ರಣಬೀರ್ ಮುಖಕ್ಕೆ ದೇಹ ನೀಡಿದ ನಟ; ‘ರಾಮಾಯಣ’ದ ಪರಶುರಾಮ ಪಾತ್ರದ ರೋಚಕ ಕಥೆ

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾದಲ್ಲಿ ರಣಬೀರ್ ಕಪೂರ್ ಶ್ರೀರಾಮ ಹಾಗೂ ಪರಶುರಾಮನಾಗಿ ನಟಿಸಿದ್ದಾರೆ ಎನ್ನಲಾಗಿತ್ತು. ಆದರೆ ಪರಶುರಾಮನ ಪಾತ್ರಕ್ಕೆ ನಟ ಅಭಯ್ ಅರೋರಾ ಅಭಿನಯಿಸಿದ್ದು. ಅವರ ದೇಹಕ್ಕೆ ತಾಂತ್ರಿಕವಾಗಿ ರಣಬೀರ್ ಮುಖ ಜೋಡಿಸಲಾಗಿದೆ. ಈ ಕುರಿತು ಅಭಯ್ ಅರೋರಾ ರಾಮಾಯಣ ಸಿನಿಮಾದ ರೋಚಕ ಶೂಟಿಂಗ್ ಅನುಭವವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ರಣಬೀರ್ ಮುಖಕ್ಕೆ ದೇಹ ನೀಡಿದ ನಟ; ‘ರಾಮಾಯಣ’ದ ಪರಶುರಾಮ ಪಾತ್ರದ ರೋಚಕ ಕಥೆ
ಪರಶುರಾಮ

Updated on: Nov 11, 2026 | 2:29 PM

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ‘ ಸಿನಿಮಾ ವಿಶ್ವಾದ್ಯಂತ ಅದ್ದೂರಿ ಕಲೆಕ್ಷನ್ ಮಾಡಿದೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ಕಾಣಿಸಿಕೊಂಡಿದ್ದಾರೆ. ಅದರ ಜೊತೆಗೆ ಪರಶುರಾಮನ ಪಾತ್ರದಲ್ಲೂ ರಣಬೀರ್ ಅಭಿನಯಿಸಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು. ಆದರೆ ಈ ದ್ವಿಪಾತ್ರದ ಹಿಂದಿನ ಅಸಲಿ ರಹಸ್ಯವನ್ನು ನಟ ಅಭಯ್ ಅರೋರಾ ಬಹಿರಂಗಪಡಿಸಿದ್ದಾರೆ.

ಪರಶುರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಜೊತೆ ತಾವೂ ಅಭಿನಯಿಸಿರುವುದಾಗಿ ಅಭಯ್ ಅರೋರಾ ತಿಳಿಸಿದ್ದಾರೆ. ವಿಷ್ಣುವಿನ ಆರನೇ ಅವತಾರವಾದ ಪರಶುರಾಮ ಹಾಗೂ ಏಳನೇ ಅವತಾರವಾದ ರಾಮನ ಮುಖದ ಹೋಲಿಕೆಯಲ್ಲಿ ಸಾಮ್ಯತೆ ತರುವುದು ಚಿತ್ರತಂಡದ ಉದ್ದೇಶವಾಗಿತ್ತು. ಹೀಗಾಗಿ ಅಭಯ್ ನೀಡಿದ ಅಭಿನಯಕ್ಕೆ ತಾಂತ್ರಿಕವಾಗಿ ರಣಬೀರ್ ಕಪೂರ್ ಅವರ ಮುಖವನ್ನು ಜೋಡಿಸಲಾಗಿದೆ.

Loading...

ಅಭಯ್ ಅರೋರಾ ಅವರೇ ಪರಶುರಾಮನಾಗಿ ನಟಿಸಿದ್ದಾರೆ. ಧನುಸ್ಸು ಹಿಡಿಯುವ ಹಾಗೂ ಕುಳಿತುಕೊಳ್ಳುವ ಭಂಗಿಗಳೂ ಸೇರಿದಂತೆ ಪ್ರಮುಖ ಶೂಟಿಂಗ್ ಇವರಿಂದಲೇ ನಡೆದಿದೆ. ಸಾಮಾನ್ಯ ಬಾಡಿ ಡಬಲ್ ರೀತಿ ಕೇವಲ ನಿಲ್ಲುವುದು ಮಾತ್ರವಲ್ಲದೆ, ಪೂರ್ಣ ಪ್ರಮಾಣದ ಸಂಭಾಷಣೆ ಹಾಗೂ ಭಾವನೆ ವ್ಯಕ್ತಪಡಿಸಿ ಅಭಯ್ ಈ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಅಭಯ್ ಅರೋರಾ ಅವರು ಆದಿತ್ಯ ಧರ್ ನಿರ್ದೇಶನದ ‘ಧುರಂಧರ್’ ಸಿನಿಮಾದಲ್ಲೂ ನಟಿಸಿದ್ದಾರೆ. ಬ್ಯಾಂಕಾಕ್‌ನಲ್ಲಿ ಧುರಂಧರ್ ಶೂಟಿಂಗ್ ಮುಗಿಸಿ, ತಕ್ಷಣ ಮುಂಬೈಗೆ ಬಂದು ರಾಮಾಯಣ ಸೆಟ್ ಸೇರಿಕೊಳ್ಳುತ್ತಿದ್ದರು. ಭಾರತದಲ್ಲಿ ಈ ಎರಡೂ ಬಹುನಿರೀಕ್ಷಿತ ದೊಡ್ಡ ಸಿನಿಮಾಗಳ ಭಾಗವಾದ ಏಕೈಕ ನಟ ತಾವೆಂದು ಅವರು ಸಂತಸ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕನ್ನಡ ವರ್ಷನ್​​ನಲ್ಲಿ‘ರಾಮಾಯಣ’ ಹೊಸ ದಾಖಲೆ; ‘ಟಾಕ್ಸಿಕ್’ ದಾಖಲೆ ಉಡೀಸ್

ರಣಬೀರ್ ಕಪೂರ್ ಹಾಗೂ ಅರುಣ್ ಗೋವಿಲ್ ಜೊತೆ ನಟಿಸಿದ್ದು ತಮಗೆ ಸಿಕ್ಕ ದೊಡ್ಡ ಭಾಗ್ಯ ಎಂದು ಅಭಯ್ ಹೇಳಿದ್ದಾರೆ. ‘ಸೆಟ್‌ನಲ್ಲಿ ರಣಬೀರ್ ಅತ್ಯಂತ ಸರಳವಾಗಿ ನಡೆದುಕೊಂಡರು. ಅವರೊಂದಿಗೆ ಸಿನಿಮಾ ಹಾಗೂ ಜೀವನದ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದೆ. ಹಳೆಯ ರಾಮಾಯಣದ ರಾಮ ಅರುಣ್ ಗೋವಿಲ್ ಅವರ ಸರಳತೆ ಕಂಡು ನಿಜಕ್ಕೂ ಬೆರಗಾದೆ’ ಎಂದು ಅಭಯ್ ನೆನಪಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us