ಬಾಲಿವುಡ್ನ ಖ್ಯಾತ ನಟ ಸಲ್ಮಾನ್ ಖಾನ್ (Salman Khan) ಅವರು ಡಿಸೆಂಬರ್ 27ರಂದು ಜನ್ಮದಿನ ಆಚರಿಸಿಕೊಂಡರು. 58ನೇ ವರ್ಷಕ್ಕೆ ಕಾಲಿಟ್ಟ ಅವರಿಗೆ ಅನೇಕರು ಶುಭಾಶಯ ತಿಳಿಸಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೇ ಹಲವು ಸೆಲೆಬ್ರಿಟಿಗಳು ಕೂಡ ವಿಶ್ ಮಾಡಿದ್ದಾರೆ. ಚಿತ್ರರಂಗದಲ್ಲಿ ಬಹುತೇಕರ ಜೊತೆ ಸಲ್ಮಾನ್ ಖಾನ್ ಸ್ನೇಹ ಹೊಂದಿದ್ದಾರೆ. ಹಿಂದಿ ಚಿತ್ರರಂಗದ ಜನಪ್ರಿಯ ನಟಿ ಪ್ರೀತಿ ಜಿಂಟಾ (Preity Zinta) ಕೂಡ ಸಲ್ಲುಗೆ ಬೆಸ್ಟ್ ಫ್ರೆಂಡ್. ಸಲ್ಮಾನ್ ಖಾನ್ ಹುಟ್ಟುಹಬ್ಬದ (Salman Khan Birthday) ಸಲುವಾಗಿ ಪ್ರೀತಿ ಜಿಂಟಾ ಅವರು ಒಂದು ಸ್ಪೆಷಲ್ ಫೋಟೋ ಹಂಚಿಕೊಂಡು ‘ನನ್ನ ಡಾರ್ಲಿಂಗ್’ ಎಂದು ಕರೆದಿದ್ದಾರೆ.
ಈ ವರ್ಷದ ಸಲ್ಮಾನ್ ಖಾನ್ ಬರ್ತ್ಡೇ ಸೆಲೆಬ್ರೇಷನ್ನಲ್ಲಿ ನೇರವಾಗಿ ಭಾಗಿಯಾಗಲು ಪ್ರೀತಿ ಜಿಂಟಾ ಅವರಿಗೆ ಸಾಧ್ಯವಾಗಿಲ್ಲ. ಹಾಗಾಗಿ ಅವರು ಒಂದು ಹಳೇ ಫೋಟೋವನ್ನು ಹಂಚಿಕೊಂಡಿದ್ದಾರೆ. ದೂರದಿಂದಲೇ ತಮ್ಮ ಬೆಸ್ಟ್ ಫ್ರೆಂಡ್ಗೆ ಅವರು ಶುಭಾಶಯ ತಿಳಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರು ಹಂಚಿಕೊಂಡ ಈ ಪೋಸ್ಟ್ ಸಖತ್ ವೈರಲ್ ಆಗಿದೆ. ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಸಲ್ಮಾನ್ ಖಾನ್ ಜೊತೆ ಫೋಟೋ ತೆಗೆದುಕೊಳ್ಳಲು ಬಂದು ಕಿಸ್ ಮಾಡಿದ ಮಹಿಳೆ
‘ನನ್ನ ಡಾರ್ಲಿಂಗ್ ಸಲ್ಮಾನ್ ಖಾನ್ಗೆ ಜನ್ಮದಿನದ ಶುಭಾಶಯ. ನೀವು ಯಾವಾಗಲೂ ಶೈನ್ ಆಗುವುದನ್ನು, ನಗುತ್ತಿರುವುದನ್ನು ನೋಡಲು ನಾನು ಬಯಸುತ್ತೇನೆ. ಜನ್ಮದಿನದ ಸಲುವಾಗಿ ಅಪ್ಪುಗೆ ನೀಡಲು ನಾನು ಈಗ ನಿಮ್ಮ ಜೊತೆ ಇಲ್ಲ. ಆ ಕೆಲಸವನ್ನು ಈ ಫೋಟೋ ಮಾಡಲಿದೆ. ಹ್ಯಾಪಿ ಬರ್ತ್ಡೇ. ಎಂದೆಂದಿಗೂ ನನ್ನ ಸ್ನೇಹಿತ’ ಎಂದು ಪ್ರೀತಿ ಜಿಂಟಾ ಅವರು ಪೋಸ್ಟ್ ಮಾಡಿದ್ದಾರೆ.
ನಟನಾಗಿ, ನಿರ್ಮಾಪಕನಾಗಿ, ನಿರೂಪಕನಾಗಿ ಸಲ್ಮಾನ್ ಖಾನ್ ಅವರು ಬ್ಯುಸಿ ಆಗಿದ್ದಾರೆ. ವಯಸ್ಸು 58 ವರ್ಷ ಆಗಿದ್ದರೂ ಕೂಡ ಅವರು ಮದುವೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಈ ಹಿಂದೆ ಅನೇಕ ನಟಿಯರ ಜೊತೆ ಅವರು ಡೇಟಿಂಗ್ ಮಾಡಿದ್ದರು. ಆದರೆ ಯಾರನ್ನೂ ಮದುವೆ ಆಗಲಿಲ್ಲ. ಸದ್ಯಕ್ಕಂತೂ ಅವರು ಶಾದಿ ಬಗ್ಗೆ ಆಲೋಚನೆಯೇ ಮಾಡಿದಂತಿಲ್ಲ. ಸಿನಿಮಾ ಕೆಲಸಗಳು ಮತ್ತು ಬಿಗ್ ಬಾಸ್ ಶೋ ನಿರೂಪಣೆಯಲ್ಲಿ ಅವರು ಸಕ್ರಿಯರಾಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.