ಶಿಲ್ಪಾ ಶೆಟ್ಟಿ (Shilpa Shetty) ಪತಿ, ಉದ್ಯಮಿ ರಾಜ್ ಕುಂದ್ರಾ (Raj Kundra) ಬಗ್ಗೆ ಶಾಕಿಂಗ್ ಆದಂತಹ ವಿವರಗಳು ಹೊರಬರುತ್ತಲೇ ಇವೆ. ನೀಲಿ ಚಿತ್ರಗಳ ದಂಧೆಯಲ್ಲಿ ತೊಡಗಿಕೊಂಡ ಅವರೀಗ ಪೊಲೀಸರ ಅತಿಥಿ ಆಗಿದ್ದಾರೆ. ಅತ್ತ ಅವರು ಅರೆಸ್ಟ್ ಆಗುತ್ತಿದ್ದಂತೆಯೇ ಅನೇಕ ನಟಿಯರ ಹೆಸರು ಕೂಡ ಹೊರಬರುತ್ತಿವೆ. ಅಶ್ಲೀಲ ಸಿನಿಮಾಗಳನ್ನು ತಯಾರಿಸಿ, ಆ್ಯಪ್ಗಳ ಮೂಲಕ ಹಣ ಸಂಪಾದನೆ ಮಾಡುವ ಈ ಕೃತ್ಯದಲ್ಲಿ ಹಲವು ಸುಂದರಿಯರು ಭಾಗಿ ಆಗಿರುವ ಸಾಧ್ಯತೆ ದಟ್ಟವಾಗಿದೆ. ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ರಾಜ್ ಕುಂದ್ರಾ ಜೊತೆ ಒಡನಾಟ ಹೊಂದಿದ್ದ ಅನೇಕ ನಟಿಯರು ಈಗ ಸುದ್ದಿ ಆಗುತ್ತಿದ್ದಾರೆ.
ಬಾಲಿವುಡ್ ನಟಿ ಶರ್ಲಿನ್ ಚೋಪ್ರಾ ಅವರು ಕೂಡ ನೀಲಿ ಚಿತ್ರಗಳ ದಂಧೆಯಲ್ಲಿ ಭಾಗಿ ಆಗಿದ್ದರು. ಈ ಬಗ್ಗೆ ಅವರನ್ನು ಪೊಲೀಸರು ಈ ಮೊದಲೇ ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ ರಾಜ್ ಕುಂದ್ರಾ ಬಗ್ಗೆ ಶರ್ಲಿನ್ ಚೋಪ್ರಾ ಬಾಯಿ ಬಿಟ್ಟಿದ್ದರು. ‘ಈ ದಂಧೆಗೆ ರಾಜ್ ಕುಂದ್ರಾ ನನ್ನನ್ನು ನೂಕಿದರು’ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ. ಪ್ರತಿ ಪ್ರಾಜೆಕ್ಟ್ನಲ್ಲಿ ಶರ್ಲಿನ್ ಚೋಪ್ರಾಗೆ 30 ಲಕ್ಷ ರೂ. ಸಿಗುತ್ತಿತ್ತು. ಆ ರೀತಿ 15ರಿಂದ 30 ಪ್ರಾಜೆಕ್ಟ್ಗಳಲ್ಲಿ ರಾಜ್ ಕುಂದ್ರಾ ಜೊತೆ ಶರ್ಲಿನ್ ಚೋಪ್ರಾ ಕೆಲಸ ಮಾಡಿದ್ದರು ಎಂಬುದು ಮೂಲಗಳ ಮಾಹಿತಿ.
2019ರಲ್ಲಿಯೇ ನಟಿ ಪೂನಂ ಪಾಂಡೆ ಮತ್ತು ರಾಜ್ ಕುಂದ್ರಾ ನಡುವೆ ಕಿರಿಕ್ ಆಗಿತ್ತು. ತಮ್ಮ ಮೊಬೈಲ್ ಆ್ಯಪ್ಗಾಗಿ ಪೂನಂ ಅವರು ರಾಜ್ ಕುಂದ್ರಾ ಜೊತೆ ಕೈ ಜೋಡಿಸಿದ್ದರು. ಆದರೆ ಅವರಿಬ್ಬರ ವ್ಯವಹಾರದಲ್ಲಿ ಜಟಾಪಟಿ ಉಂಟಾಯಿತು. ತಮ್ಮ ಫೋಟೋ ಮತ್ತು ವಿಡಿಯೋಗಳನ್ನು ಅನುಮತಿ ಇಲ್ಲದೆ ರಾಜ್ ಕುಂದ್ರಾ ಬಳಸಿಕೊಳ್ಳುತ್ತಿದ್ದಾರೆ ಎಂದು ಪೂನಂ ಪಾಂಡೆ ತಕರಾರು ತೆಗೆದಿದ್ದರು. ಪೂನಂ ಪಾಂಡೆ ಕೂಡ ಮಾದಕ ಫೋಟೋ ಮತ್ತು ವಿಡಿಯೋಗಳ ಮೂಲಕ ಜನಪ್ರಿಯರಾಗಿದ್ದಾರೆ.
ರಾಜ್ ಕುಂದ್ರಾ ನಡೆಸುತ್ತಿದ್ದ ಅಶ್ಲೀಲ ಸಿನಿಮಾ ದಂಧೆಯಲ್ಲಿ ನಟಿ-ಮಾಡೆಲ್ ಗೆಹನಾ ವಸಿಷ್ಠ ಕೂಡ ಅರೆಸ್ಟ್ ಆಗಿದ್ದಾರೆ. ಈ ಬಗ್ಗೆ ಗೆಹನಾ ಪರ ವಕ್ತಾರರು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಗೆಹನಾ ಬೋಲ್ಡ್ ದೃಶ್ಯಗಳಲ್ಲಿ ನಟಿಸುತ್ತಿದ್ದರು. ಅದನ್ನು ಅಶ್ಲೀಲ/ನೀಲಿ ಚಿತ್ರಗಳ ಜೊತೆ ಹೋಲಿಸಬಾರದು. ಮುಂಬೈ ಪೊಲೀಸರ ಮೇಲೆ ನಮಗೆ ನಂಬಿಕೆ ಇದೆ. ಯಾರು ನಿಜವಾದ ಅಪರಾಧಿಗಳು ಎಂಬುದನ್ನು ನ್ಯಾಯಾಲಯ ನಿರ್ಧರಿಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಸದ್ಯ ಗೆಹನಾ ಜಾಮೀನು ಪಡೆದು ಹೊರಬಂದಿದ್ದಾರೆ.
ಇದನ್ನೂ ಓದಿ:
ಪಾರ್ನ್ ದಂಧೆ ಆರೋಪ; ನಟಿ ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ ಜುಲೈ 23ರವರೆಗೆ ಪೊಲೀಸ್ ಕಸ್ಟಡಿಗೆ
Published On - 5:19 pm, Wed, 21 July 21