ಪಾತ್ರ ಪಡೆಯಲು ಹಣ ಕೊಟ್ಟು ವಂಚನೆಗೊಳಗಾಗಿದ್ದ ಸ್ಟಾರ್ ನಟ

ರಾಜ್​ಕುಮಾರ್ ರಾವ್ ಈಗ ಬಾಲಿವುಡ್​ನ ಪ್ರತಿಭಾವಂತ ಹಾಗೂ ಜನಪ್ರಿಯ ನಟ. ಈಗಾಗಲೇ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ರಾಜ್​ಕುಮಾರ್ ನಟಿಸಿದ್ದಾರೆ. ಆದರೆ ಸಿನಿಮಾದಲ್ಲಿ ನಟಿಸಲು ಆರಂಭಿಸಿದ ಸಮಯದಲ್ಲಿ ವ್ಯಕ್ತಿಯೊಬ್ಬ ಪಾತ್ರ ಕೊಡಿಸುವುದಾಗಿ ಹಣ ಪಡೆದು ಮೋಸ ಮಾಡಿದ್ದನಂತೆ.

ಪಾತ್ರ ಪಡೆಯಲು ಹಣ ಕೊಟ್ಟು ವಂಚನೆಗೊಳಗಾಗಿದ್ದ ಸ್ಟಾರ್ ನಟ

Updated on: Jun 02, 2024 | 9:06 AM

ಸಿನಿಮಾಗಳಲ್ಲಿ ಅವಕಾಶ ಪಡೆಯುವುದು ಸುಲಭದ ಮಾತಲ್ಲ. ಪ್ರತಿಭೆಯ ಜೊತೆಗೆ ಅದೃಷ್ಟ, ಚಿತ್ರರಂಗದಲ್ಲಿ ಗೆಳೆತನ ಎಲ್ಲವೂ ಬೇಕಾಗುತ್ತವೆ. ಚಿತ್ರರಂಗದಲ್ಲಂತೂ ಅಡಿಗಡಿಗೆ ಮೋಸ ಮಾಡುವವರು ಸಾಕಷ್ಟು ಮಂದಿ ಇದ್ದಾರೆ. ಸಿನಿಮಾದಲ್ಲಿ ಪಾತ್ರ ಕೊಡಿಸುತ್ತೇನೆಂದು ಹಣ ಪಡೆಯುವವರು, ನಟನೆ ಹೇಳಿಕೊಡುತ್ತೀವೆಂದು ಮೋಸ ಮಾಡುವವರ ಸಂಖ್ಯೆ ಹೆಚ್ಚಿದೆ. ಇಂಥಹುದೇ ಒಂದು ಮೋಸದ ಜಾಲಕ್ಕೆ ಬಾಲಿವುಡ್​ನಲ್ಲಿ ಈಗ ಸ್ಟಾರ್ ನಟ ಎನಿಸಿಕೊಂಡಿರುವ ರಾಜ್​ಕುಮಾರ್ ರಾವ್ (Rajkumar Rao) ಸಹ ಬಲಿಯಾಗಿದ್ದರಂತೆ. ಈ ಬಗ್ಗೆ ಕಪಿಲ್ ಶರ್ಮಾ ಶೋನಲ್ಲಿ ಸ್ವತಃ ರಾಜಕುಮಾರ್ ರಾವ್ ಹೇಳಿಕೊಂಡಿದ್ದಾರೆ.

ತಮ್ಮ ಪ್ರತಿಭೆ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ರಾಜ್​ಕುಮಾರ್ ರಾವ್, ಇದೀಗ ‘ಮಿಸ್ಟರ್ ಆಂಡ್ ಮಿಸಸ್ ಮಹಿ’ ಸಿನಿಮಾದಲ್ಲಿ ನಟಿಸಿದ್ದು ಸಿನಿಮಾದ ಪ್ರಚಾರಕ್ಕಾಗಿ ಇತ್ತೀಗೆಚೆ ಕಪಿಲ್ ಶರ್ಮಾ ಶೋಗೆ ಬಂದಿದ್ದರು. ಈ ವೇಳೆ ತಾವು ನಟನೆ ಆರಂಭಿಸಿದ ದಿನಗಳನ್ನು ನೆನಪು ಮಾಡಿಕೊಂಡ ರಾಜ್​ಕುಮಾರ್ ರಾವ್, ಆರಂಭದಲ್ಲಿ ಸಿನಿಮಾದಲ್ಲಿ ಪಾತ್ರಕೊಡಿಸುವುದಾಗಿ ವ್ಯಕ್ತಿಯೊಬ್ಬ ತಮಗೆ ಮೋಸ ಮಾಡಿದ ಬಗ್ಗೆ ನೆನಪು ಮಾಡಿಕೊಂಡರು.

ರಾಜ್​ಕುಮಾರ್ ರಾವ್ ಕಾಲೇಜು ದಿನಗಳಲ್ಲಿಯೇ ನಟನಾಗುವ ಆಸೆ ಹೊಂದಿದ್ದರಂತೆ. ಪ್ರಥಮ ಪಿಯುಸಿಯಲ್ಲಿದ್ದಾಗಲೇ ನಟನಾಗಲು ಪ್ರಯತ್ನಗಳನ್ನು ಆರಂಭಿಸಿದ್ದರಂತೆ. ಆ ಸಮಯದಲ್ಲಿ ಪತ್ರಿಕೆಯಲ್ಲಿ ಜೀ ಟಿವಿ ಶೋಗೆ ಸಂಬಂಧಿಸಿದ ಜಾಹೀರಾತೊಂದು ಪ್ರಕಟವಾಗಿತ್ತು. ಆ ಜಾಹೀರಾತು ನೋಡಿ ಕಚೇರಿಗೆ ಹೋದರೆ ಅಲ್ಲಿ ಒಬ್ಬ ವ್ಯಕ್ತಿ ತಾನು ಹಲವು ಸ್ಟಾರ್​ಗಳೊಟ್ಟಿಗೆ ತೆಗೆಸಿಕೊಂಡಿರುವ ಚಿತ್ರಗಳನ್ನು ಇಟ್ಟುಕೊಂಡಿದ್ದನಂತೆ. ಅದನ್ನೆಲ್ಲ ನೋಡಿ ಮರುಳಾದ ರಾಜ್​ಕುಮಾರ್ ರಾವ್ ಆತನ ಬಳಿ ಅವಕಾಶ ಕೊಡುವಂತೆ ಕೇಳಿದ್ದಾರೆ.

ಇದನ್ನೂ ಓದಿ:‘ಉತ್ತರಕಾಂಡ’ ಶೂಟಿಂಗ್​ ಮುಗಿಸಿ ಸವದತ್ತಿ ಯಲ್ಲಮ್ಮನ ದರ್ಶನ ಪಡೆದ ಶಿವರಾಜ್​ಕುಮಾರ್​

ಆ ವ್ಯಕ್ತಿ ರಾಜ್​ಕುಮಾರ್ ಅವರ ಕೆಲವು ಚಿತ್ರಗಳನ್ನು ತೆಗೆದು ಹತ್ತು ಸಾವಿರ ರೂಪಾಯಿ ಹಣ ಕೇಳಿದನಂತೆ. ಅಮ್ಮನ ಬಳಿ ಹಣ ಪಡೆದುಕೊಂಡು ಆತನಿಗೆ ಕೊಟ್ಟಿದ್ದರಂತೆ ರಾಜ್​ಕುಮಾರ್ ರಾವ್, ಅದಾದ ಮೂರು ದಿನಗಳ ಬಳಿಕ ರಾಜ್​ಕುಮಾರ್ ರಾವ್​ಗೆ ಕರೆ ಬಂದು ನೀವು ಸೆಲೆಕ್ಟ್ ಆಗಿದ್ದೀರಿ ಎಂದು ಹೇಳಲಾಯ್ತಂತೆ. ಇದರಿಂದ ಬಹಳ ಖುಷಿಯಾಗಿದ್ದ ರಾವ್, ಆ ಬಳಿಕ ಶೂಟಿಂಗ್​ ಬಗ್ಗೆ ಯಾವುದೇ ಕರೆ ಬರದೇ ಇರುವುದು ಗಮನಿಸಿ ಆ ವ್ಯಕ್ತಿಯ ಕಚೇರಿ ಬಳಿ ಹೋದರೆ ಕಚೇರಿ ಬಂದ್ ಆಗಿತ್ತಂತೆ. ರಾಜ್​ಕುಮಾರ್ ರಾವ್ ರೀತಿಯಲ್ಲಿಯೇ ಇನ್ನೂ ಕೆಲವು ಯುವಕರು ಆತನಿಗಾಗಿ ಹುಡುಕಿಕೊಂಡು ಕಚೇರಿ ಬಳಿ ಬಂದಿದ್ದರಂತೆ. ಆ ವ್ಯಕ್ತಿ ಎಲ್ಲರ ಹಣ ತೆಗೆದುಕೊಂಡು ಪರಾರಿಯಾಗಿದ್ದ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ