‘ಕಹೋ ನಾ ಪ್ಯಾರ್ ಹೇ’, ‘ಕೊಯಿ ಮಿಲ್ ಗಯಾ’, ‘ಕ್ರಿಶ್’ ರೀತಿಯ ಸಿನಿಮಾಗಳನ್ನು ಮಾಡಿದ ರಾಕೇಶ್ ರೋಷನ್ ಅವರು ಈಗ ನಿರ್ದೇಶನಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇದು ಅವರ ಫ್ಯಾನ್ಸ್ಗೆ ಬೇಸರ ಮೂಡಿಸಿದೆ. ಅವರಿ ‘ಕ್ರಿಶ್ 4 ಚಿತ್ರವನ್ನು ನಿರ್ದೇಶನ ಮಾಡುತ್ತಾರೆ ಎಂದು ಹೇಳಲಾಗಿತ್ತು. ಈಗ ಅವರು ನಿವೃತ್ತಿ ಪಡೆದಿರುವುದರಿಂದ ಮುಂದೇನು ಎನ್ನುವ ಪ್ರಶ್ನೆ ಮೂಡಿದೆ. ಆ ಪ್ರಶ್ನೆಗೆ ಉತ್ತರ ಕೊಟ್ಟೇ ಅವರು ನಿವೃತ್ತಿ ಪಡೆದಿದ್ದಾರೆ.
ರಾಕೇಶ್ ರೋಷನ್ ಈ ಮೊದಲು ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಅದನ್ನು ಗೆದ್ದು ಬಂದಿದ್ದಾರೆ. ಈಗ ಅವರಿಗೆ ವಯಸ್ಸಾಗಿದೆ. ಬಿಸಿಲಿನಲ್ಲಿ ನಿಂತು, ರಾತ್ರಿ-ಹಗಲು ಎನ್ನದೆ ನಿರ್ದೇಶನ ಮಾಡುತ್ತೇನೆ ಎಂದರೆ ಅದು ಸಾಧ್ಯವಿಲ್ಲ. ಇದಕ್ಕೆ ಅವರ ದೇಹ ಸ್ಪಂದಿಸುವುದಿಲ್ಲ. ಈ ಕಾರಣಕ್ಕೆ ರಾಕೇಶ್ ಅವರು ನಿರ್ದೇಶನಕ್ಕೆ ನಿವೃತ್ತಿ ಘೋಷಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಬಗ್ಗೆ ಅವರು ಬಾಲಿವುಡ್ ಹಂಗಾಮ ಜೊತೆ ಮಾತನಾಡಿದ್ದಾರೆ.
‘ನಾನು ಇನ್ನುಮುಂದೆ ನಿರ್ದೇಶನ ಮಾಡುತ್ತೇನೆ ಎಂದು ಅನಿಸುವುದಿಲ್ಲ. ಆದರೆ ನಾನು ಕ್ರಿಶ್ ಫ್ರ್ಯಾಂಚೈಸ್ನ ನಾಲ್ಕನೇ ಚಿತ್ರವನ್ನು ಘೋಷಣೆ ಮಾಡುತ್ತೇನೆ’ ಎಂದಿದ್ದಾರೆ ಅವರು. ‘ಕ್ರಿಶ್’ ಫ್ರ್ಯಾಂಚೈಸ್ನಲ್ಲಿ ‘ಕೊಯಿ ಮಿಲ್ ಗಯಾ’, ‘ಕ್ರಿಶ್’ ಹಾಗೂ ‘ಕ್ರಿಶ್ 3’ ಸಿನಿಮಾಗಳು ಇವೆ. ಎಲ್ಲವೂ ರಾಕೇಶ್ ಅವರೇ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಅವರದ್ದೇ ನಿರ್ಮಾಣ ಇತ್ತು. ಈಗ ‘ಕ್ರಿಶ್ 4’ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಮಾತ್ರ ಅವರು ಹೊತ್ತಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಸಕ್ಸಸ್ ಸಿಕ್ಕಮೇಲೆ ಖುಷಿ ಸಿಗುತ್ತಾ? ಹೃತಿಕ್ ರೋಷನ್ ಹೇಳೋದೇ ಬೇರೆ
ರಾಕೇಶ್ ರೋಶನ್ 1970ರಲ್ಲಿ ಕಲಾವಿದನಾಗಿ ಆಗಿ ಚಿತ್ರರಂಗಕ್ಕೆ ಕಾಲಿಟ್ಟರು. ‘ಘರ್ ಘರ್ ಕಿ ಕಹಾನಿ’ ಸಿನಿಮಾದಲ್ಲಿ ಅವರು ಮೊದಲ ಬಾರಿಗೆ ನಟಿಸಿದರು. ‘ಆಪ್ ಕೆ ದೀವಾನೆ’ ಅವರ ನಿರ್ಮಾಣದ ಮೊದಲ ಸಿನಿಮಾ. 1987ರಲ್ಲಿ ನಿರ್ದೇಶನಕ್ಕೆ ಕಾಲಿಟ್ಟರು. 2013ರಲ್ಲಿ ರಿಲೀಸ್ ಆದ ‘ಕ್ರಿಶ್ 3’ ಅವರ ನಿರ್ದೇಶನದ ಕೊನೆಯ ಚಿತ್ರ. ಈಗ ‘ಕ್ರಿಶ್ 4’ ಚಿತ್ರವನ್ನು ಯಾರು ನಿರ್ದೇಶನ ಮಾಡುತ್ತಾರೆ ಎನ್ನುವ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.