ಕೊಲೆ ಬೆದರಿಕೆ ಬಂದಿದೆ ಎಂದು ಹೆಲ್ಮೆಟ್ ಧರಿಸಿ ಓಡಾಡಿದ ರಾಖಿ ಸಾವಂತ್​; ನಾಟಕ ನಿಲ್ಲಿಸಿ ಎಂದ ಫ್ಯಾನ್ಸ್

Rakhi Sawant: ಈ ಪ್ರಕರಣಕ್ಕೂ ರಾಖಿ ಸಾವಂತ್​ಗೂ ಯಾವುದೇ ಸಂಬಂಧ ಇಲ್ಲ. ಹೀಗಿದ್ದರೂ ತಮಗೆ ಬೆದರಿಕೆ ಬರುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಕೊಲೆ ಬೆದರಿಕೆ ಬಂದಿದೆ ಎಂದು ಹೆಲ್ಮೆಟ್ ಧರಿಸಿ ಓಡಾಡಿದ ರಾಖಿ ಸಾವಂತ್​; ನಾಟಕ ನಿಲ್ಲಿಸಿ ಎಂದ ಫ್ಯಾನ್ಸ್
ರಾಖಿ ಸಾವಂತ್

Updated on: Apr 21, 2023 | 2:42 PM

ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan)​ ಅವರಿಗೆ ಕೊಲೆ ಬೆದರಿಕೆ ಬಂದಿದೆ. ಅವರನ್ನು ಹತ್ಯೆ ಮಾಡುವುದಾಗಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನವರು ಬೆದರಿಕೆ ಹಾಕಿದ್ದಾರೆ. ಈ ಮಧ್ಯೆ ರಾಖಿ ಸಾವಂತ್ ತಮಗೂ ಬೆದರಿಕೆ ಬಂದಿರುವುದಾಗಿ ಹೇಳಿಕೊಂಡಿದ್ದಾರೆ. ‘ಸಲ್ಮಾನ್ ಖಾನ್ ಪ್ರಕರಣದಿಂದ ದೂರ ಇರು’ ಎಂದು ಇ-ಮೇಲ್ ಮೂಲಕ ನನಗೆ ಬೆದರಿಸಿದ್ದಾರೆ ಎಂಬುದು ರಾಖಿ ಆರೋಪ. ಈಗ ರಾಖಿ ಸಾವಂತ್ ಹೆಲ್ಮೆಟ್ ಹಾಕಿಕೊಂಡು ತಿರುಗಾಡುತ್ತಿದ್ದಾರೆ. ಅವರ ನಾಟಕ ನೋಡಿ ಅನೇಕರಿಗೆ ಸಿಟ್ಟು ಬಂದಿದೆ.

ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡುತ್ತೇವೆ ಎಂದು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನವರು ಹೇಳೋಕೆ ಒಂದು ಕಾರಣ ಇದೆ. ಬಿಷ್ಣೋಯ್ ಸಮುದಾದಯವರು ಪೂಜಿಸುವ ಕೃಷ್ಣಮೃಗವನ್ನು ಸಲ್ಮಾನ್​ ಹತ್ಯೆ ಮಾಡಿದರು ಎನ್ನುವ ಸಿಟ್ಟು ಅವರಿಗೆ ಇದೆ. ಆದರೆ, ಈ ಪ್ರಕರಣಕ್ಕೂ ರಾಖಿ ಸಾವಂತ್​ಗೂ ಯಾವುದೇ ಸಂಬಂಧ ಇಲ್ಲ. ಹೀಗಿದ್ದರೂ ತಮಗೆ ಬೆದರಿಕೆ ಬರುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ರಾಖಿ ಸಾವಂತ್ ಹೇಳುವ ಪ್ರಕಾರ ಸಲ್ಮಾನ್ ಖಾನ್ ಜೊತೆ ಅವರಿಗೆ ಒಳ್ಳೆಯ ಒಡನಾಟ ಇದೆಯಂತೆ. ಅವರ ಪರವಾಗಿ ಮಾತನಾಡಿದ್ದಕ್ಕೆ ತಮಗೆ ಬೆದರಿಕೆ ಬಂದಿದೆ ಅನ್ನೋದು ರಾಖಿ ಹೇಳಿಕೆ. ಇಂದು (ಏಪ್ರಿಲ್ 21) ರಾಖಿ ಹೆಲ್ಮೆಟ್ ಧರಿಸಿ ಬಂದಿದ್ದಾರೆ. ತಮ್ಮ ರಕ್ಷೆಗೆ ಇದನ್ನು ಧರಿಸಿರುವುದಾಗಿ ಅವರು ಹೇಳಿದ್ದಾರೆ.

‘ನಾನು ನನ್ನ ಮುಖವನ್ನು ಮುಚ್ಚಿಟ್ಟುಕೊಳ್ಳಬೇಕು. ಅದಕ್ಕೆ ಹ್ಯಾಮ್ಲೆಟ್ (ಹೆಲ್ಮೆಟ್) ಧರಿಸಿ ಬಂದಿದ್ದೀನಿ’ ಎಂದು ಹುಚ್ಚುಹುಚ್ಚಾಗಿ ಆಡಿದ್ದಾರೆ. ಅವರ ನಾಟಕ ನೋಡಿದ ಅನೇಕರು ಸಿಟ್ಟಿನಿಂದ ಕಮೆಂಟ್ ಹಾಕಿದ್ದಾರೆ. ‘ನಾಟಕ ನಿಲ್ಲಿಸು ತಾಯಿ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ‘ಅದು ಹ್ಯಾಮ್ಲೆಟ್ ಅಲ್ಲ ಹೆಲ್ಮೆಟ್’ ಎಂದು ರಾಖಿಯನ್ನು ತಿದ್ದಿದ್ದಾರೆ.

ಇದನ್ನೂ ಓದಿ: Kisi Ka Bhai Kisi Ki Jaan: ‘ವಯಸ್ಸಾದವರ ಮೇಲೆ ಸಲ್ಮಾನ್​ ಖಾನ್​ ಕೈ ಎತ್ತಲ್ಲ’: ಜಗಪತಿ ಬಾಬು

ರಾಖಿ ಸಾವಂತ್ ಹಾಗೂ ಸಲ್ಮಾನ್ ಖಾನ್ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆಯಲು ಕಾರಣ ಬಿಗ್ ಬಾಸ್. ಇವರು ಬಿಗ್​ ಬಾಸ್​ಗೆ ಸ್ಪರ್ಧಿ ಆಗಿ ಬಂದಿದ್ದರು. ಈ ವೇಳೆ ಸಲ್ಲು ಜೊತೆ ಅವರಿಗೆ ಫ್ರೆಂಡ್​ಶಿಪ್ ಬೆಳೆದಿದೆ. ರಾಖಿ ಸಾವಂತ್ ತಾಯಿ ಅನಾರೋಗ್ಯಕ್ಕೆ ಒಳಗಾದಾಗ ಸಲ್ಮಾನ್ ಖಾನ್ ಆರ್ಥಿಕವಾಗಿ ಸಹಾಯ ಮಾಡಿದ್ದರು. ರಾಖಿ ಸಾವಂತ್ ಪ್ರಕಾರ ಅವರ ತಾಯಿ ಅನಾರೋಗ್ಯಕ್ಕೆ ಒಳಗಾಗಿದ್ದಾಗ ಸಲ್ಮಾನ್ ಖಾನ್ ಅವರು 50 ಲಕ್ಷ ರೂಪಾಯಿ ನೀಡಿದ್ದರಂತೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us