ರಣವೀರ್ ಸಿಂಗ್ ನಟನೆಯ ಸಿನಿಮಾಗಳು ಒಂದಾದಮೇಲೆ ಒಂದರಂತೆ ಅರ್ಧಕ್ಕೆ ನಿಲ್ಲುತ್ತಿವೆ. ಅವರು ಹನುಮಾನ್ ನಿರ್ದೇಶಕ ಪ್ರಶಾಂತ್ ವರ್ಮಾ ಜೊತೆ ಸಿನಿಮಾ ಒಂದನ್ನು ಮಾಡಬೇಕಿತ್ತು. ಆದರೆ, ಹೇಳದೇ ಕೇಳದೇ ರಣವೀರ್ ಸಿಂಗ್ ಚಿತ್ರದಿಂದ ಹೊರ ಹೋಗಿದ್ದಾರೆ. ಈಗ ಅವರ ಮತ್ತೊಂದು ಸಿನಿಮಾ ಅರ್ಧಕ್ಕೆ ನಿಂತಿರೋ ಬಗ್ಗೆ ಮಾಹಿತಿ ಸಿಕ್ಕಿದೆ. ಖ್ಯಾತ ತಮಿಳು ನಿರ್ದೇಶಕ ಶಂಕರ್ ಜೊತೆ ರಣವೀರ್ ಸಿಂಗ್ ಮಾಡಬೇಕಿದ್ದ ಚಿತ್ರವೂ ಅರ್ಧಕ್ಕೆ ನಿಂತಿದೆಯಂತೆ.
ತಮಿಳಿನಲ್ಲಿ ರಿಲೀಸ್ ಆಗಿದ್ದ ‘ಅಪರಿಚಿತ್’ ಸಿನಿಮಾ ಸೂಪರ್ ಹಿಟ್ ಆಗಿತ್ತು. ವಿಕ್ರಮ್ ನಟನೆಯ ಈ ಚಿತ್ರಕ್ಕೆ ಶಂಕರ್ ಅವರೇ ನಿರ್ದೇಶನ ಮಾಡಿದ್ದರು. ಈ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡಲು ಶಂಕರ್ ಮುಂದಾಗಿದ್ದರು. ಹಿಂದಿ ರಿಮೇಕ್ನಲ್ಲಿ ವಿಕ್ರಮ್ ಜಾಗದಲ್ಲಿ ರಣವೀರ್ ಸಿಂಗ್ ನಟಿಸಬೇಕಿತ್ತು. ಆದರೆ, ನಿರ್ಮಾಪಕರ ಬೇಡಿಕೆಯಿಂದ ಈ ಸಿನಿಮಾ ಅರ್ಧಕ್ಕೆ ನಿಂತಿದೆ.
‘ಅಪರಿಚಿತ್ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡುವ ಆಲೋಚನೆ ಇತ್ತು. ಇದರ ಘೋಷಣೆ ಆದ ಬಳಿಕ ಹಲವು ಸಿನಿಮಾಗಳು ಬಂದವು. ಅಪರಿಚಿತ್ ಚಿತ್ರಕ್ಕಿಂತ ದೊಡ್ಡ ಸಿನಿಮಾ ಮಾಡಬೇಕು ಎಂಬುದು ನಮ್ಮ ನಿರ್ಮಾಪಕರ ಉದ್ದೇಶ. ಹೀಗಾಗಿ ಆ ಚಿತ್ರ ಹೋಲ್ಡ್ನಲ್ಲಿ ಇದೆ. ಈ ಎರಡು (ಅವರ ನಿರ್ದೇಶನದ ‘ಇಂಡಿಯನ್ 2’ ಹಾಗೂ ‘ಗೇಮ್ ಚೇಂಜರ್) ಸಿನಿಮಾಗಳು ರಿಲೀಸ್ ಆದ ಬಳಿಕ ಹೇಗೆ ಮುಂದುವರಿಯಬೇಕು ಎಂಬುದನ್ನು ನಿರ್ಧರಿಸುತ್ತೇವೆ ಎಂದಿದ್ದಾರೆ ರಣವೀರ್.
ಇದನ್ನೂ ಓದಿ: ರಣವೀರ್ ಸಿಂಗ್ ಮೊದಲ ಆಡಿಷನ್ ಹೇಗಿತ್ತು ನೋಡಿ; ನೀವು ನಗೋದು ಗ್ಯಾರಂಟಿ
ರಣವೀರ್ ಸಿಂಗ್ ಕೂಡ ಸದ್ಯ ಸಖತ್ ಬ್ಯುಸಿ ಇದ್ದಾರೆ. ಅವರು ‘ಸಿಂಗಂ ಅಗೇನ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅಜಯ್ ದೇವಗನ್, ಅಕ್ಷಯ್ ಕುಮಾರ್, ದೀಪಿಕಾ ಪಡುಕೋಣೆ ಮೊದಲಾದವರು ಬಣ್ಣ ಹಚ್ಚಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನ ಈ ಚಿತ್ರಕ್ಕೆ ಇದೆ. ದೀಪಾವಳಿಗೆ ಸಿನಿಮಾ ರಿಲೀಸ್ ಆಗಬೇಕಿದೆ. ಫರ್ಹಾನ್ ಅಖ್ತರ್ ನಿರ್ದೇಶನದ ‘ಡಾನ್ 3’ ಚಿತ್ರದಲ್ಲಿ ರಣವೀರ್ ಬಣ್ಣ ಹಚ್ಚುತ್ತಿದ್ದಾರೆ. ಇನ್ನು, ಶೀಘ್ರವೇ ದೀಪಿಕಾ ಪಡುಕೋಣೆ ತಾಯಿ ಆಗಲಿದ್ದಾರೆ. ಇದು ರಣವೀರ್ ಸಿಂಗ್ ಖುಷಿ ಹೆಚ್ಚಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.