ದಕ್ಷಿಣ ಭಾರತ ಮತ್ತು ಬಾಲಿವುಡ್ ಚರ್ಚೆ ಇತ್ತೀಚೆಗೆ ಜೊರಾಗಿದೆ. ಕಳೆದ ವರ್ಷ ಬಾಲಿವುಡ್‌ನಲ್ಲಿ ಒಳ್ಳೆಯ ಬಿಸ್ನೆಸ್ ಆಗಿದೆ. ಈ ವರ್ಷ ಈ ವರ್ಷದ ಆರಂಭದಿಂದಲೂ ಸೌತ್ ಇಂಡಸ್ಟ್ರಿ ಸದ್ದು ಮಾಡುತ್ತಿದೆ. ಒಂದು ಕಡೆ ಚರ್ಚೆ ಇದ್ದರೆ ಮತ್ತೊಂದೆಡೆ, ಎರಡೂ ಉದ್ಯಮಗಳ ಕಲಾವಿದರು ಉತ್ಸಾಹದಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಅನೇಕ ಬಾಲಿವುಡ್ ತಾರೆಯರು ಸೌತ್ ಚಿತ್ರಗಳಲ್ಲಿ ನಟಿಸಿದ್ದಾರೆ. ಜಾನ್ವಿ ಕಪೂರ್ (Janhvi Kapoor), ಕಿಯಾರಾ ಅಡ್ವಾಣಿ, ದೀಪಿಕಾ ಪಡುಕೋಣೆ, ಬಾಬಿ ಡಿಯೋಲ್ ಮತ್ತು ಅಕ್ಷಯ್ ಕುಮಾರ್ ಸೇರಿದಂತೆ ಅನೇಕ ತಾರೆಯರು ದಕ್ಷಿಣದತ್ತ ಮುಖ ಮಾಡಿದ್ದಾರೆ. ಅದೇ ರೀತಿ ಅನೇಕ ಸೌತ್ ನಟರು ಬಾಲಿವುಡ್ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಬಾಲಿವುಡ್ ಮತ್ತು ದಕ್ಷಿಣದ ನಟರು ಹಲವು ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಈ ವರ್ಷ, ‘ಬಡೆ ಮಿಯಾ ಛೋಟೆ ಮಿಯಾ’ ಮತ್ತು ಮೇರಿ ಕ್ರಿಸ್ಮಸ್’ನಲ್ಲಿ ದಕ್ಷಿಣದ ನಟರು ಮಿಂಚಿದ್ದಾರೆ. ಬಾಲಿವುಡ್‌ನಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಿದ ಅನೇಕ ದಕ್ಷಿಣ ನಟರಿದ್ದಾರೆ. ಈ ಪೈಕಿ ಕೆಲವರಿಗೆ ಗೆಲುವು ಸಿಕ್ಕಿಲ್ಲ. ಆ ಬಗ್ಗೆ ಇಲ್ಲಿದೆ ವಿವರ.
ವಿಜಯ್ ದೇವರಕೊಂಡ: ಸ್ಪೋರ್ಟ್ಸ್ ಆಕ್ಷನ್ ಚಿತ್ರ ‘ಲೈಗರ್’ನಲ್ಲಿ ವಿಜಯ್ ದೇವರಕೊಂಡ ನಟಿಸಿದ್ದರು. ಪುರಿ ಜಗನ್ನಾಥ್ ನಿರ್ದೇಶನದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಲಿದೆ ಎಂದು ತಂಡ ಭಾವಿಸಿತ್ತು. 2022ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಗೆಲ್ಲಲು ವಿಫಲವಾಯಿತು. 125 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರದಿಂದ ನಿರ್ಮಾಪಕರು ನಷ್ಟ ಅನುಭವಿಸಿದರು.
ರಾಮ್ ಚರಣ್: ರಾಮ್ ಚರಣ್ ಖ್ಯಾತಿ ದಕ್ಷಿಣದ ದೊಡ್ಡ ಮಟ್ಟದಲ್ಲಿದೆ. ‘ಆರ್ಆರ್ಆರ್’ ರೀತಿಯ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಅವರು ಹಿಂದಿಗೆ ಕಾಲಿಡುವ ಪ್ರಯತ್ನ ಮಾಡಿದ್ದರು. 2013ರಲ್ಲಿ ‘ಜಂಜೀರ್’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿತ್ತು. ಚಿತ್ರದಲ್ಲಿ ರಾಮ್ ಚರಣ್ ಮತ್ತು ಪ್ರಿಯಾಂಕಾ ಚೋಪ್ರಾ ನಟಿಸಿದ್ದರು. ‘ಜಂಜೀರ್’ ಚಿತ್ರದ ಮೂಲಕ ರಾಮಚರಣ್ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಇದು 1973 ರಲ್ಲಿ ಬಿಡುಗಡೆಯಾದ ಅಮಿತಾಭ್ ಬಚ್ಚನ್ ಅವರ ಸೂಪರ್ ಹಿಟ್ ಚಿತ್ರ ‘ಜಂಜೀರ್’ನ ರಿಮೇಕ್ ಆಗಿತ್ತು. ಸಹಜವಾಗಿಯೇ ರಾಮಚರಣ್ ಈ ಚಿತ್ರದಿಂದ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದರು. 60 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಸುಮಾರು 22 ಕೋಟಿ ಗಳಿಸಿತ್ತು.
ನಾಗ ಚೈತನ್ಯ: ನಾಗ ಚೈತನ್ಯ ಅವರು 2022ರಲ್ಲಿ ಬಿಡುಗಡೆಯಾದ ಆಮಿರ್ ಖಾನ್ ಅವರ ‘ಲಾಲ್ ಸಿಂಗ್ ಚಡ್ಡಾ’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಚಿತ್ರದಲ್ಲಿ ಅವರು ಭಾರತೀಯ ಸೇನೆಯಲ್ಲಿರುವ ಆಮಿರ್ ಖಾನ್ ಅವರ ಸ್ನೇಹಿತನ ಪಾತ್ರವನ್ನು ನಿರ್ವಹಿಸಿದ್ದರು. ಆದರೆ, ಸಿನಿಮಾ ಸೋತಿದೆ.
ಪೃಥ್ವಿರಾಜ್ ಸುಕುಮಾರನ್: ಮಲಯಾಳಂ ಚಿತ್ರರಂಗದ ಟಾಪ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಈ ವರ್ಷ ಎರಡು ದೊಡ್ಡ ಚಿತ್ರಗಳೊಂದಿಗೆ ಬಂದಿದ್ದಾರೆ. ‘ಆಡುಜೀವಿತಂ’ ಸಿನಿಮಾ ಸೂಪರ್ ಹಿಟ್ ಆಯಿತು. ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ನಟನೆಯ ‘ಬಡೇ ಮಿಯಾ ಚೋಟೆ ಮಿಯಾ’ ಚಿತ್ರದಲ್ಲಿ ಪೃಥ್ವಿರಾಜ್ ವಿಲನ್ ಪಾತ್ರ ಮಾಡಿದ್ದರು. ಆದರೆ, ಸಿನಿಮಾ ಸೋತಿದೆ. ಈ ಮೊದಲು ಅವರು 2012ರಲ್ಲಿ ಬಿಡುಗಡೆಯಾದ ‘ಅಯ್ಯ’ ಹೆಸರಿನ ಹಿಂದಿ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ಸೋತಿತ್ತು.
ಸೂರ್ಯ: ಶೀಘ್ರದಲ್ಲೇ ‘ಕಂಗುವ’ ಸಿನಿಮಾ ಮೂಲಕ ಸೂರ್ಯ ಅವರು ತೆರೆಮೇಲೆ ಬರಲಿದ್ದಾರೆ. ದಕ್ಷಿಣದಲ್ಲಿ ಇದು ಬಾಬಿ ಡಿಯೋಲ್ ಅವರ ಚೊಚ್ಚಲ ಚಿತ್ರವಾಗಿದೆ. ಸೂರ್ಯ ಬಹಳ ಹಿಂದೆಯೇ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. 2010ರಲ್ಲಿ ‘ರಕ್ತ ಚರಿತ್ರೆ 2’ ಚಿತ್ರದಲ್ಲಿ ಸೂರ್ಯ ನಟಿಸಿದ್ದರು. ರಾಮ್ ಗೋಪಾಲ್ ವರ್ಮಾ ಅವರ ಈ ಗ್ಯಾಂಗ್‌ಸ್ಟರ್ ಚಿತ್ರದ ಮೂಲಕ ಸೂರ್ಯ ಹಿಂದಿ ಮತ್ತು ತೆಲುಗು ಎರಡೂ ಉದ್ಯಮಗಳಲ್ಲಿ ಪಾದಾರ್ಪಣೆ ಮಾಡಿದರು. ಆದರೆ, ಸಿನಿಮಾ ಸೋತಿದೆ.
ಇದನ್ನೂ ಓದಿ: ಪ್ರಭಾಸ್ ಡ್ರೈವ್ ಮಾಡಿದ್ದ ‘ಬುಜ್ಜಿ’ ಕಾರನ್ನು ಓಡಿಸಿ ಶಾಕ್ ಆದ ನಾಗ ಚೈತನ್ಯ
ಪ್ರಭಾಸ್: ‘ಸಹೋ’ ಸಿನಿಮಾದಲ್ಲಿ ಪ್ರಭಾಸ್ ನಟಿಸಿದ್ದರು. ಈ ಸಿನಿಮಾನ ಸುಜೀತ್ ನಿರ್ದೇಶಿಸಿದ್ದಾರೆ. ಇದು ಪ್ರಭಾಸ್ ಅವರ ಮೊದಲ ಬಾಲಿವುಡ್ ಚಿತ್ರ ಎನ್ನಲಾಗಿದೆ. ಇದು ತೆಲುಗಿನಲ್ಲೂ ಸಿದ್ಧವಾಗಿತ್ತು. ಈ ಸಿನಿಮಾ ಹೀನಾಯವಾಗಿ ಸೋತಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.