Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹ್ಯಾಕ್​ ಆಯ್ತಾ ಅನಿಲ್​ ಕಪೂರ್​ ಇನ್​ಸ್ಟಾಗ್ರಾಮ್​ ಖಾತೆ? ಎಲ್ಲ ಫೋಟೋಗಳು ಏಕಾಏಕಿ ಮಾಯ

ಸೆಲೆಬ್ರಿಟಿಗಳು ಏನೇನೋ ತಂತ್ರ ರೂಪಿಸುತ್ತಾರೆ. ಅನಿಲ್​ ಕಪೂರ್​ ಕೂಡ ಈಗ ತಮ್ಮ ಸಿನಿಮಾ ಅಥವಾ ಬ್ರ್ಯಾಂಡ್​ ಪ್ರಮೋಷನ್​ ಸಲುವಾಗಿ ಈ ರೀತಿ ಮಾಡಿರಬಹುದು ಎಂದು ಹೇಳಲಾಗುತ್ತಿದೆ. ಇನ್ನೂ ಕೆಲವರು ‘ಮಿಸ್ಟರ್​ ಇಂಡಿಯಾ 2’ ಸಿನಿಮಾವನ್ನು ಘೋಷಿಸುವ ಸಲುವಾಗಿ ಹೀಗೆ ಮಾಡಿರುವ ಸಾಧ್ಯತೆ ಇದೆ ಎಂದು ಊಹಿಸಿದ್ದಾರೆ.

ಹ್ಯಾಕ್​ ಆಯ್ತಾ ಅನಿಲ್​ ಕಪೂರ್​ ಇನ್​ಸ್ಟಾಗ್ರಾಮ್​ ಖಾತೆ? ಎಲ್ಲ ಫೋಟೋಗಳು ಏಕಾಏಕಿ ಮಾಯ
ಅನಿಲ್​ ಕಪೂರ್
Follow us
ಮದನ್​ ಕುಮಾರ್​
|

Updated on: Oct 21, 2023 | 7:07 AM

ಸೆಲೆಬ್ರಿಟಿಗಳು ತುಂಬ ಆ್ಯಕ್ಟೀವ್​ ಆಗಿ ಸೋಶಿಯಲ್​ ಮೀಡಿಯಾ ಬಳಸುತ್ತಾರೆ. ಇನ್​ಸ್ಟಾಗ್ರಾಮ್​ (Instagram) ಖಾತೆಯ ಮೂಲಕ ಪ್ರತಿಯೊಂದು ಅಪ್​ಡೇಟ್​ ನೀಡುತ್ತಾರೆ. ಒಳ್ಳೊಳ್ಳೆಯ ಫೋಟೋ ಅಪ್​ಲೋಡ್​ ಮಾಡುವ ಮೂಲಕ ಫಾಲೋವರ್ಸ್​ ಹೆಚ್ಚಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಸೆಲೆಬ್ರಿಟಿಗಳ ಖಾತೆ ಹ್ಯಾಕ್​ (Hack) ಆಗುತ್ತದೆ. ಈಗ ಅನಿಲ್​ ಕಪೂರ್​ ಅವರ ಇನ್​ಸ್ಟಾಗ್ರಾಮ್​ ಅಕೌಂಟ್​ ಕೂಡ ಹ್ಯಾಕ್​ ಆಗಿದೆಯೇ ಎಂಬ ಅನುಮಾನ ಮೂಡಿದೆ. ಇದಕ್ಕೆ ಕಾರಣ ಇಷ್ಟೇ.. ಅವರ ಖಾತೆಯಲ್ಲಿ ಇರುವ ಎಲ್ಲ ಫೋಟೋಗಳು ಮಾಯ ಆಗಿವೆ. ಯಾಕೆ ಹೀಗಾಯ್ತು ಎಂದು ಅನಿಲ್​ ಕಪೂರ್​ (Anil Kapoor) ಅವರು ಸದ್ಯಕ್ಕಂತೂ ಉತ್ತರ ನೀಡಿಲ್ಲ. ಅಭಿಮಾನಿಗಳು ಒಂದೊಂದು ರೀತಿಯಲ್ಲಿ ಊಹೆ ಮಾಡುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು ಬಹಳ ಗಿಮಿಕ್​ ಮಾಡುತ್ತಾರೆ. ಪ್ರಚಾರಕ್ಕಾಗಿ ಸೋಶಿಯಲ್​ ಮೀಡಿಯಾದಲ್ಲಿ ಏನೇನೋ ತಂತ್ರ ರೂಪಿಸುತ್ತಾರೆ. ಅನಿಲ್​ ಕಪೂರ್​ ಕೂಡ ಈಗ ತಮ್ಮ ಸಿನಿಮಾ ಅಥವಾ ಬ್ರ್ಯಾಂಡ್​ ಪ್ರಮೋಷನ್​ ಸಲುವಾಗಿ ಈ ರೀತಿ ಮಾಡಿರಬಹುದು ಎಂದು ಹೇಳಲಾಗುತ್ತಿದೆ. ಇನ್ನೂ ಕೆಲವರು ‘ಮಿಸ್ಟರ್​ ಇಂಡಿಯಾ 2’ ಸಿನಿಮಾವನ್ನು ಘೋಷಿಸುವ ಸಲುವಾಗಿ ಹೀಗೆ ಮಾಡಿರುವ ಸಾಧ್ಯತೆ ಇದೆ ಎಂದು ಊಹಿಸಿದ್ದಾರೆ. ಆದರೆ ಅದನ್ನು ಅನಿಲ್​ ಕಪೂರ್​ ಸಹೋದರ ಬೋನಿ ಕಪೂರ್​ ತಳ್ಳಿಹಾಕಿದ್ದಾರೆ.

ಇದನ್ನೂ ಓದಿ: ಅಣ್ಣನ ಮಗಳ ವಿಡಿಯೋ ವಿಚಾರದಲ್ಲಿ ತಪ್ಪು ಮಾಡಿದ ಅನಿಲ್​ ಕಪೂರ್​; ಹಿಗ್ಗಾಮುಗ್ಗಾ ಟ್ರೋಲ್​

‘ಮಿಸ್ಟರ್ ಇಂಡಿಯಾ’ ಸಿನಿಮಾ 1987ರಲ್ಲಿ ಬಿಡುಗಡೆ ಆಗಿತ್ತು. ಯಾರಿಗೂ ಕಾಣಿಸಿದ ವ್ಯಕ್ತಿಯ ಪಾತ್ರವನ್ನು ಅನಿಲ್​ ಕಪೂರ್​ ಮಾಡಿದ್ದರು. ಆ ಚಿತ್ರಕ್ಕೆ ಬೋನಿ ಕಪೂರ್​ ನಿರ್ದೇಶನ ಮಾಡಿದ್ದರು. ‘ಮಿಸ್ಟರ್​ ಇಂಡಿಯಾ 2’ ಯಾವಾಗ ಬರಲಿದೆ ಎಂದು ಫ್ಯಾನ್ಸ್​ ಕಾದಿದ್ದಾರೆ. ಈಗ ಈ ಸಿನಿಮಾ ಸೆಟ್ಟೇರಲು ಸಕಲ ಸಿದ್ಧತೆ ಆಗಿರಬಹುದು. ಈ ಪ್ರಾಜೆಕ್ಟ್​ ಅನೌನ್ಸ್​ ಮಾಡುವ ಸಲುವಾಗಿಯೇ ತಮ್ಮ ಫೋಟೋಗಳನ್ನು ಅನಿಲ್​ ಕಪೂರ್​ ಮಾಡಿರಬಹುದು ಎಂಬುದು ನೆಟ್ಟಿಗರ ಅಭಿಪ್ರಾಯ.

ಇದನ್ನೂ ಓದಿ: ‘ಇಂಥ ಕೆಲಸ ಮಾಡ್ಬೇಡಿ’: ಎಲ್ಲರ ಎದುರು ಕರಣ್​ ಜೋಹರ್​ಗೆ ಅನಿಲ್​ ಕಪೂರ್ ವಾರ್ನಿಂಗ್​; ವಿಡಿಯೋ ವೈರಲ್​​

ಈ ಕುರಿತಂತೆ ಬೋನಿ ಕಪೂರ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ನೋಡ್ತೀನಿ ಇರಿ. ನಾನು ಇನ್ನೂ ಅವರ ಇನ್​ಸ್ಟಾಗ್ರಾಮ್​ ಅಕೌಂಟ್​ ನೋಡಿಲ್ಲ. ಏನೋ ತೋರಿಸಬೇಕು ಅಂತ ಅವರು ನನಗೆ ಹೇಳಿಲ್ಲ. ‘ಮಿಸ್ಟರ್​ ಇಂಡಿಯಾ 2’ ಚಿತ್ರಕ್ಕೆ ಒಂದು ಹಂತದ ಮಾತುಕಥೆ ಪೂರ್ಣವಾದ ಬಳಿಕ ಮಾತ್ರ ಆ ಬಗ್ಗೆ ಮಾತನಾಡುತ್ತೇನೆ’ ಎಂದು ಬೋನಿ ಕಪೂರ್​ ಹೇಳಿದ್ದಾರೆ. ಸದ್ಯಕ್ಕೆ ಅನಿಲ್​ ಕಪೂರ್​ ಅವರು ‘ಅನಿಮಲ್​’ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾದ ಪ್ರಚಾರಕ್ಕಾಗಿಯೂ ಅವರು ಫೋಟೋಗಳನ್ನು ಡಿಲೀಟ್​ ಮಾಡುವ ಗಿಮಿಕ್​ ಮಾಡಿರಬಹುದು ಎಂದು ಕೆಲವರು ಊಹಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ