ನಟಿ ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕದ ಪಾಪ್ ಸಿಂಗರ್ ನಿಕ್ ಜೋನಸ್ ಅವರನ್ನು ಮದುವೆ ಆಗಿ ಅಮೆರಿಕದಲ್ಲಿ ಸೆಟಲ್ ಆಗಿದ್ದಾರೆ. ಅಷ್ಟೇ ಅಲ್ಲ, ಪ್ರಿಯಾಂಕಾ ಅಮೆರಿಕದಲ್ಲಿ ಹೋಟೆಲ್ ಉದ್ಯಮ ಕೂಡ ಆರಂಭಿಸಿದ್ದಾರೆ. ಈ ಮಧ್ಯೆ ಪ್ರಿಯಾಂಕಾ ಅವರು ಭಾರತದಲ್ಲಿ ತಾವು ಹೊಂದಿರುವ ಮನೆಗಳನ್ನು ಮಾರಾಟ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.
ಪ್ರಿಯಾಂಕಾ ಬಾಲಿವುಡ್ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ಅವರು ಮುಂಬೈನಲ್ಲೇ ಸೆಟಲ್ ಆಗಿದ್ದರು. ಈ ಸಂದರ್ಭದಲ್ಲಿ ಸಾಕಷ್ಟು ಮನೆಗಳನ್ನು ಪ್ರಿಯಾಂಕಾ ಹೊಂದಿದ್ದರು. ಈಗ ಅವರು ತಮ್ಮ ಒಡೆತನದ ಎರಡು ಮನೆ ಮಾರಾಟ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಮುಂಬೈನ ಪಶ್ಚಿಮ ಅಂಧೇರಿಯ ವರ್ಸೋವಾದಲ್ಲಿರುವ ಅಪಾರ್ಟ್ಮೆಂಟ್ನ ಎರಡು ಫ್ಲಾಟ್ಗಳನ್ನು ಅವರು ಮಾರಿದ್ದಾರೆ.
ವರ್ಸೋವಾದಲ್ಲಿರುವ ಅಪಾರ್ಟ್ಮೆಂಟ್ನ ಏಳನೇ ಫ್ಲೋರ್ನಲ್ಲಿರುವ 888 ಚದರ ಅಡಿ ಫ್ಲಾಟ್ಅನ್ನು ಮೂರು ಕೋಟಿ ರೂಪಾಯಿಗೆ ಹಾಗೂ ಅದೇ ಫ್ಲೋರ್ನಲ್ಲಿರುವ 1219 ಚದರ ಅಡಿ ಫ್ಲಾಟ್ ಅನ್ನು 4 ಕೋಟಿ ರೂಪಾಯಿಗೆ ಮಾರಲಾಗಿದೆ. ಇದಕ್ಕೆ ಅವರು ಅನುಕ್ರಮವಾಗಿ 9 ಲಕ್ಷ ಹಾಗೂ 12 ಲಕ್ಷ ರೂಪಾಯಿ ಸ್ಟಾಂಪ್ ಡ್ಯೂಟಿ ಕಟ್ಟಿದ್ದಾರೆ.
ಇನ್ನು, ಪಶ್ಚಿಮ ಅಂಧೇರಿಯ ಓಶಿವರಾದಲ್ಲಿರುವ ಕಟ್ಟಡವನ್ನು ಬಾಡಿಗೆಗೆ ನೀಡಿದ್ದಾರೆ. ಈ ಕಟ್ಟಡದಿಂದ ಅವರಿಗೆ ಪ್ರತಿ ತಿಂಗಳು 2.11 ಲಕ್ಷ ರೂಪಾಯಿ ಬಾಡಿಗೆ ಬರುತ್ತಿದೆ. ಈ ವರ್ಷದ ಆರಂಭದಲ್ಲಿ ಮುಂಬೈನ ಲೋಂಖಂಡ್ವಾಲಾದ ಕಾಂಪ್ಲೆಕ್ಸ್ನಲ್ಲಿರುವ ಮನೆಯನ್ನು 2 ಕೋಟಿ ರೂಪಾಯಿಗೆ ಪ್ರಿಯಾಂಕಾ ಮಾರಾಟ ಮಾಡಿದ್ದರು.
ಪ್ರಿಯಾಂಕಾ ಚೋಪ್ರಾ ಜುಲೈ 18ರಂದು 39ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಈ ವಿಶೇಷ ದಿನದಂದು ಅವರ ಕುಟುಂಬದವರು, ಗೆಳೆಯರಿಂದ ಸಾಕಷ್ಟು ಗಿಫ್ಟ್ ಸಿಕ್ಕಿದೆ. ಇದರಲ್ಲಿ ಅವರ ಪತಿ ನೀಡಿದ ವೈನ್ ಬಾಟಲಿ ವಿಶೇಷವಾಗಿತ್ತು. ನಿಕ್ 1982 ಶಟೊ ಮೂಟೌನ್ ರೋಥ್‌ಚೈಲ್ಡ್ ವೈನ್ ಬಾಟಲಿಯನ್ನು ಪ್ರಿಯಾಂಕಾಗೆ ನೀಡಿದ್ದರು. ಈ ಫೋಟೋವನ್ನು ಪ್ರಿಯಾಂಕಾ ಚೋಪ್ರಾ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿ ಸಂಭ್ರಮಿಸಿದ್ದರು. 750 ಎಂಎಲ್ ಬಾಟಲಿಯ ಈ ವೈನ್ಗೆ 1,31,375 ರೂಪಾಯಿ ಎನ್ನಲಾಗಿದೆ.
ಇದನ್ನೂ ಓದಿ: 750 ಎಂಎಲ್ ವೈನ್ಗೆ 1.31 ಲಕ್ಷ ರೂಪಾಯಿ; ಪ್ರಿಯಾಂಕಾಗೆ ಪತಿಯಿಂದ ಸಿಕ್ಕ ಈ ವಿಶೇಷ ಗಿಫ್ಟ್ ಏಕಿಷ್ಟು ದುಬಾರಿ?
‘ಪ್ರಿಯಾಂಕಾ ಚೋಪ್ರಾ ದಾಂಪತ್ಯ ಜೀವನ ಹತ್ತು ವರ್ಷಗಳಲ್ಲಿ ಕೊನೆಯಾಗಲಿದೆ’; ಭವಿಷ್ಯ ನುಡಿದ ವಿವಾದಿತ ನಟ