಂಬುತ್ತಿಲ್ಲ.

ಹಲವು ದಿನಗಳ ಕಾಲ ಕ್ಯಾನ್ಸರ್​ನಿಂದ ಬಳಲಿದ್ದರೆ, ನಂತರ ಚಿಕಿತ್ಸೆ ಫಲಕಾರಿ ಆಗದೇ ನಿಧನರಾದರೆ ನಂಬಬಹುದು. ಆದರೆ ಮೂರು ದಿನಗಳ ಹಿಂದೆ ಚೆನ್ನಾಗಿ ಓಡಾಡಿಕೊಂಡು ಇದ್ದ ಪೂನಂ ಪಾಂಡೆ ಅವರು ಈಗ ಏಕಾಏಕಿ ನಿಧನರಾಗಿದ್ದಾರೆ ಎಂಬ ಸುದ್ದಿಯನ್ನು ಕೇಳಿ ಅಭಿಮಾನಿಗಳಿಗೆ ಗೊಂದಲ ಮೂಡಿದೆ. ಇದು ಪ್ರಚಾರದ ಗಿಮಿಕ್​ ಇರಬಹುದೇ ಎಂದು ಕೂಡ ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮೂರು ದಿನಗಳ ಹಿಂದೆ ಪೂನಂ ಪಾಂಡೆ ಮಾಡಿದ್ದ ಇನ್​ಸ್ಟಾಗ್ರಾಮ್​ ಪೋಸ್ಟ್​:

ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು ಪ್ರಚಾರಕ್ಕಾಗಿ ಹಲವು ರೀತಿಯ ಗಿಮಿಕ್​ ಮಾಡುತ್ತಾರೆ. ಸಿನಿಮಾ, ವೆಬ್​ಸೀರಿಸ್​ ಅಥವಾ ಬ್ರ್ಯಾಂಡ್​ ಪ್ರಮೋಷನ್​ ಸಲುವಾಗಿಯೂ ಹತ್ತಾರು ರೀತಿಯ ನಾಟಕ ಮಾಡಿದ ಉದಾಹರಣೆಗಳು ನಮ್ಮ ಮುಂದೆ ಇವೆ. ಆ ಕಾರಣದಿಂದಲೇ ಪೂನಂ ಪಾಂಡೆ ಅವರ ನಿಧನ ಸುದ್ದಿಯ ಖಚಿತತೆ ಬಗ್ಗೆ ಕೆಲವರಿಗೆ ಪ್ರಶ್ನೆ ಮೂಡಿದೆ. ‘ಸತ್ತಿರುವುದು ನಿಜವಾದ ಪೂನಂ ಪಾಂಡೆನಾ ಅಥವಾ ಪೂನಂ ಹೆಸರಿನ ಬೇರೆ ಯಾರಾದರೂ ಆಗಿರಬಹುದಾ’ ಎಂದು ನೆಟ್ಟಿಗರು ಕಮೆಂಟ್​ ಮೂಲಕ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: Poonam Pandey Death: ಪೂನಂ ಪಾಂಡೆ ನಿಧನ; ಕ್ಯಾನ್ಸರ್​ಗೆ ಬಲಿಯಾದ ಬಾಲಿವುಡ್ ನಟಿ

ನಿಧನದ ಸುದ್ದಿಯನ್ನು ತಿಳಿಸಲು ಪೂನಂ ಪಾಂಡೆ ಅವರ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಾಕಿದ ಪೋಸ್ಟ್​ನಲ್ಲಿ ಪೂರ್ತಿಯಾಗಿ ಪೂನಂ ಪಾಂಡೆ ಎಂಬ ಹೆಸರು ಪ್ರಸ್ತಾಪ ಆಗಿಲ್ಲ. ಕೇವಲ ಪೂನಂ ಎಂದು ಬರೆಯಲಾಗಿದೆ. ಆ ಕಾರಣದಿಂದಲೂ ಕೆಲವರಿಗೆ ಇದು ಗಿಮಿಕ್​ ಇರಬಹುದು ಎಂಬ ಅನುಮಾನ ಬಂದಿದೆ. ಕಮೆಂಟ್​ಗಳ ಮೂಲಕ ನೆಟ್ಟಿಗರು ಇದನ್ನು ಪ್ರಶ್ನಿಸಿದ್ದಾರೆ. ಒಂದು ವೇಳೆ ಪೂನಂ ಪಾಂಡೆ ಕೊನೆಯುಸಿರು ಎಳೆದಿರುವುದು ನಿಜವೇ ಹೌದಾಗಿದ್ದರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಫ್ಯಾನ್ಸ್​ ಕಮೆಂಟ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ