‘ಮಿಸ್ಟರ್ ಮಾಹಿ ಆ್ಯಂಡ್ ಮಿಸಸ್ ಮಾಹಿ’ ಸಿನಿಮಾ (Mr And Ms Mahi) ರಿಲೀಸ್ಗೆ ರೆಡಿ ಇದೆ. ರಾಜ್ಕುಮಾರ್ ರಾವ್ ಹಾಗೂ ಜಾನ್ವಿ ಕಪೂರ್ ಇದರಲ್ಲಿ ನಟಿಸಿದ್ದು, ಕರಣ್ ಜೋಹರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಸಿನಿಮಾ ಬಗ್ಗೆ ಮಾತನಾಡೋಕೆ ಜಾನ್ವಿ, ರಾಜ್ಕುಮಾರ್ ರಾವ್ ಹಾಗೂ ಕರಣ್ ಒಂದೆಡೆ ಸೇರಿದ್ದರು. ಈ ವೇಳೆ ರಾಜ್ಕುಮಾರ್ ರಾವ್ ಅವರು ಬಾಲಿವುಡ್ನ ಕರಾಳ ಸತ್ಯಗಳ ಬಗ್ಗೆ ಹೇಳಿದ್ದಾರೆ.
ನೆಪೋಟಿಸಂ ಬಗ್ಗೆ ಮಾತನಾಡಿದರು ಕರಣ್. ‘ಮಾಧ್ಯಮಗಳಲ್ಲಿ ಹೆಡ್ಲೈನ್ ಆಗಬೇಕು ಎನ್ನುವ ಕಾರಣಕ್ಕೆ ಕೆಲವರು ಈ ರೀತಿಯ ತಂತ್ರ ಬಳಕೆ ಮಾಡಿಕೊಳ್ಳುತ್ತಾರೆ. ನನ್ನನ್ನು ಹೊರಗಿನವರಂತೆ ನೋಡಿದರು, ಸ್ಟಾರ್ ಕಿಡ್ಗಾಗಿ ಆಫರ್ ಕಳೆದುಕೊಂಡೆ ಎಂದು ಯಶಸ್ಸು ಕಂಡವರು ಹೇಳುತ್ತಾರೆ. ನಾನು ಪಾರ್ಟಿ ಅಟೆಂಡ್ ಮಾಡಿಲ್ಲ ಹೀಗಾಗಿ, ಅವಕಾಶ ಸಿಗಲಿಲ್ಲ ಎನ್ನುತ್ತಾರೆ. ಯಾವ ಪಾರ್ಟಿಗಳಲ್ಲಿ ಸಿನಿಮಾ ಅವಕಾಶ ಸಿಗುತ್ತದೆ ಅನ್ನೋದು ನನಗಂತೂ ಗೊತ್ತಿಲ್ಲ’ ಎಂದರು ಕರಣ್.
ಕರಣ್ ಅವರ ಮಾತಿಗೆ ರಾಜ್ಕುಮಾರ್ ಉತ್ತರಿಸಿದರು. ‘ಎಲ್ಲರ ಜೊತೆ ಸಂಪರ್ಕ ಬೆಳೆಸಿಕೊಳ್ಳೋದು ಸಮಸ್ಯೆ ಅಲ್ಲ. ಆದರೆ, ಪಾರ್ಟಿಗೆ ಅಟೆಂಡ್ ಆಗಿ ನಾನು ಇಲ್ಲಿ ಕಾಂಟ್ಯಾಕ್ಟ್ ಬೆಳೆಸಿಕೊಳ್ಳಲು ಬಂದಿದ್ದೇನೆ ಅನ್ನೋದು ಸಮಸ್ಯೆ. ನಾನು ಒಂದು ಸಿನಿಮಾ ಮಾಡಬೇಕಿತ್ತು. ಆದರೆ ರತ್ರೋರಾತ್ರಿ ಸಿನಿಮಾ ಆಫರ್ ಹೋಯಿತು. ಸ್ಟಾರ್ ಕಿಡ್ಗೆ ಆಫರ್ ಸಿಕ್ಕಿತು. ನನಗೇಕೋ ಅದು ಸರಿ ಎನಿಸಲಿಲ್ಲ. ನೀವು ಎಲ್ಲವನ್ನೂ ನಿಯಂತ್ರಿಸಬಹುದು, ನಿಮಗೆ ಎಲ್ಲರೂ ಗೊತ್ತು, ನೀವು ಕರೆ ಮಾಡಿ ಏನು ಬೇಕಾದರೂ ಹೇಳಿ ಬದಲಿಸಬಹುದು ಎನ್ನುವ ಕಾರಣಕ್ಕೆ ಈ ರೀತಿ ಮಾಡೋದು ಸರಿ ಅಲ್ಲ. ಹೊರಗಿನವರೂ ಕೂಡ ಬಂದು ಸಿನಿಮಾ ಮಾಡಿ ತಮ್ಮ ಕಲೆ ತೋರಿಸಬಹುದು’ ಎಂದಿದ್ದಾರೆ ರಾಜ್ಕುಮಾರ್ ರಾವ್. ಅವರ ಉತ್ತರವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ.
ಇದನ್ನೂ ಓದಿ: ‘ಪಠಾಣ್’ ಚಿತ್ರದಿಂದ ಶಾರುಖ್ ಗೆದ್ದಿದ್ದಕ್ಕೆ ಎಲ್ಲರಿಗೂ ಖುಷಿ ಆಗಿದ್ದೇಕೆ? ರಾಜ್ಕುಮಾರ್ ರಾವ್ ನೀಡಿದ ಉತ್ತರ ಇಲ್ಲಿದೆ
ಮೊದಲಿನಿಂದಲೂ ಈ ಬಗ್ಗೆ ಚರ್ಚೆ ಜೋರಿದೆ. ಸ್ಟಾರ್ ಕಿಡ್ಗಾಗಿ ಆಫರ್ ಕಳೆದುಕೊಂಡೆ ಎಂದು ಅನೇಕರು ಹೇಳಿದ್ದು ಇದೆ. ಇದಕ್ಕೆಲ್ಲ ಕರಣ್ ಜೋಹರ್ ತಲೆಕೆಡಿಸಿಕೊಂಡಿಲ್ಲ. ಅವರು ಮೊದಲಿನಿಂದಲೂ ಸೆಲೆಬ್ರಿಟಿಗಳ ಮಕ್ಕಳಿಗೆ ಮಣೆ ಹಾಕುತ್ತಲೇ ಬಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.