ಅಣ್ಣನ ಮಗಳ ವಿಡಿಯೋ ವಿಚಾರದಲ್ಲಿ ತಪ್ಪು ಮಾಡಿದ ಅನಿಲ್​ ಕಪೂರ್​; ಹಿಗ್ಗಾಮುಗ್ಗಾ ಟ್ರೋಲ್​

ಅನಿಲ್​ ಕಪೂರ್​ ಅವರು ಕಣ್ತಪ್ಪಿನಿಂದ ಈ ವಿಡಿಯೋವನ್ನು ಲೈಕ್​ ಮಾಡಿರಬಹುದು ಎಂಬುದು ಕೆಲವರ ವಾದ. ‘ಅನಿಲ್​ ಕಪೂರ್​ ಅವರಿಗೆ ಈ ವಿಡಿಯೋದಲ್ಲಿ ಏನಿದೆ ಎಂಬುದು ಅರ್ಥವೇ ಆಗಿಲ್ಲ. ಅವರ ತಲೆ ಖಾಲಿ’ ಎಂದು ಕೂಡ ಒಂದಷ್ಟು ಮಂದಿ ಕಾಲೆಳೆದಿದ್ದಾರೆ. ಒಟ್ಟಿನಲ್ಲಿ ಈ ವಿಚಾರ ಚರ್ಚೆಗೆ ಒಳಗಾಗುತ್ತಿದೆ.

ಅಣ್ಣನ ಮಗಳ ವಿಡಿಯೋ ವಿಚಾರದಲ್ಲಿ ತಪ್ಪು ಮಾಡಿದ ಅನಿಲ್​ ಕಪೂರ್​; ಹಿಗ್ಗಾಮುಗ್ಗಾ ಟ್ರೋಲ್​
ಜಾನ್ವಿ ಕಪೂರ್​, ಅನಿಲ್ ಕಪೂರ್​
Follow us
TV9 Web
| Updated By: ಮದನ್​ ಕುಮಾರ್​

Updated on:Sep 23, 2023 | 3:40 PM

ಬಾಲಿವುಡ್​ನಲ್ಲಿ ಕಪೂರ್​ ಕುಟುಂಬದ ಅನೇಕರು ಆ್ಯಕ್ಟೀವ್​ ಆಗಿದ್ದಾರೆ. ನಟ ಅನಿಲ್​ ಕಪೂರ್​ ಮತ್ತು ನಿರ್ಮಾಪಕ ಬೋನಿ ಕಪೂರ್​ ಸಹೋದರರು. ಬೋನಿ ಕಪೂರ್​ ಮತ್ತು ಶ್ರೀದೇವಿ ದಂಪತಿಯ ಮಕ್ಕಳಾದ ಜಾನ್ವಿ ಕಪೂರ್ ಹಾಗೂ ಖುಷಿ ಕಪೂರ್​ ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹಲವು ಕಾರಣಗಳಿಂದಾಗಿ ಜಾನ್ವಿ ಕಪೂರ್​ (Janhvi Kapoor) ಅವರು ಟ್ರೋಲ್​ ಆಗುತ್ತಾರೆ. ಅವರು ಅಂದವಾಗಿ ಕಾಣಲು ಪ್ಲಾಸ್ಟಿಕ್​ ಸರ್ಜರಿ (Plastic Surgery) ಮಾಡಿಸಿಕೊಂಡಿದ್ದಾರೆ ಎಂಬ ಮಾತು ಆಗಾಗ ಕೇಳಿಬರುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದ ಒಂದು ವಿಡಿಯೋ ವೈರಲ್​ ಆಗಿದೆ. ಅದನ್ನು ಅನಿಲ್​ ಕಪೂರ್​ (Anil Kapoor) ಲೈಕ್​ ಮಾಡಿದ್ದಾರೆ! ಅಣ್ಣನ ಮಗಳನ್ನು ಟ್ರೋಲ್​ ಮಾಡಿದ ವಿಡಿಯೋವನ್ನು ಅವರು ಆಕಸ್ಮಿಕವಾಗಿ ಲೈಕ್​ ಮಾಡಿದರೋ ಅಥವಾ ಉದ್ದೇಶಪೂರ್ವಕಾಗಿ ಲೈಕ್​ ಬಟನ್​ ಒತ್ತಿದ್ದಾರೋ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

ಅನೇಕ ನಟಿಯರು ಪ್ಲಾಸ್ಟಿಕ್​ ಸರ್ಜರಿಗೆ ಒಳಗಾದ ಉದಾಹರಣೆ ಇದೆ. ಜಾನ್ವಿ ಕಪೂರ್​ ಮತ್ತು ಖುಷಿ ಕಪೂರ್​ ಕೂಡ ಸುಂದರವಾಗಿ ಕಾಣಬೇಕು ಎಂಬ ಉದ್ದೇಶದಿಂದ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂಬುದು ಅನೇಕರ ವಾದ. ಆ ವಿಚಾರಕ್ಕೆ ಸಂಬಂಧಿಸಿದಂತೆ ಇನ್​ಸ್ಟಾಗ್ರಾಮ್​ನಲ್ಲಿ ವೈರಲ್​ ಆಗಿರುವ ವಿಡಿಯೋವನ್ನು ಅನಿಲ್​ ಕಪೂರ್​ ಲೈಕ್​ ಮಾಡಿದ್ದಾರೆ. ‘ಶ್ರೀದೇವಿಯ ಮಕ್ಕಳನ್ನು ಕಂಡರೆ ಅನಿಲ್​ ಕಪೂರ್​ಗೆ ಪ್ರೀತಿ ಇಲ್ಲ. ಆ ಕಾರಣದಿಂದಲೇ ಅವರು ಇಂಥ ವಿಡಿಯೋವನ್ನು ಲೈಕ್​ ಮಾಡಿದ್ದಾರೆ’ ಎಂದು ಅನೇಕರು ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ: ಜಾನ್ವಿ ಕಪೂರ್​ ನಿಜ ಜೀವನದಲ್ಲೂ ನಟನೆ ಮಾಡ್ತಾರೆ ಅಂತ ಟ್ರೋಲ್​ ಮಾಡಿದ ನೆಟ್ಟಿಗರು; ಕಾರಣ ಏನು?

ಆ ವಿಡಿಯೋದಲ್ಲಿ ಏನಿದೆ?

ನಟ-ನಟಿಯರು ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಳ್ಳುವುದರಲ್ಲಿ ತಪ್ಪು ಇಲ್ಲ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅವರು ದೇಹದ ಅಂದವನ್ನು ಹೆಚ್ಚಿಸಿಕೊಳ್ಳುತ್ತಾರೆ. ಆದರೆ ಅದನ್ನು ಎಂದಿಗೂ ಅವರು ಒಪ್ಪಿಕೊಳ್ಳುವುದಿಲ್ಲ. ಇದೇ ನಿಜವಾದ ಸೌಂದರ್ಯ ಎಂಬ ರೀತಿಯಲ್ಲಿ ಜನರ ಎದುರು ವರ್ತಿಸುತ್ತಾರೆ. ಇದರಿಂದ ಜನಸಾಮಾನ್ಯರನ್ನು ದಾರಿ ತಪ್ಪಿಸಿದಂತೆ ಆಗುತ್ತದೆ ಎಂದು ಈ ವಿಡಿಯೋದಲ್ಲಿ ಹೇಳಲಾಗಿದೆ. ಅದಕ್ಕೆ ಉದಾಹರಣೆಯಾಗಿ ಜಾನ್ವಿ ಕಪೂರ್​, ಖುಷಿ ಕಪೂರ್​ ಅವರ ಫೋಟೋವನ್ನು ಬಳಸಲಾಗಿದೆ. ಅದನ್ನು ಅನಿಲ್​ ಕಪೂರ್​ ಲೈಕ್​ ಮಾಡಿದ್ದಾರೆ.

Anil kapoor likes reel talking about his niece’s surgeries byu/Mellow-sid inBollyBlindsNGossip

ಅನಿಲ್​ ಕಪೂರ್​ ಅವರು ಕಣ್ತಪ್ಪಿನಿಂದ ಈ ವಿಡಿಯೋವನ್ನು ಲೈಕ್​ ಮಾಡಿರಬಹುದು ಎಂಬುದು ಕೆಲವರ ವಾದ. ‘ಅನಿಲ್​ ಕಪೂರ್​ ಅವರಿಗೆ ಈ ವಿಡಿಯೋದಲ್ಲಿ ಏನಿದೆ ಎಂಬುದು ಅರ್ಥವೇ ಆಗಿಲ್ಲ. ಅವರ ತಲೆ ಖಾಲಿ’ ಎಂದು ಕೂಡ ಒಂದಷ್ಟು ಮಂದಿ ಕಾಲೆಳೆದಿದ್ದಾರೆ. ಒಟ್ಟಿನಲ್ಲಿ ಈ ವಿಚಾರವನ್ನು ಇಟ್ಟುಕೊಂಡು ಸೋಶಿಯಲ್​ ಮಿಡಿಯಾದಲ್ಲಿ ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ. ಸಿನಿಮಾ ವಿಚಾರಕ್ಕೆ ಬರುವುದಾದರೆ, ಅನಿಲ್​ ಕಪೂರ್​ ಅವರು ‘ಅನಿಮಲ್​’ ಚಿತ್ರದಲ್ಲಿ ನಟಿಸಿದ್ದಾರೆ. ಆ ಸಿನಿಮಾ ಡಿ.1ರಂದು ಬಿಡುಗಡೆ ಆಗಲಿದೆ. ಅತ್ತ, ಜಾನ್ವಿ ಕಪೂರ್​ ಅವರು ‘ಬವಾಲ್​’ ಸಿನಿಮಾದ ನಟನೆಗೆ ಮೆಚ್ಚುಗೆ ಪಡೆದಿದ್ದಾರೆ. ‘ದೇವರ’, ‘ಮಿಸ್ಟರ್​ ಆ್ಯಂಡ್​ ಮಿಸಸ್​ ಮಾಹಿ’ ಮುಂತಾದ ಚಿತ್ರಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:22 pm, Sat, 23 September 23

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್