ಮಾಡಿದ ತಪ್ಪಿಗೆ ಕ್ಷಮೆ ಕೇಳಿದ ರಣಬೀರ್ ಕಪೂರ್; ವಿವಾದ ಆಗೋ ಮೊದಲೇ ತಿದ್ದಿಕೊಂಡ ನಟ

ಕೋಲ್ಕತ್ತಾದಲ್ಲಿ ನಡೆದ ರಾಮಾಯಣ ಸಿನಿಮಾದ ಪ್ರಚಾರದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತಪ್ಪಾಗಿ ಮಾತನಾಡಿದ್ದ ಬಾಲಿವುಡ್ ನಟ ರಣ್‌ಬೀರ್ ಕಪೂರ್, ತಮ್ಮ ಹೇಳಿಕೆಗೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ನಟ ಕ್ಷಮೆ ಕೋರಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಮಾಡಿದ ತಪ್ಪಿಗೆ ಕ್ಷಮೆ ಕೇಳಿದ ರಣಬೀರ್ ಕಪೂರ್; ವಿವಾದ ಆಗೋ ಮೊದಲೇ ತಿದ್ದಿಕೊಂಡ ನಟ
ರಣಬೀರ್ ಕಪೂರ್

Updated on: Oct 22, 2026 | 10:13 AM

ಮುಖ್ಯಾಂಶಗಳು

  • ರಾಮಾಯಣ ಈವೆಂಟ್‌ನಲ್ಲಿ ನಟ ರಣ್‌ಬೀರ್ ಕಪೂರ್ ಕ್ಷಮೆಯಾಚನೆ
  • ಭಾಷಣದಲ್ಲಿ ಎಡವಟ್ಟು: ನೆಟಿಗರಿಂದ ತೀವ್ರ ಟೀಕೆ ಎದುರಿಸಿದ ಸ್ಟಾರ್ ನಟ
  • ರಾಮಾಯಣ ಸಿನಿಮಾದ ಪ್ರಚಾರದ ವೇಳೆ ನಡೆದ ವಿವಾದಾತ್ಮಕ ಘಟನೆ

ಬಾಲಿವುಡ್‌ನ ಖ್ಯಾತ ನಟ ರಣ್‌ಬೀರ್ ಕಪೂರ್ ಅವರು ಇತ್ತೀಚೆಗೆ ನಡೆದ ‘ರಾಮಾಯಣ’ ಸಿನಿಮಾದ ಪ್ರಚಾರದ ವೇಳೆ ತಪ್ಪಾಗಿ ಮಾತನಾಡಿದ್ದರು. ಈ ಮಾತಿಗೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ. ಕೋಲ್ಕತ್ತಾದಲ್ಲಿ ನಡೆದ ಈವೆಂಟ್‌ನಲ್ಲಿ ಅವರು ಮಾತನಾಡುತ್ತಿದ್ದಾಗ ವಿರುದ್ಧ ಅರ್ಥ ಬರುವಂತೆ ಹೇಳಿಕೆ ನೀಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಇದರಿಂದಾಗಿ ನೆಟಿಗರು ಮತ್ತು ಅಭಿಮಾನಿಗಳಿಂದ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು. ಈ ಘಟನೆಯು ಚಿತ್ರರಂಗದಲ್ಲಿ ಮತ್ತು ಅಭಿಮಾನಿಗಳ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು.

‘ಕೆಟ್ಟತನ ಎಷ್ಟೇ ದೊಡ್ಡದಿದ್ದರೂ ಕೊನೆಗೆ ಸತ್ಯ ಮತ್ತು ಒಳ್ಳೆಯದೇ ಗೆಲ್ಲುತ್ತದೆ’ ಎಂಬುದನ್ನು ಹೇಳುವಾಗ ತುಸು ಗೊಂದಲ ಉಂಟಾಗಿತ್ತು. ‘ಒಳ್ಳೆತನ ಎಷ್ಟೇ ಇದ್ದರೂ ಕೆಟ್ಟದ್ದೇ ಗೆಲ್ಲುತ್ತದೆ’ ಎಂದು ಹೇಳಿ ಬಿಟ್ಟರು. ‘ರಾಮಾಯಣ’ದಂತಹ ಪವಿತ್ರ ಮಹಾಕಾವ್ಯದ ಬಗ್ಗೆ ಮಾತನಾಡುವಾಗ ಸೆಲೆಬ್ರಿಟಿಗಳು ಅತ್ಯಂತ ಎಚ್ಚರಿಕೆಯಿಂದ ಇರಬೇಕು ಎಂದು ಅಭಿಮಾನಿಗಳು ಆಗ್ರಹಿಸಿದರು.

ವಿವಾದ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ನಟ ರಣ್‌ಬೀರ್ ಕಪೂರ್ ತಕ್ಷಣವೇ ತಾವ ಆಡಿದ ಮಾತಿಗೆ ಕ್ಷಮೆಯಾಚಿಸಿದ್ದಾರೆ. ಚೆನ್ನೈನನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಅವರು ತಮ್ಮ ತಪ್ಪನ್ನು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ಉಂಟಾದ ಬೇಸರಕ್ಕೆ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ರಣ್‌ಬೀರ್ ಅವರ ಈ ಕ್ಷಮೆಯಾಚನೆಯು ಸದ್ಯ ವಿವಾದಕ್ಕೆ ಒಂದು ಹಂತದ ತೆರೆ ಎಳೆದಿದೆ.

ರಾಮಾಯಣದಂತಹ ಐತಿಹಾಸಿಕ ಸಿನಿಮಾಗಳಲ್ಲಿ ನಟಿಸುವಾಗ ನಟರ ಮೇಲೆ ದೊಡ್ಡ ಜವಾಬ್ದಾರಿ ಇರುತ್ತದೆ. ಪ್ರೇಕ್ಷಕರು ಕೇವಲ ನಟನೆಯನ್ನು ಮಾತ್ರವಲ್ಲದೆ, ಆ ಮಹಾಕಾವ್ಯದ ಮೌಲ್ಯಗಳನ್ನು ನಟರು ಹೇಗೆ ಅರ್ಥೈಸಿಕೊಂಡಿದ್ದಾರೆ ಎಂಬುದನ್ನು ಗಮನಿಸುತ್ತಾರೆ. ಸಾರ್ವಜನಿಕ ಭಾಷಣಗಳಲ್ಲಿ ಸಣ್ಣ ತಪ್ಪುಗಳೂ ಸಹ ದೊಡ್ಡ ಮಟ್ಟದ ವಿವಾದಗಳಿಗೆ ಕಾರಣವಾಗುತ್ತವೆ. ಇದು ಬಾಲಿವುಡ್‌ನ ದೊಡ್ಡ ಸ್ಟಾರ್‌ಗಳಿಗೆ ಒಂದು ದೊಡ್ಡ ಪಾಠವಾಗಿದೆ.

ಇದನ್ನೂ ಓದಿ: ರಣ್​ಬೀರ್ ಕಪೂರ್ ಅನ್ನು ರಾಮನ ಪಾತ್ರದಲ್ಲಿ ಒಪ್ಪಲಾಗದು, ತಗಾದೆ ತೆಗೆದ ಹಿರಿಯ ನಟ

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದಲ್ಲಿ ರಣ್‌ಬೀರ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಬಗ್ಗೆ ಈಗಾಗಲೇ ಭಾರೀ ನಿರೀಕ್ಷೆಗಳಿವೆ. ಇಂತಹ ಸಮಯದಲ್ಲಿ ನಟರು ಮಾತನಾಡುವಾಗ ಹೆಚ್ಚಿನ ಎಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us