Raj Kundra: ‘ನಾವು ಬೇರೆ ಆಗಿದ್ದೇವೆ’ ಅಂತ ರಾಜ್​ ಕುಂದ್ರಾ ಹೇಳಿದ್ದು ಶಿಲ್ಪಾ ಶೆಟ್ಟಿ ಬಗ್ಗೆ ಅಲ್ಲ; ಅಸಲಿ ವಿಷಯ ಬಯಲು

|

Updated on: Oct 20, 2023 | 5:41 PM

UT 69: ಶಿಲ್ಪಾ ಶೆಟ್ಟಿ ಮತ್ತು ರಾಜ್​ ಕುಂದ್ರಾ ಡಿವೋರ್ಸ್​ ಪಡೆದಿಲ್ಲ. ಆ ರೀತಿಯ ಆಲೋಚನೆಯೂ ಅವರಿಗೆ ಬಂದಿಲ್ಲ. ಸದ್ಯಕ್ಕೆ ಅವರ ಸಂಸಾರ ಚೆನ್ನಾಗಿಯೇ ನಡೆಯುತ್ತಿದೆ. ಆದರೂ ಕೂಡ ರಾಜ್​ ಕುಂದ್ರಾ ಹೀಗೆ ಪೋಸ್ಟ್​ ಮಾಡಲು ಒಂದು ಕಾರಣ ಇದೆ. ಈಗ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಒಂದು ಪ್ರಮುಖ ನಿರ್ಧಾರಕ್ಕೆ ಬಂದಿದ್ದಾರೆ.

Raj Kundra: ‘ನಾವು ಬೇರೆ ಆಗಿದ್ದೇವೆ’ ಅಂತ ರಾಜ್​ ಕುಂದ್ರಾ ಹೇಳಿದ್ದು ಶಿಲ್ಪಾ ಶೆಟ್ಟಿ ಬಗ್ಗೆ ಅಲ್ಲ; ಅಸಲಿ ವಿಷಯ ಬಯಲು
ಶಿಲ್ಪಾ ಶೆಟ್ಟಿ, ರಾಜ್​ ಕುಂದ್ರಾ
Follow us on

ಉದ್ಯಮಿ ರಾಜ್​ ಕುಂದ್ರಾ (Raj Kundra) ಅವರು ಅಶ್ಲೀಲ ಸಿನಿಮಾ ನಿರ್ಮಾಣದ ಆರೋಪದ ಮೇಲೆ ಜೈಲು ವಾಸ ಅನುಭವಿಸಿ ಬಂದಿದ್ದಾರೆ. ಈ ಕಳಂಕದಿಂದ ಅವರಿಗೆ ಪತ್ನಿ ಶಿಲ್ಪಾ ಶೆಟ್ಟಿ ವಿಚ್ಛೇದನ (Divorce) ನೀಡಬಹುದು ಎಂದು ಅನೇಕರು ಊಹಿಸಿದ್ದರು. ಆದರೆ ಹಾಗಾಗಲಿಲ್ಲ. ಪತಿಯ ಜೊತೆ ಶಿಲ್ಪಾ ಶೆಟ್ಟಿ (Shilpa Shetty) ಹೊಂದಿಕೊಂಡು ಸಂಸಾರ ಮುಂದುವರಿಸಿದರು. ಹಾಗಿದ್ದರೂ ಕೂಡ ರಾಜ್​ ಕುಂದ್ರಾ ಅವರು ಇತ್ತೀಚೆಗೆ ಮಾಡಿದ ಪೋಸ್ಟ್​ನಿಂದ ಅಭಿಮಾನಿಗಳ ವಲಯದಲ್ಲಿ ಅನುಮಾನ ವ್ಯಕ್ತವಾಗಿತ್ತು. ‘ನಾವಿಬ್ಬರೂ ಬೇರೆ ಆಗಿದ್ದೇವೆ. ಈ ಕಷ್ಟದ ಸಮಯದಲ್ಲಿ ನಮಗೆ ಕಾಲಾವಕಾಶ ನೀಡಿ ಅಂತ ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ’ ಎಂದು ರಾಜ್​ ಕುಂದ್ರಾ ಬರೆದುಕೊಂಡಿದ್ದು ಭಾರಿ ಚರ್ಚೆ ಹುಟ್ಟುಹಾಕಿತ್ತು. ಈಗ ಅದರ ಹಿಂದಿನ ಅಸಲಿ ಕಹಾನಿ ಏನು ಎಂಬುದನ್ನು ತೆರೆದಿಟ್ಟಿದ್ದಾರೆ.

ಶಿಲ್ಪಾ ಶೆಟ್ಟಿ ಮತ್ತು ರಾಜ್​ ಕುಂದ್ರಾ ಅವರು ಡಿವೋರ್ಸ್​ ಪಡೆದಿಲ್ಲ. ಆ ರೀತಿಯ ಯಾವುದೇ ಆಲೋಚನೆ ಕೂಡ ಅವರಿಗೆ ಬಂದಿಲ್ಲ. ಸದ್ಯಕ್ಕಂತೂ ಅವರ ಸಂಸಾರ ಚೆನ್ನಾಗಿಯೇ ನಡೆಯುತ್ತಿದೆ. ಹಾಗಿದ್ದರೂ ಕೂಡ ರಾಜ್​ ಕುಂದ್ರಾ ಹೀಗೆ ಪೋಸ್ಟ್​ ಮಾಡಲು ಒಂದು ಪ್ರಮುಖ ಕಾರಣ ಇದೆ. ಈಗ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಒಂದು ಪ್ರಮುಖ ನಿರ್ಧಾರಕ್ಕೆ ಬಂದಿದ್ದಾರೆ. ಇಷ್ಟು ದಿನ ಮುಖ ಮುಚ್ಚಿಕೊಂಡು ಓಡಾಡುತ್ತಿದ್ದ ರಾಜ್​ ಕುಂದ್ರಾ ಅವರು ಮಾಸ್ಕ್​ಗೆ ಗುಡ್​ಬೈ ಹೇಳಲು ನಿರ್ಧರಿಸಿದ್ದಾರೆ.

‘ನಾವಿಬ್ಬರೂ ಬೇರೆ ಆಗಿದ್ದೇವೆ’ ಎಂದು ರಾಜ್​ ಕುಂದ್ರ ಹೇಳಿರುವುದು ಮಾಸ್ಕ್​ ಬಗ್ಗೆ. ಅದೀಗ ಸ್ಪಷ್ಟವಾಗಿದೆ. ಹೊಸ ಪೋಸ್ಟ್ ಮೂಲಕ ಅವರು ಆ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಮಾಸ್ಕ್​ಗಳಿಗೆ ವಿದಾಯ. ಇದು ಬೇರೆ ಆಗುವ ಸಮಯ. ಕಳೆದ ಎರಡು ವರ್ಷಗಳಿಂದ ನನ್ನನ್ನು ಕಾಪಾಡಿದ್ದಕ್ಕಾಗಿ ಧನ್ಯವಾದಗಳು’ ಎಂದು ರಾಜ್​ ಕುಂದ್ರಾ ಬರೆದುಕೊಂಡಿದ್ದಾರೆ. ಅಲ್ಲದೇ ಇಷ್ಟು ದಿನ ತಾವು ಧರಿಸಿದ ವಿವಿಧ ಬಗೆಯ ಮಾಸ್ಕ್​ಗಳ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: Raj Kundra: ಮಗಳ ಜತೆ ಮುಖ ತೋರಿಸಲಾಗದೇ ​ಓಡಿ ಹೋದ ರಾಜ್​ ಕುಂದ್ರಾ; ಹಣೆ ಚಚ್ಚಿಕೊಂಡ ಶಿಲ್ಪಾ ಶೆಟ್ಟಿ

ರಾಜ್​ ಕುಂದ್ರಾ ಈಗ ನಟ ಕೂಡ ಹೌದು. ಅವರು ನಟಿಸಿರುವ ‘ಯುಟಿ 69’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ಟ್ರೇಲರ್​ ಇತ್ತೀಚೆಗೆ ಬಿಡುಗಡೆಯಾಗಿ ಗಮನ ಸೆಳೆದಿದೆ. ಆರ್ಥರ್​ ರೋಡ್​ ಜೈಲಿನಲ್ಲಿ ರಾಜ್​ ಕುಂದ್ರಾ ಅವರು ಕಳೆದ ದಿನಗಳನ್ನೇ ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಜೈಲಿನಲ್ಲಿ ಅವರು ಅನುಭವಿಸಿದ ಕಷ್ಟಗಳನ್ನು ಮನರಂಜನೆಯ ಶೈಲಿಯಲ್ಲಿ ತೆರೆಗೆ ತರಲಾಗಿದೆ. ಈ ಸಿನಿಮಾ ನವೆಂಬರ್​ 3ರಂದು ಬಿಡುಗಡೆ ಆಗಲಿದೆ. ಅದರ ಪ್ರಚಾರದ ಸಲುವಾಗಿ ರಾಜ್​ ಕುಂದ್ರಾ ಸಿಕ್ಕಾಪಟ್ಟೆ ಗಿಮಿಕ್​ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.