AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Disha Patani: ನಟಿ ದಿಶಾ ಪಟಾನಿಗೆ ಬಾಡಿ ಶೇಮಿಂಗ್​; 2 ಕಾರಣ ನೀಡಿ ಬಹಿರಂಗವಾಗಿ ಅವಮಾನ ಮಾಡಿದ ನೆಟ್ಟಿಗರು

Disha Patani | Ek Villain Returns: ದಿಶಾ ಪಟಾನಿ ಸಖತ್​ ಸ್ಲಿಮ್​ ಆಗಿದ್ದಾರೆ ಹಾಗೂ ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ಎರಡು ಕಾರಣಕ್ಕೆ ಅವರನ್ನು ನೆಟ್ಟಿಗರು ಟಾರ್ಗೆಟ್​ ಮಾಡಿದ್ದಾರೆ.

Disha Patani: ನಟಿ ದಿಶಾ ಪಟಾನಿಗೆ ಬಾಡಿ ಶೇಮಿಂಗ್​; 2 ಕಾರಣ ನೀಡಿ ಬಹಿರಂಗವಾಗಿ ಅವಮಾನ ಮಾಡಿದ ನೆಟ್ಟಿಗರು
ದಿಶಾ ಪಟಾನಿ
TV9 Web
| Edited By: |

Updated on:Jul 10, 2022 | 10:50 AM

Share

ಸೋಶಿಯಲ್​ ಮೀಡಿಯಾದಲ್ಲಿ ಬಾಡಿ ಶೇಮಿಂಗ್ (Body Shaming)​ ಒಂದು ಪಿಡುಗಿನಂತೆ ಆಗಿದೆ. ಅದರಲ್ಲೂ ನಟಿಯರಿಗೆ ಇದರಿಂದ ಹೆಚ್ಚು ಕಿರಿಕಿರಿ ಆಗುತ್ತಿದೆ. ನೆಟ್ಟಿಗರು ಒಂದಿಲ್ಲೊಂದು ಕೆಟ್ಟ ಕಮೆಂಟ್​ ಮೂಲಕ ಅಪಹಾಸ್ಯ ಮಾಡುತ್ತಲೇ ಇರುತ್ತಾರೆ. ದಪ್ಪಗಿದ್ದರೆ ಹೀಯಾಳಿಸುತ್ತಾರೆ. ತೆಳ್ಳಗಿದ್ದರೂ ಇಲ್ಲಸಲ್ಲದ ಕಮೆಂಟ್​ ಮಾಡಿ ಅವಮಾನಿಸುತ್ತಾರೆ. ಕಪ್ಪಗಿದ್ದರೆ ಒಂದು ರೀತಿ, ಬೆಳ್ಳಗಿದ್ದರೆ ಇನ್ನೊಂದು ರೀತಿ. ಒಟ್ಟಿನಲ್ಲಿ ಬಾಡಿ ಶೇಮಿಂಗ್​ ತಪ್ಪಿದ್ದಲ್ಲ. ನಟಿ ದಿಶಾ ಪಟಾನಿ (Disha Patani) ಅವರು ಆಗಾಗ ಇದೇ ವಿಚಾರಕ್ಕೆ ಟಾರ್ಗೆಟ್​ ಆಗುತ್ತಾರೆ. ಸಾಮಾನ್ಯವಾಗಿ ಹಾಟ್​ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುವ ಅವರನ್ನು ಜನರು ಹಿಗ್ಗಾಮುಗ್ಗ ಟ್ರೋಲ್​ ಮಾಡುತ್ತಾರೆ. ಈಗ ಅವರು ‘ಏಕ್​ ವಿಲನ್​ ರಿಟರ್ನ್ಸ್​’ (Ek Villain Returns) ಸಿನಿಮಾದ ಪ್ರಮೋಷನ್​ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಈ ವೇಳೆ ಅವರಿಗೆ ಬಾಡಿ ಶೇಮಿಂಗ್​ ಮಾಡಲಾಗಿದೆ.

ಫಿಟ್ನೆಸ್​ ಬಗ್ಗೆ ದಿಶಾ ಪಟಾನಿ ಅವರಿಗೆ ಹೆಚ್ಚು ಕಾಳಜಿ. ಹಾಗಾಗಿ ಅವರು ಪ್ರತಿದಿನ ವರ್ಕೌಟ್​ ಮಾಡುತ್ತಾರೆ. ದೇಹವನ್ನು ಬಳುಕುವ ಬಳ್ಳಿಯಂತೆ ಇಟ್ಟುಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ. ಇತ್ತೀಚೆಗೆ ದಿಶಾ ಪಟಾನಿ ಸಖತ್​ ಸ್ಲಿಮ್​ ಆಗಿದ್ದಾರೆ. ಅದಕ್ಕೆ ನೆಟ್ಟಿಗರು ಬಾಡಿ ಶೇಮಿಂಗ್​ ಮಾಡುತ್ತಿದ್ದಾರೆ. ಅವರ ಅನೇಕ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ಅವುಗಳಿಗೆ ಜನರು ಕೆಟ್ಟದಾಗಿ ಕಮೆಂಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ನಮ್ಮ ಬಾಡಿ ಬಗ್ಗೆಯೂ ಕಮೆಂಟ್​ ಮಾಡ್ತಾರೆ, ಅದಕ್ಕೆ ತಲೆ ಕೆಡಿಸಿಕೊಳ್ಳಬಾರದು’: ಪ್ರಿಯಾಂಕಾ ಉಪೇಂದ್ರ

ಇದನ್ನೂ ಓದಿ
Image
Disha Patani Birthday: ಹಾಟ್​ ಬೆಡಗಿ ದಿಶಾ ಪಟಾನಿಗೆ ಹುಟ್ಟುಹಬ್ಬದ ಸಂಭ್ರಮ; ಇಲ್ಲಿವೆ ಪಡ್ಡೆಗಳ ನಿದ್ದೆ ಕೆಡಿಸಿದ ಫೋಟೋಗಳು
Image
ದಿಶಾ ಪಟಾನಿಯ ತಂಟೆಗೆ ಬಂದವರ ಮೈ ಮೂಳೆ ಮುರಿಯೋದು ಗ್ಯಾರಂಟಿ; ಈ​ ವಿಡಿಯೋ ನೋಡಿ
Image
ದಿಶಾ ಪಟಾನಿ ಸ್ಥಿತಿ ನೋಡಲಾಗದೇ ಸೀರೆ, ಬುರ್ಕಾ, ಸ್ಕರ್ಟ್​ ತೊಡಿಸಿದ ನೆಟ್ಟಿಗರು; ಇಲ್ಲಿವೆ ಫನ್ನಿ ಫೋಟೋಗಳು
Image
ಅತಿ ಹಾಟ್​ ಫೋಟೋ ಹಂಚಿಕೊಂಡ ದಿಶಾ ಪಟಾನಿ; ಬಾಯ್​ಫ್ರೆಂಡ್​ ಟೈಗರ್​ ಶ್ರಾಫ್​ ಕಮೆಂಟ್​ ಏನು?

ಹಾಟ್​ ಫೋಟೋಗಳನ್ನು ಹಂಚಿಕೊಳ್ಳುವ ವಿಚಾರದಲ್ಲಿ ದಿಶಾ ಪಟಾನಿ ಅವರು ಯಾವುದೇ ಮಡಿವಂತಿಕೆ ಇಟ್ಟುಕೊಂಡಿಲ್ಲ. ತಮಗೆ ಇಷ್ಟಬಂದ ಫೋಟೋಗಳನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಳ್ಳುತ್ತಾರೆ. ಈ ಕಾರಣಕ್ಕಾಗಿಯೂ ಅವರನ್ನು ಟ್ರೋಲ್​ ಮಾಡಲಾಗುತ್ತಿದೆ. ‘ಈ ರೀತಿ ಅರೆ ಬೆತ್ತಲೆ ಫೋಟೋ ಹಂಚಿಕೊಳ್ಳೋಕೆ ನಾಚಿಕೆ ಆಗಲ್ವಾ’ ಎಂದು ಕಟುವಾಗಿ ಕಮೆಂಟ್​ ಮಾಡಲಾಗಿದೆ. ‘ಅಸ್ಥಿಪಂಜರ ಆಗಿದ್ದಾರೆ..’, ‘ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡ ರಾಕ್ಷಸಿ..’ ಎಂದೆಲ್ಲ ಜನರು ಜರಿದಿದ್ದಾರೆ.

ಸದ್ಯ ಈ ಯಾವ ಕಮೆಂಟ್​ಗಳಿಗೂ ದಿಶಾ ಪಟಾನಿ ಉತ್ತರ ನೀಡುವ ಗೋಜಿಗೆ ಕೈ ಹಾಕಿಲ್ಲ. ಅವರು ‘ಏಕ್​ ವಿಲನ್​ ರಿಟರ್ನ್ಸ್’ ಸಿನಿಮಾದ ಪ್ರಮೋಷನ್​ನಲ್ಲಿ ಬ್ಯುಸಿ ಆಗಿದ್ದಾರೆ. ಆ ಸಿನಿಮಾ ಜುಲೈ 29ರಂದು ಬಿಡುಗಡೆ ಆಗಲಿದೆ.

Published On - 10:50 am, Sun, 10 July 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್