ಧರಿಸಿದ ಬಟ್ಟೆ ಮಾರಾಟಕ್ಕಿಟ್ಟ ದೀಪಿಕಾ ಪಡುಕೋಣೆ; ಕೆಲವೇ ನಿಮಿಷದಲ್ಲಿ ಸೋಲ್ಡ್​ ಔಟ್

ಪ್ರೆಗ್ನೆಂಟ್​ ಆಗಿರುವ ದೀಪಿಕಾ ಪಡುಕೋಣೆ ಅವರು ತಮ್ಮ ಬಟ್ಟೆ ಮಾರಾಟ ಮಾಡಿ ಗಮನ ಸೆಳೆದಿದ್ದಾರೆ. ಇದರಿಂದ ಬಂದ ಹಣವನ್ನು ಅವರು ಚಾರಿಟಿಗೆ ಬಳಕೆ ಮಾಡಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್​ ಮೀಡಿಯಾ ಮೂಲಕ ಮಾಹಿತಿ ನೀಡಿದ್ದಾರೆ. ನಟಿಯ ಈ ಸಮಾಜಮುಖಿ ಕಾರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಈ ಕಾಸ್ಟ್ಯೂಮ್​ನ ಫೋಟೋ ವೈರಲ್ ಆಗಿತ್ತು.

ಧರಿಸಿದ ಬಟ್ಟೆ ಮಾರಾಟಕ್ಕಿಟ್ಟ ದೀಪಿಕಾ ಪಡುಕೋಣೆ; ಕೆಲವೇ ನಿಮಿಷದಲ್ಲಿ ಸೋಲ್ಡ್​ ಔಟ್
ದೀಪಿಕಾ ಪಡುಕೋಣೆ
Follow us
ಮದನ್​ ಕುಮಾರ್​
|

Updated on: May 27, 2024 | 10:18 PM

ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಈಗ ಸಿನಿಮಾಗಿಂತಲೂ ಹೆಚ್ಚಾಗಿ ವೈಯಕ್ತಿಕ ಕಾರಣಕ್ಕೆ ಹೆಚ್ಚು ಸುದ್ದಿ ಆಗುತ್ತಿದ್ದಾರೆ. ಸದ್ಯ ಪ್ರೆಗ್ನೆಂಟ್​ (Pregnant) ಆಗಿರುವ ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಕೆಲವೇ ದಿನಗಳ ಹಿಂದೆ ದೀಪಿಕಾ ಪಡುಕೋಣೆ ಅವರು ಹಳದಿ ಬಣ್ಣದ ಗೌನ್​ ಧರಿಸಿ ಕಾಣಿಸಿಕೊಂಡಿದ್ದರು. ಆ ಬಟ್ಟೆಯನ್ನು (Deepika Padukone Dress) ಅವರೀಗ ಮಾರಾಟ ಮಾಡಿದ್ದಾರೆ. ಈ ರೀತಿ ಮಾರಾಟ ಮಾಡಿ, ಅದರಿಂದ ಬಂದ ಹಣವನ್ನು ಅವರು ಸಮಾಜಮುಖಿ ಕಾರ್ಯಕ್ಕೆ ಬಳಕೆ ಮಾಡಲಿದ್ದಾರೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ..

ಪ್ರೆಗ್ನೆಂಟ್​ ಆದ ಕಾರಣ ದೀಪಿಕಾ ಪಡುಕೋಣೆ ಅವರು ಸಡಿಲವಾದ ಗೌನ್​ ಧರಿಸಿ ಕಾಣಿಸಿಕೊಂಡಿದ್ದರು. ತಮ್ಮದೇ ಕಂಪನಿಯ ಪ್ರಚಾರದ ಸಲುವಾಗಿ ಅವರು ಈ ಬಟ್ಟೆ ಧರಿಸಿ ಬಂದಿದ್ದರು. ಅದರ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇಂದು (ಮೇ 27) ಆ ಬಟ್ಟೆಯನ್ನು ಅವರು ಸೇಲ್​ ಮಾಡಿದ್ದಾರೆ. 34 ಸಾವಿರ ರೂಪಾಯಿಗೆ ಈ ಕಾಸ್ಟ್ಯೂಮ್​ ಮಾರಾಟ ಆಗಿದೆ.

ಈ ಬಟ್ಟೆ ಮಾರಾಟಕ್ಕಿದೆ ಎಂದು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ದೀಪಿಕಾ ಪಡುಕೋಣೆ ಅವರು ಫೋಟೋ ಶೇರ್​ ಮಾಡಿಕೊಂಡಿದ್ದರು. ಅವರು ಆ ಫೋಟೋ ಹಂಚಿಕೊಂಡ ಕೆಲವೇ ನಿಮಿಷಗಳಲ್ಲಿ 34 ಸಾವಿರ ರೂಪಾಯಿಗೆ ಸೇಲ್​ ಆಗಿದೆ. ಆ ಹಣವನ್ನು ಚಾರಿಟಿಗೆ ನೀಡಿರುವ ಬಗ್ಗೆಯೂ ದೀಪಿಕಾ ಪಡುಕೋಣೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಈ ಕಾರ್ಯಕ್ಕೆ ಅಭಿಮಾನಿಗಳು ಭೇಷ್ ಎಂದಿದ್ದಾರೆ.

ಇದನ್ನೂ ಓದಿ: ಹೊಸ ಫೋಟೋಗಳಲ್ಲಿ ಪಳಪಳನೆ ಹೊಳೆದ ಪ್ರೆಗ್ನೆಂಟ್​ ದೀಪಿಕಾ ಪಡುಕೋಣೆ

ಗರ್ಭಿಣಿ ಆಗಿರುವುದರಿಂದ ದೀಪಿಕಾ ಪಡುಕೋಣೆ ಅವರು ಸದ್ಯಕ್ಕೆ ಸಿನಿಮಾ ಕೆಲಸಗಳಿಗೆ ಬ್ರೇಕ್​ ನೀಡಿದ್ದಾರೆ. ಇನ್ನೂ ಹಲವು ತಿಂಗಳ ಕಾಲ ಅವರು ಯಾವುದೇ ಹೊಸ ಪ್ರಾಜೆಕ್ಟ್​ಗಳಲ್ಲಿ ಭಾಗಿ ಆಗುವುದಿಲ್ಲ. ಈಗಾಗಲೇ ಅವರು ನಟಿಸಿರುವ ‘ಕಲ್ಕಿ 2898 ಎಡಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲಿ ಅವರು ಪ್ರಭಾಸ್​ ಜೊತೆ ತೆರೆ ಹಂಚಿಕೊಂಡಿದ್ದಾರೆ. ಜೂನ್​ 27ರಂದು ಈ ಚಿತ್ರ ರಿಲೀಸ್​ ಆಗಲಿದೆ. ಅದಲ್ಲದೇ, ‘ಸಿಂಗಂ ಅಗೇನ್​’ ಸಿನಿಮಾದಲ್ಲೂ ದೀಪಿಕಾ ಪಡುಕೋಣೆ ಅವರು ಒಂದು ಪ್ರಮುಖ ಪಾತ್ರ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್