
‘ರಾಮಾಯಣ’ ಸಿನಿಮಾ ಭಾರತದಾದ್ಯಂತ ಅದ್ಭುತ ಗಳಿಕೆ ಮಾಡುತ್ತಿದೆ. ಮೊದಲ ದಿನ ನಿರೀಕ್ಷಿಸಿದಷ್ಟು ಕಲೆಕ್ಷನ್ ಆಗಲಿಲ್ಲವಾದರೂ ಆ ನಂತರದ ದಿನಗಳಲ್ಲಿ ಜನ ಚಿತ್ರಮಂದಿರಕ್ಕೆ ಮುಗಿಬೀಳುತ್ತಿದ್ದಾರೆ. ಬಿಡುಗಡೆ ಆದ ಐದೇ ದಿನದಲ್ಲಿ ಹಲವು ದಾಖಲೆಗಳನ್ನು ‘ರಾಮಾಯಣ’ ಸಿನಿಮಾ ಮುರಿದಿದ್ದು, ಹಲವಾರು ಕಡೆ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿದ ಮಂದಿ ಅದ್ಧೂರಿತನಕ್ಕೆ, ನಟ-ನಟಿಯರ ಅಭಿನಯಕ್ಕೆ ಮನಸೋತಿದ್ದಾರೆ. ಉತ್ತರ ಭಾರತದಲ್ಲಿ ಮಾತ್ರವೇ ಅಲ್ಲದೆ ದಕ್ಷಿಣ ಭಾರತದಲ್ಲಿಯೂ ಸಹ ಸಿನಿಮಾ ಭರ್ಜರಿ ಗಳಿಕೆ ಮಾಡುತ್ತಿದೆ. ಅದರಲ್ಲೂ ಕೇರಳದಲ್ಲಿ ಹೊಸ ದಾಖಲೆಯನ್ನೇ ಬರೆದಿದೆ ಈ ಸಿನಿಮಾ.
ಸಾಮಾನ್ಯವಾಗಿ ಬಾಲಿವುಡ್ ಸಿನಿಮಾಗಳು ದಕ್ಷಿಣ ಭಾರತದಲ್ಲಿ ಒಳ್ಳೆಯ ಗಳಿಕೆ ಮಾಡುವುದು ಬಹಳ ಕಡಿಮೆ. ಉತ್ತರದಲ್ಲಿ ಬ್ಲಾಕ್ ಬಸ್ಟರ್ ಆದ ಸಿನಿಮಾಗಳು ಸಹ ದಕ್ಷಿಣ ಭಾರತದಲ್ಲಿ ಫ್ಲಾಪ್ ಆದ ಉದಾಹರಣೆಗಳು ಸಾಕಷ್ಟಿವೆ. ಅದರಲ್ಲೂ ತಮಿಳುನಾಡು, ಕೇರಳಗಳ್ಳಂತೂ ಬಾಲಿವುಡ್ ಸಿನಿಮಾಗಳಿಗೆ ಮಾರುಕಟ್ಟೆ ಅತ್ಯಂತ ಕಡಿಮೆ. ಆದರೆ ‘ರಾಮಾಯಣ’ ಸಿನಿಮಾಕ್ಕೆ ಈ ರಾಜ್ಯಗಳಲ್ಲಿಯೂ ಸಹ ಒಳ್ಳೆಯ ಪ್ರತಿಕ್ರಿಯೆ ದೊರಕುತ್ತಿದೆ. ಅದರಲ್ಲೂ ಕೇರಳದಲ್ಲಿ ಹೊಸ ದಾಖಲೆಯನ್ನೇ ‘ರಾಮಾಯಣ’ ಸಿನಿಮಾ ಬರೆದಿದೆ.
ಕೇರಳದಲ್ಲಿ ಇದೇ ಮೊದಲ ಬಾರಿಗೆ ಬಾಲಿವುಡ್ ಸಿನಿಮಾ ಒಂದು ಭಾರಿ ದೊಡ್ಡ ಮೊತ್ತ ಗಳಿಕೆ ಮಾಡಿದೆ. ‘ರಾಮಾಯಣ’ ಸಿನಿಮಾವು ಕೇರಳ ಬಾಕ್ಸ್ ಆಫೀಸ್ನಲ್ಲಿ 20 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಕೇರಳದಲ್ಲಿ ಇಷ್ಟು ದೊಡ್ಡ ಗಳಿಕೆ ಮಾಡಿದ ಮೊಟ್ಟ ಮೊದಲ ಬಾಲಿವುಡ್ ಸಿನಿಮಾ ಎನಿಸಿಕೊಂಡಿದೆ.
ಇದನ್ನೂ ಓದಿ:ಕನ್ನಡ ವರ್ಷನ್ನಲ್ಲಿ‘ರಾಮಾಯಣ’ ಹೊಸ ದಾಖಲೆ; ‘ಟಾಕ್ಸಿಕ್’ ದಾಖಲೆ ಉಡೀಸ್
ಈ ಹಿಂದೆ ‘ಧುರಂಧರ್ 2’ ಸಿನಿಮಾ ಕೇರಳದಲ್ಲಿ 19.50 ಕೋಟಿ ಗಳಿಕೆ ಮಾಡಿತ್ತು. ಆದರೆ ಕೇವಲ ಆರೇ ದಿನಗಳಲ್ಲಿ ‘ರಾಮಾಯಣ’ ಸಿನಿಮಾ 20 ಕೋಟಿ ರೂಪಾಯಿ ಗಳಿಕೆ ಮಾಡಿ ಮೊದಲ ಸ್ಥಾನಕ್ಕೇರಿದೆ. ‘ಧುರಂಧರ್ 2’ ಎರಡನೇ ಸ್ಥಾನದಲ್ಲಿದೆ. ಈ ಸಿನಿಮಾಗಳ ಹೊರತಾಗಿ, ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ 13.40 ಕೋಟಿ ಗಳಿಕೆ ಮಾಡಿದ್ದರೆ, ‘ಪಠಾಣ್’ ಸಿನಿಮಾ 13.10 ಕೋಟಿ ರೂಪಾಯಿ ಗಳಿಕೆಯನ್ನು ಮಾಡಿತ್ತು. ಈ ಎಲ್ಲ ದಾಖಲೆಗಳನ್ನು ಮುರಿದು ಈ ಸಿನಿಮಾ 20 ಕೋಟಿ ಹಣ ಗಳಿಕೆ ಮಾಡಿದೆ.
ಕೇರಳದಲ್ಲಿ ‘ರಾಮಾಯಣ’ ಸಿನಿಮಾವು ಹಿಂದಿ, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ರಿಲೀಸ್ ಆಗಿದೆ. ಅದರಲ್ಲೂ ಮಲಯಾಳಂ ಮತ್ತು ಹಿಂದಿ ಆವೃತ್ತಿಗಳಿಗೆ ಹೆಚ್ಚು ಸ್ಕ್ರೀನ್ಗಳು ದೊರೆತಿದ್ದು, ವಾರದ ದಿನಗಳಲ್ಲಿಯೂ ಸಹ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.
‘ರಾಮಾಯಣ’ ಸಿನಿಮಾನಲ್ಲಿ ರಣ್ಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ನಟಿಸಿದ್ದು, ಸಿನಿಮಾಕ್ಕೆ ನಿತೇಶ್ ತಿವಾರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ನಮಿತ್ ಮಲ್ಹೋತ್ರಾ ನಿರ್ಮಾಣ ಮಾಡಿದ್ದಾರೆ. ಸಿನಿಮಾ ನವೆಂಬರ್ 5ಕ್ಕೆ ರಿಲೀಸ್ ಆಗಿದೆ. ಮುಂದಿನ ಭಾಗ 2028ಕ್ಕೆ ರಿಲೀಸ್ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ