ಖ್ಯಾತ ನಟಿಯ ರೀತಿ ದೇಹ ಪಡೆಯಲು 40 ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡ ಯುವತಿ; ಕಡೆಗೂ ಆಗಿದ್ದೇನು?

Jennifer Pamplona | Kim Kardashian: ಜೆನಿಫರ್​ ಪಂಪ್ಲೋನಾ ಅವರು ಸತತ 12 ವರ್ಷಗಳ ಕಾಲ 40 ಬಾರಿ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡರು. ಅವರ ದೇಹದ ವಿವಿಧ ಅಂಗಗಳಿಗೆ ಆಪರೇಷನ್​ ಮಾಡಲಾಯಿತು.

ಖ್ಯಾತ ನಟಿಯ ರೀತಿ ದೇಹ ಪಡೆಯಲು 40 ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡ ಯುವತಿ; ಕಡೆಗೂ ಆಗಿದ್ದೇನು?
ಕಿಮ್ ಕರ್ದಾಶಿಯಾನ್, ಜೆನಿಫರ್ ಪಂಪ್ಲೋನಾ
TV9kannada Web Team

| Edited By: Madan Kumar

Jul 12, 2022 | 1:04 PM

ಫ್ಯಾಷನ್​ ಜಗತ್ತಿನಲ್ಲಿ ಕಿಮ್​ ಕರ್ದಾಶಿಯಾನ್​ (Kim Kardashian) ಅವರ ಖ್ಯಾತಿ ದೊಡ್ಡದು. ನಟಿಯಾಗಿ, ಮಾಡೆಲ್​ ಆಗಿ, ಉದ್ಯಮಿಯಾಗಿಯೂ ಅವರು ಫೇಮಸ್​ ಆಗಿದ್ದಾರೆ. ಸಿಕ್ಕಾಪಟ್ಟೆ ಹಾಟ್​ ಅವತಾರದಲ್ಲಿ ಅವರು ಗಮನ ಸೆಳೆಯುತ್ತಾರೆ. ಹಲವು ಯುವತಿಯರಿಗೆ ಕಿಮ್​ ಕರ್ದಾಶಿಯಾನ್​ ಎಂದರೆ ಸ್ಫೂರ್ತಿ. ಅವರ ರೀತಿಯೇ ಕಾಣಬೇಕು ಎಂದು ಬಯಸುವವರೂ ಅನೇಕರಿದ್ದಾರೆ. ಹಾಗಂತ ಅದಕ್ಕಾಗಿ ರಿಸ್ಕ್​ ತೆಗೆದುಕೊಳ್ಳುವವರು ವಿರಳ. ಜೆನಿಫರ್​ ಪಂಪ್ಲೋನಾ (Jennifer Pamplona) ಎಂಬ ಮಾಡೆಲ್​ ಅಂಥ ಕೆಲಸ ಮಾಡಿದ್ದಾರೆ. 4.7 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. 40 ಬಾರಿ ಪ್ಲಾಸ್ಟಿಕ್​ ಸರ್ಜರಿ (Plastic Surgery) ಮಾಡಿಸಿಕೊಂಡಿದ್ದಾರೆ. ಆದರೆ ಅಂತಿಮವಾಗಿ ಅವರಿಗೆ ಸಮಾಧಾನ ತಂದಿಲ್ಲ. ಈಗ ಮತ್ತೆ ಮೊದಲಿನಂತೆ ತಮ್ಮ ಅಸಲಿ ರೂಪಕ್ಕೆ ಬರಲು ಅಂದಾಜು ಒಂದು ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದಾರೆ!

ಜೆನಿಫರ್​ ಪಂಪ್ಲೋನಾ ಅವರಿಗೆ ಈಗ 29 ವರ್ಷ ವಯಸ್ಸು. ಅವರಿಗೆ ಕಿಮ್​ ಕರ್ದಾಶಿಯನ್​ ಎಂದರೆ ಎಲ್ಲಿಲ್ಲದಷ್ಟು ಇಷ್ಟ. ತಮ್ಮ ನೆಚ್ಚಿನ ನಟಿಯ ರೀತಿ ತಾವೂ ಆಗಬೇಕು ಎಂಬ ಆಸೆ ಅವರ ಮನದಲ್ಲಿ ಮೂಡಿದ್ದೇ ತಡ, ಪ್ಲಾಸ್ಟಿಕ್​ ಸರ್ಜರಿ ಮಾಡಿಕೊಳ್ಳಲು ಮುಂದಾದರು. 17ನೇ ವಯಸ್ಸಿನಲ್ಲಿ ಇದ್ದಾಗಲೇ ಸರ್ಜರಿ ಶುರು ಆಯಿತು. ಸತತ 12 ವರ್ಷಗಳ ಕಾಲ ಅವರು 40 ಬಾರಿ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡರು. ದೇಹದ ವಿವಿಧ ಅಂಗಗಳಿಗೆ ಆಪರೇಷನ್​ ಮಾಡಲಾಯಿತು.

ಇಷ್ಟೆಲ್ಲ ಕಷ್ಟಪಟ್ಟ ಬಳಿಕ ಜೆನಿಫರ್​ ಪಂಪ್ಲೋನಾ ಕೂಡ ಕಿಮ್ ಕರ್ದಾಶಿಯಾನ್​ ರೀತಿ ಕಾಣಲು ಆರಂಭಿಸಿದರು. ಆದರೆ ಅವರಿಗೆ ಈಗ ಆ ಲುಕ್​ ಇಷ್ಟ ಆಗುತ್ತಿಲ್ಲ. ಎಲ್ಲರೂ ತಮ್ಮನ್ನು ಕಿಮ್​ ಕರ್ದಾಶಿಯಾನ್​ ಎಂದು ಕರೆಯಲು ಶುರು ಮಾಡಿದ್ದರಿಂದ ಅವರಿಗೆ ಕಿರಿಕಿರಿ ಎನಿಸತೊಡಗಿತು. ಹಾಗಾಗಿ ತಾವು ಮತ್ತೆ ಮೊದಲಿನಂತೆ ಕಾಣಬೇಕು ಎಂದು ಪುನಃ ಪ್ಲಾಸ್ಟಿಕ್​ ಸರ್ಜರಿಗೆ ಒಳಗಾಗುತ್ತಿದ್ದಾರೆ.

ಇದನ್ನೂ ಓದಿ

ಕಿಮ್​ ಕರ್ದಾಶಿಯಾನ್​ ರೀತಿ ಕಾಣುತ್ತಾರೆ ಎಂಬ ಕಾರಣದಿಂದಾಗಿ ಜೆನಿಫರ್​ ಪಂಪ್ಲೋನಾ ಅವರ ಜನಪ್ರಿಯತೆ ಹೆಚ್ಚಿತು. ಸೋಶಿಯಲ್​ ಮೀಡಿಯಾದಲ್ಲಿ ಅವರನ್ನು ಫಾಲೋ ಮಾಡುವವರ ಸಂಖ್ಯೆಯೂ ಹೆಚ್ಚಾಯಿತು. ಆದರೆ ಅವರು 40 ಬಾರಿ ಪ್ಲಾಸ್ಟಿಕ್​ ಸರ್ಜರಿಗೆ ಒಳಗಾದ ಪರಿಣಾಮ ಅವರ ಆರೋಗ್ಯದಲ್ಲಿ ಏರುಪೇರು ಆಯಿತು. ಈಗ ಜೆನಿಫರ್​ ಪಂಪ್ಲೋನಾಗೆ ವಾಸ್ತವ ಅರಿವಾಗಿದೆ. ತಾವು ಮೊದಲಿನಂತೆಯೇ ಆಗಬೇಕು ಎಂದು ಮತ್ತೆ ಕೋಟಿಗಟ್ಟಲೆ ಹಣ ಖರ್ಚು ಮಾಡುವಂತಾಗಿದ್ದು ವಿಪರ್ಯಾಸ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada