ನಟಿಯರ ಜತೆ ಐಷಾರಾಮಿ ಹೋಟೆಲ್​ಗಳಲ್ಲಿ ನಡೆಯುತ್ತಿತ್ತು ಅಶ್ಲೀಲ ಚಿತ್ರದ ಶೂಟಿಂಗ್; ಎಲ್ಲಾ ಒಟಿಟಿಗಾಗಿ

| Updated By: ರಾಜೇಶ್ ದುಗ್ಗುಮನೆ

Updated on: Nov 21, 2022 | 5:56 PM

ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ರಾಜ್​ ಕುಂದ್ರಾಗೆ ಹಲವು ಸಮಸ್ಯೆಗಳು ಎದುರಾಗಿವೆ. ಕಳೆದ ವರ್ಷ ಮುಂಬೈ ಕ್ರೈಮ್ ಬ್ರ್ಯಾಂಚ್ ಪ್ರತ್ಯೇಕ ಚಾರ್ಜ್​ಶೀಟ್ ದಾಖಲು ಮಾಡಿದೆ.

ನಟಿಯರ ಜತೆ ಐಷಾರಾಮಿ ಹೋಟೆಲ್​ಗಳಲ್ಲಿ ನಡೆಯುತ್ತಿತ್ತು ಅಶ್ಲೀಲ ಚಿತ್ರದ ಶೂಟಿಂಗ್; ಎಲ್ಲಾ ಒಟಿಟಿಗಾಗಿ
Follow us on

ಶಿಲ್ಪಾ ಶೆಟ್ಟಿ (Shilpa Shetty) ಪತಿ, ಉದ್ಯಮಿ ರಾಜ್​ ಕುಂದ್ರಾ (Raj Kundra) ಅವರು ನೀಲಿ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದರು. ನಂತರ ಜಾಮೀನು ಪಡೆದು ಹೊರ ಬಂದಿದ್ದಾರೆ. ಈ ಪ್ರಕರಣದ ತನಿಖೆ ಸದ್ಯ ಪ್ರಗತಿಯಲ್ಲಿದೆ. ಪೊಲೀಸರು ತನಿಖೆ ನಡೆಸಿ ಸಾಕ್ಷ್ಯಗಳನ್ನು ಹುಡುಕುತ್ತಿದ್ದಾರೆ. ಈಗ ಪ್ರಕರಣದಲ್ಲಿ ಮಹಾರಾಷ್ಟ್ರ ಸೈಬರ್ ಪೊಲೀಸರು ಕೆಲ ಗಂಭೀರ ಆರೋಪ ಮಾಡಿದ್ದಾರೆ. ರಾಜ್ ಕುಂದ್ರಾ ಅವರ ಅಸಲಿ ಮುಖ ಏನು ಎಂಬುದನ್ನು ಪೊಲೀಸರು ತೆರೆದಿಟ್ಟಿದ್ದಾರೆ.

ರಾಜ್​ ಕುಂದ್ರಾ ಅವರು ಅಶ್ಲೀಲ ಚಿತ್ರಗಳನ್ನು ಒಟಿಟಿಗಾಗಿ ಸಿದ್ಧಪಡಿಸುತ್ತಿದ್ದರು. ಐಷಾರಾಮಿ ಹೋಟೆಲ್​ನಲ್ಲಿ ನೀಲಿ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ರಾಜ್ ಕುಂದ್ರಾ ಸಿನಿಮಾ ನಿರ್ಮಾಣ ಮಾಡಿದರೆ, ನಟಿ ಶೆರ್ಲಿನ್ ಚೋಪ್ರಾ, ಪೂನಂ ಪಾಂಡೆ ಮೊದಲಾದವರು ಇದರಲ್ಲಿ ನಟಿಸಿದ್ದರು. ರಾಜು ದುಬೆ ಅವರು ಈ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದಾರೆ. ಇವರ ವಿರುದ್ಧ ಸದ್ಯ ಕೇಸ್ ದಾಖಲಾಗಿದೆ. ಕಳೆದ ವಾರ ಮಹಾರಾಷ್ಟ್ರದ ಸೈಬರ್ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ.

ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ರಾಜ್​ ಕುಂದ್ರಾಗೆ ಹಲವು ಸಮಸ್ಯೆಗಳು ಎದುರಾಗಿವೆ. ಕಳೆದ ವರ್ಷ ಮುಂಬೈ ಕ್ರೈಮ್ ಬ್ರ್ಯಾಂಚ್ ಪ್ರತ್ಯೇಕ ಚಾರ್ಜ್​ಶೀಟ್ ದಾಖಲು ಮಾಡಿದೆ.  2019ರಲ್ಲೇ ರಾಜ್ ಕುಂದ್ರಾ ಬಗ್ಗೆ ಈ ರೀತಿಯ ಆರೋಪ ಕೇಳಿ ಬಂದಿತ್ತು. ಸೂಕ್ತ ಸಾಕ್ಷ್ಯ ಕಲೆಹಾಕಿ ಅವರ ಮೇಲೆ ಪೊಲೀಸರು ದಾಳಿ ನಡೆಸಿದ್ದರು.

ಮಹಾರಾಷ್ಟ್ರ ಸೈಬರ್ ಪೊಲೀಸರು ದಾಖಲು ಮಾಡಿರುವ ಚಾರ್ಜ್​ಶೀಟ್​ 450 ಪುಟಗಳನ್ನು ಹೊಂದಿದೆ. ಬನಾನ ಪ್ರೈಮ್ ಒಟಿಟಿ ಮೊದಲಾದವರ ಮೇಲೆ ಕೇಸ್ ದಾಖಲಾಗಿದೆ. ಅಶ್ಲೀಲ ಸಿನಿಮಾಗಳನ್ನು ಇವರು ಒಟಿಟಿಯಲ್ಲಿ ಅಪ್​ಲೋಡ್ ಮಾಡುತ್ತಿದ್ದರು. ಹಲವು ಮಾಡೆಲ್​ಗಳನ್ನು ಇವರು ಬಳಕೆ ಮಾಡಿಕೊಂಡಿದ್ದರು.

ಇದನ್ನೂ ಓದಿ: ಕ್ಯಾಮೆರಾ ಕಣ್ತಪ್ಪಿಸಲು ಮುಖ ಮುಚ್ಚಿಕೊಂಡು ಬಂದ ರಾಜ್ ಕುಂದ್ರಾ!

ರಾಜ್ ಕುಂದ್ರಾ ಅವರನ್ನು ಬಂಧಿಸಿದ ನಂತರದಲ್ಲಿ ಅವರು ಸಾರ್ವಜನಿಕವಾಗಿ ಮುಖ ತೋರಿಸಿಕೊಂಡು ಓಡಾಡಿಲ್ಲ. ವಿಮಾನ ನಿಲ್ದಾಣಗಳಲ್ಲಿ ಅವರು ಮುಖ ಪೂರ್ತಿ ಮುಚ್ಚುವಂತಹ ಮಾಸ್ಕ್ ಧರಿಸಿ ಕಾಣಿಸಿಕೊಂಡಿದ್ದರು. ಈ ಬಗ್ಗೆ ಅನೇಕರಿಂದ ಅವರು ಟೀಕೆಗೆ ಒಳಗಾಗಿದ್ದರು. ರಾಜ್ ಕುಂದ್ರಾ ಮಾಡಿದ ಅವಾಂತರದಿಂದ ಅವರ ಪತ್ನಿ ಶಿಲ್ಪಾ ಶೆಟ್ಟಿ ಸಾಕಷ್ಟು ಮುಜುಗರ ಅನುಭವಿಸಿದ್ದರು.