ಖ್ಯಾತ ನಿರ್ದೇಶಕ/ನಿರ್ಮಾಪಕ ಕರಣ್ ಜೋಹರ್ (Karan Johar) ಅವರು ಹಲವು ಕಾರಣಗಳಿಂದಾಗಿ ಸುದ್ದಿ ಆಗುತ್ತಾರೆ. ಅನೇಕ ಬಾರಿ ನೆಟ್ಟಿಗರಿಂದ ಅವರು ಟೀಕೆಗೂ ಒಳಗಾಗುವುದುಂಟು. ಈಗ ಒಂದು ವಿಚಾರಕ್ಕಾಗಿ ಅವರಿಗೆ ಎಲ್ಲರೂ ಭೇಷ್ ಎನ್ನುತ್ತಿದ್ದಾರೆ. ಇತ್ತೀಚೆಗೆ ಕರಣ್ ಜೋಹರ್ ಅವರು ವಿದೇಶಕ್ಕೆ ತೆರಳಿದ್ದರು. ಅಲ್ಲಿಂದ ವಾಪಸ್ ಬರುವಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ಅವರು ಪಾಪರಾಜಿ (Paparazzi) ಕ್ಯಾಮೆರಾಗಳ ಕಣ್ಣಿಗೆ ಕಾಣಿಸಿಕೊಂಡರು. ಕರಣ್ ಜೋಹರ್ ಜೊತೆ ಮಕ್ಕಳಾದ ಯಶ್ ಮತ್ತು ರೂಹಿ (Yash and Roohi) ಕೂಡ ಇದ್ದರು. ಈ ವೇಳೆ ಮಕ್ಕಳಿಗೆ ಕರಣ್ ಜೋಹರ್ ಅವರು ನಮಸ್ತೆ ಮಾಡುವುದು ಕಲಿಸಿದ್ದಾರೆ. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತುಂಬ ಕ್ಯೂಟ್ ಆಗಿದೆ ಎಂದು ಕೂಡ ಅನೇಕರು ಕಮೆಂಟ್ ಮಾಡುತ್ತಿದ್ದಾರೆ.
ಸಾಮಾನ್ಯವಾಗಿ ಸೆಲೆಬ್ರಿಟಿಗಳನ್ನು ಕಂಡಾಗ ಅವರ ಫೋಟೋ ಮತ್ತು ವಿಡಿಯೋಗಾಗಿ ಪಾಪರಾಜಿಗಳು ಮುಗಿಬೀಳಿತ್ತಾರೆ. ಸ್ಟಾರ್ ಕಿಡ್ಗಳನ್ನು ಕಂಡಾಗಲೂ ಇದೇ ಪರಿಸ್ಥಿತಿ ಇರುತ್ತದೆ. ಆಗ ಸೆಲೆಬ್ರಿಟಿಗಳು ಮತ್ತು ಅವರ ಮಕ್ಕಳು ಸಿಡಿಮಿಡಿ ಮಾಡಿದ ಪ್ರಸಂಗಗಳು ಸಾಕಷ್ಟಿವೆ. ಆದರೆ ಕರಣ್ ಜೋಹರ್ ಅವರು ಆ ರೀತಿ ಮಾಡಿಲ್ಲ. ತುಂಬ ಸೌಮ್ಯವಾಗಿ ನಡೆದುಕೊಂಡಿದ್ದಾರೆ.
‘ಹೇಗಿದ್ದೀರಿ ಸರ್’ ಎಂದು ಪಾಪರಾಜಿಗಳು ಕೇಳಿದ ಪ್ರಶ್ನೆಗೆ ಕರಣ್ ಜೋಹರ್ ಉತ್ತರಿಸಿದ್ದಾರೆ. ‘ಪಾಪರಾಜಿಗಳಿಗೆ ನಮಸ್ತೆ ಮಾಡಿ’ ಎಂದು ಮಕ್ಕಳಿಗೆ ಅವರು ಹೇಳಿಕೊಟ್ಟಿದ್ದಾರೆ. ಎರಡೂ ಕೈಗಳನ್ನು ಜೋಡಿಸಿ ಯಶ್ ಮತ್ತು ರೂಹಿ ನಮಸ್ತೆ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕರಣ್ ಜೋಹರ್ ಅವರು ಮಕ್ಕಳ ಫೋಟೋ ಮತ್ತು ವಿಡಿಯೋಗಳನ್ನು ಆಗಾಗ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಅವುಗಳಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಾರೆ.
ಸದ್ಯ ಹಲವು ಕೆಲಸಗಳಲ್ಲಿ ಕರಣ್ ಜೋಹರ್ ಬ್ಯುಸಿ ಆಗಿದ್ದಾರೆ. ನಿರೂಪಕನಾಗಿಯೂ ಅವರು ತುಂಬ ಫೇಮಸ್. ‘ಕಾಫಿ ವಿತ್ ಕರಣ್ ಸೀಸನ್ 7’ ಶೋ ಅನ್ನು ಅವರು ನಡೆಸಿಕೊಡುತ್ತಿದ್ದಾರೆ. ಇದರ ಜೊತೆಗೆ ಆಲಿಯಾ ಭಟ್ ಮತ್ತು ರಣಬೀರ್ ಸಿಂಗ್ ನಟನೆಯ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾಗೆ ಕರಣ್ ಜೋಹರ್ ನಿರ್ದೇಶನ ಮಾಡುತ್ತಿದ್ದಾರೆ. ಈ ವರ್ಷ ಅವರು 50ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಅನೇಕ ಸ್ಟಾರ್ ಕಿಡ್ಗಳನ್ನು ಲಾಂಚ್ ಮಾಡುವ ಉಸ್ತುವಾರಿಯನ್ನೂ ಅವರು ವಹಿಸಿಕೊಂಡಿದ್ದಾರೆ.
ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ-ನಿಕ್ ಜೋನಸ್ ಸಂಸಾರದ ಗುಟ್ಟು ರಟ್ಟು ಮಾಡ್ತಾರಾ ಕರಣ್ ಜೋಹರ್?
‘ನಾವು ‘ಕೆಜಿಎಫ್’ ರೀತಿಯ ಸಿನಿಮಾ ಮಾಡಿದ್ರೆ ಕಟು ಟೀಕೆ ವ್ಯಕ್ತವಾಗುತ್ತಿತ್ತು’: ಕರಣ್ ಜೋಹರ್ ಆರೋಪ