ಜಾನ್ವಿ ಕಪೂರ್​ ನಿಜ ಜೀವನದಲ್ಲೂ ನಟನೆ ಮಾಡ್ತಾರೆ ಅಂತ ಟ್ರೋಲ್​ ಮಾಡಿದ ನೆಟ್ಟಿಗರು; ಕಾರಣ ಏನು?

Janhvi Kapoor: ರಿಯಲ್​ ಲೈಫ್​ನಲ್ಲಿ ಹೀಗೆಲ್ಲ ನಾಟಕ ಮಾಡುವ ಅವಶ್ಯಕತೆ ಏನಿದೆ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ. ಇವುಗಳಿಗೆ ಜಾನ್ವಿ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕು.

ಜಾನ್ವಿ ಕಪೂರ್​ ನಿಜ ಜೀವನದಲ್ಲೂ ನಟನೆ ಮಾಡ್ತಾರೆ ಅಂತ ಟ್ರೋಲ್​ ಮಾಡಿದ ನೆಟ್ಟಿಗರು; ಕಾರಣ ಏನು?
ಜಾನ್ವಿ ಕಪೂರ್​
Follow us
ಮದನ್​ ಕುಮಾರ್​
|

Updated on: Aug 04, 2023 | 7:47 PM

ಬಾಲಿವುಡ್​ ನಟಿ ಜಾನ್ವಿ ಕಪೂರ್​ (Janhvi Kapoor) ಅವರು ಆಗಾಗ ಟ್ರೋಲ್​ (Troll) ಆಗುತ್ತಲೇ ಇರುತ್ತಾರೆ. ನಟನೆಯ ವಿಚಾರದಲ್ಲಿ ಅವರು ಮಾಗಿಲ್ಲ ಎಂಬುದು ಅನೇಕರ ಅಭಿಪ್ರಾಯ. ಶ್ರೀದೇವಿಯ ಮಗಳು ಎಂಬ ಕಾರಣಕ್ಕೆ ಅವರಿಗೆ ಸುಲಭವಾಗಿ ಅವಕಾಶಗಳು ಸಿಕ್ಕವು. ಆದರೆ ಜಾನ್ವಿ ಕಪೂರ್​ ಅವರ ನಟನೆಗೆ ಮೆಚ್ಚುಗೆ ಸಿಕ್ಕಿದ್ದು ಕಡಿಮೆ. ಇತ್ತೀಚೆಗೆ ಅವರು ನಟಿಸಿದ ‘ಬವಾಲ್​’ (Bawaal) ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿ ಗಮನ ಸೆಳೆಯಿತು. ಆ ಚಿತ್ರದಲ್ಲಿ ಅವರು ವರುಣ್​ ಧವನ್​ಗೆ ಜೋಡಿಯಾಗಿ ನಟಿಸಿದ್ದಾರೆ. ‘ದಂಗಲ್​’ ಖ್ಯಾತಿಯ ನಿತೀಶ್​ ತಿವಾರಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಜಾನ್ವಿ ಕಪೂರ್​ ಅವರು ಹೇಗೆ ನಟಿಸುತ್ತಾರೆ ಎಂಬುದಕ್ಕಿಂತಲೂ ಹೆಚ್ಚಾಗಿ ರಿಯಲ್​ ಲೈಫ್​ನಲ್ಲಿ ಅವರು ನಾಟಕ ಮಾಡ್ತಾರೆ ಎಂಬ ಬಗ್ಗೆ ಈಗ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣ ಆಗಿರುವುದು ಒಂದು ವಿಡಿಯೋ.

ಜಾನ್ವಿ ಕಪೂರ್​ ಎಲ್ಲೇ ಹೋದರೂ ಪಾಪರಾಜಿಗಳು ಮುತ್ತಿಕೊಳ್ಳುತ್ತಾರೆ ಎಂಬುದು ನಿಜ. ಜಿಮ್​, ವಿಮಾನ ನಿಲ್ದಾಣ, ರೆಸ್ಟೋರೆಂಟ್​.. ಹೀಗೆ ಎಲ್ಲಿಯೇ ಕಾಣಿಸಿಕೊಂಡರೂ ಅವರ ಫೋಟೋ ಮತ್ತು ವಿಡಿಯೋಗಾಗಿ ಪಾಪರಾಜಿಗಳು ಬೆನ್ನು ಬೀಳುತ್ತಾರೆ. ಹಾಗಾಗಿ ಪಾಪರಾಜಿಗಳ ಪರಿಚಯ ಜಾನ್ವಿ ಕಪೂರ್​ ಅವರಿಗೆ ಚೆನ್ನಾಗಿಯೇ ಇದೆ. ಹಾಗಿದ್ದರೂ ಕೂಡ ಪಾಪರಾಜಿಗಳನ್ನು ನೋಡಿ ಹೆದರಿಕೊಂಡಂತೆ ಜಾನ್ವಿ ನಟಿಸಿದ್ದಾರೆ. ಆ ವಿಡಿಯೋ ವೈರಲ್​ ಆಗಿದೆ.

ಇತ್ತೀಚೆಗೆ ಜಾನ್ವಿ ಕಪೂರ್​ ಅವರು ಮುಂಬೈನಲ್ಲಿ ಕಾಣಿಸಿಕೊಂಡರು. ಅವರು ಕಾರಿನಿಂದ ಇಳಿಯುವಾಗ ಪಾಪರಾಜಿಗಳು ಎದುರಾದರು. ಅವರನ್ನು ನೋಡಿ ಜಾನ್ವಿ ಕಪೂರ್​ ಅವರು ಗಾಬರಿ ಆದಂತೆ ಕಂಡರು. ಆದರೆ ನಿಜವಾಗಿಯೂ ಅವರಿಗೆ ಗಾಬರಿ ಆಗಿಲ್ಲ ಎಂಬುದು ನೆಟ್ಟಿಗರ ವಾದ. ಇದು ಜನರ ಗಮನ ಸೆಳೆಯಲು ಅವರು ಮಾಡಿದ ನಾಟಕ. ರಿಯಲ್​ ಲೈಫ್​ನಲ್ಲಿ ಹೀಗೆಲ್ಲ ನಾಟಕ ಮಾಡುವ ಅವಶ್ಯಕತೆ ಏನಿದೆ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ. ಇವುಗಳಿಗೆ ಜಾನ್ವಿ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕು.

Janhvi Kapoor: ನೀಲಿ ಬಣ್ಣದ ಲೆಹಾಂಗ ತೊಟ್ಟು ಮಿಂಚಿದ ಜಾನ್ವಿ ಕಪೂರ್​​​

ಸೋಶಿಯಲ್​ ಮೀಡಿಯಾದಲ್ಲಿ ಜಾನ್ವಿ ಕಪೂರ್​ ಅವರು ಸಖತ್​ ಆ್ಯಕ್ಟೀವ್​ ಆಗಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು 21 ಮಿಲಿಯನ್​ಗಿಂತಲೂ ಹೆಚ್ಚು ಜನರು ಫಾಲೋ ಮಾಡುತ್ತಿದ್ದಾರೆ. ಬಗೆಬಗೆಯ ಫೋಟೋಶೂಟ್​ ಮಾಡಿಸಿ, ಅದನ್ನು ಹಂಚಿಕೊಳ್ಳುತ್ತಾರೆ. ಗ್ಲಾಮರಸ್​ ಆಗಿ ಪೋಸ್​ ನೀಡುವಲ್ಲಿ ಅವರು ಎಂದಿಗೂ ಹಿಂದೇಟು ಹಾಕಿಲ್ಲ. ಬಾಲಿವುಡ್​ ಮಾತ್ರವಲ್ಲದೇ ಟಾಲಿವುಡ್​ಗೂ ಅವರು ಕಾಲಿಡುತ್ತಿದ್ದಾರೆ. ಜೂನಿಯರ್​ ಎನ್​ಟಿಆರ್​ ನಟನೆಯ ‘ದೇವರ’ ಸಿನಿಮಾಗೆ ಜಾನ್ವಿ ಅವರು ನಾಯಕಿ ಆಗಿದ್ದಾರೆ. ಬಾಲಿವುಡ್​ನಲ್ಲಿ ಕೂಡ ಬ್ಯಾಕ್​ ಟು ಬ್ಯಾಕ್​ ಸಿನಿಮಾ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಅವರ ಅಭಿಮಾನಿ ಬಳಗ ಹಿರಿದಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
Video: ಕ್ರಿಸ್​ಮಸ್​ಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ
Video: ಕ್ರಿಸ್​ಮಸ್​ಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ
ವಾಜಪೇಯಿ ಜನ್ಮದಿನ, ವಿಡಿಯೋ ಮೂಲಕ ಅಟಲ್ ಕಾರ್ಯ ಹೊಗಳಿದ ಪ್ರಧಾನಿ ಮೋದಿ
ವಾಜಪೇಯಿ ಜನ್ಮದಿನ, ವಿಡಿಯೋ ಮೂಲಕ ಅಟಲ್ ಕಾರ್ಯ ಹೊಗಳಿದ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಕ್ರಿಸ್ಮಸ್​ ಸಡಗರ​, ಲೈಟಿಂಗ್ಸ್​ನಲ್ಲಿ ಚರ್ಚ್​ಗಳು ಝಗಮಗ
ಬೆಂಗಳೂರಿನಲ್ಲಿ ಕ್ರಿಸ್ಮಸ್​ ಸಡಗರ​, ಲೈಟಿಂಗ್ಸ್​ನಲ್ಲಿ ಚರ್ಚ್​ಗಳು ಝಗಮಗ
ಆಪರೇಷನ್ ಬಳಿಕ ಶಿವರಾಜ್​ಕುಮಾರ್ ಹೆಲ್ತ್​ಅಪ್​ಡೇಟ್ ನೀಡಿದ ವೈದ್ಯರು
ಆಪರೇಷನ್ ಬಳಿಕ ಶಿವರಾಜ್​ಕುಮಾರ್ ಹೆಲ್ತ್​ಅಪ್​ಡೇಟ್ ನೀಡಿದ ವೈದ್ಯರು
ಎದುರಾಳಿಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡುವ ಶಪಥ ಮಾಡಿದ ರಜತ್
ಎದುರಾಳಿಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡುವ ಶಪಥ ಮಾಡಿದ ರಜತ್
ಮನೆಯಲ್ಲಿನ ಶಿವಲಿಂಗ ಎಷ್ಟು ಎತ್ತರ ಇರಬೇಕು, ಪೂಜಾ ವಿಧಾನ ತಿಳಿಯಿರಿ
ಮನೆಯಲ್ಲಿನ ಶಿವಲಿಂಗ ಎಷ್ಟು ಎತ್ತರ ಇರಬೇಕು, ಪೂಜಾ ವಿಧಾನ ತಿಳಿಯಿರಿ