AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಕರ್​​ಗೆ ಹೊರಟ ‘ರಾಮಾಯಣ’: ಯಾವ ವಿಭಾಗಗಳಲ್ಲಿ ಪ್ರಶಸ್ತಿಗೆ ಸ್ಪರ್ಧೆ?

ಮೊದಲ ದಿನ ನಿರೀಕ್ಷಿತ ಮಟ್ಟದ ಗಳಿಕೆ ಮಾಡದೇ ಇದ್ದರು ಆ ನಂತರ ಭಾರಿ ಗಳಿಕೆ ಮಾಡುತ್ತಾ ಬಾಕ್ಸ್ ಆಫೀಸ್​​ನಲ್ಲಿ ಮುನ್ನುಗ್ಗುತ್ತಿದೆ ಸಿನಿಮಾ. ವಿದೇಶಗಳಲ್ಲೂ ಸಹ ಭಾರಿ ಅದ್ಧೂರಿಯಾಗಿ ಸಿನಿಮಾ ರಿಲೀಸ್ ಆಗಿದ್ದು, ವಿದೇಶದಲ್ಲಿ ಸಹ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ನಿತೀಶ್ ತಿವಾರಿ ನಿರ್ದೇಶನದ ಈ ಪೌರಾಣಿಕ ಸಿನಿಮಾವನ್ನು ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು 2027ರಲ್ಲಿ ನಡೆಯಲಿರುವ 99ನೇ ಅಕಾಡೆಮಿ ಪ್ರಶಸ್ತಿಗಳ ಪರಿಗಣನೆಗೆ ಕಳುಹಿಸಿದ್ದಾರೆ.

ಆಸ್ಕರ್​​ಗೆ ಹೊರಟ ‘ರಾಮಾಯಣ’: ಯಾವ ವಿಭಾಗಗಳಲ್ಲಿ ಪ್ರಶಸ್ತಿಗೆ ಸ್ಪರ್ಧೆ?
Ramayana Oscars
ಮಂಜುನಾಥ ಸಿ.
|

Updated on: Nov 11, 2026 | 2:39 PM

Share

ಮುಖ್ಯಾಂಶಗಳು

  • ‘ರಾಮಾಯಣ’ ಸಿನಿಮಾ ಭರ್ಜರಿ ಹಿಟ್ ಆಗಿದೆ
  • ‘ರಾಮಾಯಣ’ ಸಿನಿಮಾ ಆಸ್ಕರ್​​​ ರೇಸಿಗೆ ಹೊರಟಿದೆ
  • ಭಾರತದಿಂದ ಆಸ್ಕರ್​​ ರೇಸಿಗೆ ಹೊರಟ ಮೂರನೇ ಸಿನಿಮಾ

ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ನಟಿಸಿರುವ ‘ರಾಮಾಯಣ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅದ್ಧೂರಿ ಗಳಿಕೆ ಕಾಣುತ್ತಿದೆ. ಮೊದಲ ದಿನ ನಿರೀಕ್ಷಿತ ಮಟ್ಟದ ಗಳಿಕೆ ಮಾಡದೇ ಇದ್ದರು ಆ ನಂತರ ಭಾರಿ ಗಳಿಕೆ ಮಾಡುತ್ತಾ ಬಾಕ್ಸ್ ಆಫೀಸ್​​ನಲ್ಲಿ ಮುನ್ನುಗ್ಗುತ್ತಿದೆ ಸಿನಿಮಾ. ವಿದೇಶಗಳಲ್ಲೂ ಸಹ ಭಾರಿ ಅದ್ಧೂರಿಯಾಗಿ ಸಿನಿಮಾ ರಿಲೀಸ್ ಆಗಿದ್ದು, ವಿದೇಶದಲ್ಲಿ ಸಹ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ನಿತೀಶ್ ತಿವಾರಿ ನಿರ್ದೇಶನದ ಈ ಪೌರಾಣಿಕ ಸಿನಿಮಾವನ್ನು ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು 2027ರಲ್ಲಿ ನಡೆಯಲಿರುವ 99ನೇ ಅಕಾಡೆಮಿ ಪ್ರಶಸ್ತಿಗಳ ಪರಿಗಣನೆಗೆ ಕಳುಹಿಸಿದ್ದಾರೆ.

‘ರಾಮಾಯಣ’ ಸಿನಿಮಾವನ್ನು ಆಸ್ಕರ್ ರೇಸಿಗೆ ಕಳಿಸಲಾಗಿದ್ದು, ಆ ಮೂಲಕ ಈ ವರ್ಷದ (2026-27) ಪ್ರಶಸ್ತಿ ಸ್ಪರ್ಧೆಗೆ ಮತ್ತೊಂದು ಭಾರತೀಯ ಚಿತ್ರ ಸೇರ್ಪಡೆಯಾದಂತಾಗಿದೆ. ಮರಾಠಿ ಚಿತ್ರ ‘ಗೊಂಧಳ್’ ಅನ್ನು ಅತ್ಯುತ್ತಮ ವಿದೇಶಿ ಚಲನಚಿತ್ರ ವಿಭಾಗಕ್ಕೆ ಭಾರತದ ಅಧಿಕೃತ ಪ್ರವೇಶವಾಗಿ ಆಯ್ಕೆ ಮಾಡಲಾಗಿದೆ. ಅದರ ಬೆನ್ನಲ್ಲೆ ‘ರಾಮಾಯಣ’ ಸಿನಿಮಾವನ್ನು ಸಹ ಆಸ್ಕರ್​​ಗೆ ಕಳಿಸಲಾಗಿದೆ. ಹಾಗೆಂದು ‘ಗೋಂಧಳ್’ ಜೊತೆಗೆ ‘ರಾಮಾಯಣ’ ಸಿನಿಮಾ ಸ್ಪರ್ಧೆ ಮಾಡುವುದಿಲ್ಲ. ಬದಲಿಗೆ ಎರಡೂ ಸಿನಿಮಾಗಳು ಪ್ರತ್ಯೇಕವಾಗಿ ‘ಆಸ್ಕರ್​​’ಗಾಗಿ ಸ್ಪರ್ಧೆ ಮಾಡಲಿವೆ.

ಆಸ್ಕರ್​​ಗೆ ಸಾಮಾನ್ಯ ಪ್ರವೇಶಕ್ಕಾಗಿ, ಚಿತ್ರವು ಅಮೆರಿಕದಲ್ಲಿ ಅರ್ಹತಾ ಚಿತ್ರಮಂದಿರ ಪ್ರದರ್ಶನವನ್ನು ಪೂರ್ಣಗೊಳಿಸಬೇಕು. ಇದರಲ್ಲಿ, ಅಮೆರಿಕದ ಅರ್ಹ ಮಹಾನಗರ ಪ್ರದೇಶದಲ್ಲಿ ಕನಿಷ್ಠ ಸತತ ಏಳು ದಿನಗಳ ಕಾಲ, ನಿಗದಿತ ಸಂಖ್ಯೆಯ ದೈನಂದಿನ ಪ್ರದರ್ಶನಗಳೊಂದಿಗೆ ಚಿತ್ರ ಪ್ರದರ್ಶನವಾಗಿರಬೇಕು. ಅರ್ಹ ಸ್ಥಳಗಳಲ್ಲಿ ಲಾಸ್ ಏಂಜಲೀಸ್ ಕೌಂಟಿ, ನ್ಯೂಯಾರ್ಕ್ ಸಿಟಿ, ಸ್ಯಾನ್ ಫ್ರಾನ್ಸಿಸ್ಕೋ ಬೇ ಪ್ರದೇಶ, ಚಿಕಾಗೋ, ಡಲ್ಲಾಸ್-ಫೋರ್ಟ್ ವರ್ತ್ ಮತ್ತು ಅಟ್ಲಾಂಟಾ ಸೇರಿವೆ.

ಇದನ್ನೂ ಓದಿ:‘ತಲೆಕೆಡಿಸಿಕೊಳ್ಳಲ್ಲ’; ‘ರಾಮಾಯಣ’ ವಿಮರ್ಶೆ ಮತ್ತು ಟ್ರೋಲಿಂಗ್‌ಗೆ ರಣಬೀರ್ ಕಪೂರ್ ಉತ್ತರ

ಈ ಅಗತ್ಯತೆಗಳನ್ನು ಪೂರೈಸಿದ ನಂತರ, ಚಿತ್ರನಿರ್ಮಾಪಕರು ಅಥವಾ ವಿತರಕರು ಅಕಾಡೆಮಿಯ ಜನರಲ್ ಎಂಟ್ರಿ ಫಾರ್ಮ್ ಅನ್ನು ಭರ್ತಿ ಮಾಡಿ ಅಗತ್ಯ ಚಿತ್ರಮಂದಿರ ಮತ್ತು ನಿರ್ಮಾಣ ಮಾಹಿತಿಯನ್ನು ಸಲ್ಲಿಸಬಹುದು. ಚಿತ್ರವನ್ನು ಸಲ್ಲಿಸಿದ ಮಾತ್ರಕ್ಕೆ ಅದು ಆಸ್ಕರ್ ಶಾರ್ಟ್‌ಲಿಸ್ಟ್ ಅಥವಾ ಅಂತಿಮ ನಾಮನಿರ್ದೇಶನ ಪಟ್ಟಿಗೆ ಸೇರುತ್ತದೆ ಎನ್ನಲಾಗುತ್ತದೆ. ಆದರೆ ಇದು ಅಧಿಕೃತ ಸಲ್ಲಿಕೆ ಆಗಿರುವುದಿಲ್ಲ. ಆದ್ದರಿಂದ ಈ ಸಿನಿಮಾ ಅತ್ಯುತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಿ ಸ್ಪರ್ಧಿಸಲು ಅರ್ಹತೆ ಗಳಿಸುವುದಿಲ್ಲ. ಆದರೆ ಇತರೆ ವಿಭಾಗಗಳಲ್ಲಿ ಸ್ಪರ್ಧೆ ಮಾಡಬಹುದಾಗಿರುತ್ತದೆ.

ಪ್ರತಿ ದೇಶವು ತನ್ನ ಅಧಿಕೃತ ಆಯ್ಕೆ ಸಮಿತಿಯಿಂದ ಆಯ್ಕೆಯಾದ ಒಂದೇ ಒಂದು ಚಿತ್ರವನ್ನು ಸಲ್ಲಿಸುತ್ತದೆ. 2027ರ ಆಸ್ಕರ್‌ಗಾಗಿ, ಈ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲು ಮರಾಠಿ ಚಿತ್ರ ‘ಗೊಂಧಳ್’ ಆಯ್ಕೆಯಾಗಿದೆ. ನಾಗಾ ಭಾಷೆಯ ಚಿತ್ರ ‘ಅಂಘ್’ 2026ರ ಟೊರಾಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಲಾಟ್‌ಫಾರ್ಮ್ ಪ್ರಶಸ್ತಿ ಗೆದ್ದ ನಂತರ, ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗದ ಪರಿಗಣನೆಗೆ ಅರ್ಹತೆ ಪಡೆದಿದೆ. ಇದೂ ಸಹ ಭಾರತೀಯ ಸಿನಿಮಾ ಆಗಿದೆ.

ಕೆಲ ಮೂಲಗಳ ಪ್ರಕಾರ, ‘ರಾಮಾಯಣ’ ಸಿನಿಮಾವು ಸಂಗೀತ, ವಿಷ್ಯುಲ್ ಎಫೆಕ್ಟ್ಸ್, ವಸ್ತ್ರಾಲಂಕಾರ, ಅಡಾಪ್ಟೆಡ್ ಚಿತ್ರಕತೆ ಇನ್ನೂ ಕೆಲ ವಿಭಾಗಗಳಲ್ಲಿ ಸ್ಪರ್ಧೆ ಮಾಡಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ನಮ್ಮ ಮೆಟ್ರೋ; ಮುಂದಿನ ವರ್ಷ ಕಾರ್ಯರೂಪಕ್ಕೆ: ಕೃಷ್ಣ ಬೈರೇಗೌಡ
ನಮ್ಮ ಮೆಟ್ರೋ; ಮುಂದಿನ ವರ್ಷ ಕಾರ್ಯರೂಪಕ್ಕೆ: ಕೃಷ್ಣ ಬೈರೇಗೌಡ
ನಂದಿನಿ ಬೆನ್ನಲ್ಲೇ ಮದರ್ ಡೈರಿ ಹಾಲಿನ ದರದಲ್ಲಿಯೂ ಏರಿಕೆ
ನಂದಿನಿ ಬೆನ್ನಲ್ಲೇ ಮದರ್ ಡೈರಿ ಹಾಲಿನ ದರದಲ್ಲಿಯೂ ಏರಿಕೆ
ಬಸ್​​ ಟಿಕೆಟ್​​ ದರ ಏರಿಕೆ ಬಳಿಕವೂ ಬಿಎಂಟಿಸಿಯಿಂದ 'ಡಕೋಟಾ ಬಸ್'​​ ಸೇವೆ!
ಬಸ್​​ ಟಿಕೆಟ್​​ ದರ ಏರಿಕೆ ಬಳಿಕವೂ ಬಿಎಂಟಿಸಿಯಿಂದ 'ಡಕೋಟಾ ಬಸ್'​​ ಸೇವೆ!
ಮಂತ್ರಘೋಷಗಳು ಮೊಳಗುತ್ತಿದ್ದಂತೆ ತೆರೆದುಕೊಳ್ಳುವ ದೇಗುಲದ ಗರ್ಭಗುಡಿ ಬಾಗಿಲು!
ಮಂತ್ರಘೋಷಗಳು ಮೊಳಗುತ್ತಿದ್ದಂತೆ ತೆರೆದುಕೊಳ್ಳುವ ದೇಗುಲದ ಗರ್ಭಗುಡಿ ಬಾಗಿಲು!
ಇಲ್ಲಿ ಪರಸ್ಪರ ಸಗಣಿ ಗಟ್ಟಿ ಎಸೆದುಕೊಳ್ಳೋದೇ ಹಬ್ಬದ ಮಜಾ!
ಇಲ್ಲಿ ಪರಸ್ಪರ ಸಗಣಿ ಗಟ್ಟಿ ಎಸೆದುಕೊಳ್ಳೋದೇ ಹಬ್ಬದ ಮಜಾ!
ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚುವ ಬಗ್ಗೆ ದೇಗುಲದ ಅರ್ಚಕ ಹೇಳಿದ್ದೇನು?
ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚುವ ಬಗ್ಗೆ ದೇಗುಲದ ಅರ್ಚಕ ಹೇಳಿದ್ದೇನು?
ಪಟಾಕಿ ಶಬ್ದದಿಂದ ಹೃದಯಾಘಾತವಾಗಿ 6 ವರ್ಷದ ಡಾಬರ್​ಮನ್​​​​ ನಾಯಿ ಸಾವು
ಪಟಾಕಿ ಶಬ್ದದಿಂದ ಹೃದಯಾಘಾತವಾಗಿ 6 ವರ್ಷದ ಡಾಬರ್​ಮನ್​​​​ ನಾಯಿ ಸಾವು
ಅಂಗವಿಕಲನಂತೆ ನಟಿಸಿ ಭಿಕ್ಷಾಟನೆ ; ಯುವಕನನ್ನು ಹಿಡಿದು ಥಳಿಸಿದ ಸಾರ್ವಜನಿಕರು
ಅಂಗವಿಕಲನಂತೆ ನಟಿಸಿ ಭಿಕ್ಷಾಟನೆ ; ಯುವಕನನ್ನು ಹಿಡಿದು ಥಳಿಸಿದ ಸಾರ್ವಜನಿಕರು
ಹಾಸನಾಂಬೆ ದರ್ಶನಕ್ಕೆ ಇಂದು ತೆರೆ: ಕೊನೆಯ ದಿನದ ದರ್ಶನಕ್ಕೆ ಭಕ್ತರ ಸಾಲು
ಹಾಸನಾಂಬೆ ದರ್ಶನಕ್ಕೆ ಇಂದು ತೆರೆ: ಕೊನೆಯ ದಿನದ ದರ್ಶನಕ್ಕೆ ಭಕ್ತರ ಸಾಲು
ಬಿಗ್ ಬಾಸ್ ಮನೆಯಲ್ಲಿ ಮತ್ತೆ ಮಂಜು-ಯಶಸ್ ಕಿರಿಕ್; ಮರುಕಳಿಸುತ್ತಾ ಇತಿಹಾಸ?
ಬಿಗ್ ಬಾಸ್ ಮನೆಯಲ್ಲಿ ಮತ್ತೆ ಮಂಜು-ಯಶಸ್ ಕಿರಿಕ್; ಮರುಕಳಿಸುತ್ತಾ ಇತಿಹಾಸ?