AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಿದ್ ಮೇಲೆ ಕಿಯಾರಾ ಮಾಟ ಮಾಡಿಸಿದ್ದಾಳೆ, ಸಿದ್ ಜೀವ ಉಳಿಸಲು 50 ಲಕ್ಷ ಖರ್ಚು ಮಾಡಿದ್ದೇನೆ’

ಸಿದ್ಧಾರ್ಥ್ ಮಲ್ಹೋತ್ರಾ ಮೇಲೆ ನಟಿ, ಪತ್ನಿ ಕಿಯಾರಾ ಅಡ್ವಾಣಿ ಮಾಟ ಮಾಡಿಸಿದ್ದು, ಕಿಯಾರಾ, ಸಿದ್ಧಾರ್ಥ್ ಹಾಗೂ ಅವರ ಕುಟುಂಬವನ್ನು ಕೊಲ್ಲಲು ಸಜ್ಜಾಗಿದ್ದಾಳೆ. ಕಿಯಾರಾ ಇಂದಾಗಿ ಸಿದ್ಧಾರ್ಥ್​ ಪ್ರತಿದಿನ ಹಿಂಸೆ ಪಡುತ್ತಿದ್ದಾರೆ ಹೀಗೆಲ್ಲ ಹಾಗಾಗಿ ನಾನು ಸಿದ್ಧಾರ್ಥ್ ಅನ್ನು ಕಾಪಾಡುತ್ತೇನೆ ಎಂದು ಹುಚ್ಚು ಅಭಿಮಾನಿಯೊಬ್ಬಾಕೆ ಹೇಳಿಕೊಂಡಿದ್ದಾಳೆ. 50 ಲಕ್ಷ ಹಣವನ್ನೂ ಖರ್ಚು ಮಾಡಿದ್ದಾಳೆ.

‘ಸಿದ್ ಮೇಲೆ ಕಿಯಾರಾ ಮಾಟ ಮಾಡಿಸಿದ್ದಾಳೆ, ಸಿದ್ ಜೀವ ಉಳಿಸಲು 50 ಲಕ್ಷ ಖರ್ಚು ಮಾಡಿದ್ದೇನೆ’
ಸಿದ್ಧಾರ್ಥ್-ಕಿಯಾರಾ
ಮಂಜುನಾಥ ಸಿ.
|

Updated on:Jul 03, 2024 | 5:14 PM

Share

ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಬಾಲಿವುಡ್​ನ ಕ್ಯೂಟ್ ಜೋಡಿ. ಯಾವುದೇ ವಿವಾದಗಳಿಲ್ಲದೆ ತಮ್ಮ ಪಾಡಿಗೆ ತಾವಿದ್ದಾರೆ. ಆದರೆ ಅಮೆರಿಕದ ಸಿದ್ಧಾರ್ಥ್ ಮಹಿಳಾ ಅಭಿಮಾನಿಯೊಬ್ಬಾಕೆ ಸಿದ್ಧ್ ಮೇಲಿನ ತನ್ನ ಅತಿಯಾದ ಪ್ರೀತಿಯಿಂದಾಗಿ ಸುಮಾರು 50 ಲಕ್ಷ ರೂಪಾಯಿಗೂ ಹೆಚ್ಚು ಹಣ ಕಳೆದುಕೊಂಡಿದ್ದಾಳೆ. ಅಲ್ಲದೆ ಕಿಯಾರಾ, ಸಿದ್ ಮೇಲೆ ಮಾಟ ಮಾಡಿಸಿದ್ದಾಳೆ ಎಂದೆಲ್ಲ ಏನೇನೋ ಹುಚ್ಚು ಆರೋಪಗಳನ್ನು ಮಾಡಿದ್ದಾಳೆ. ಕೆಲವು ಸ್ಕ್ರೀನ್ ಶಾಟ್​ಗಳನ್ನು, ಹಣ ವರ್ಗಾವಣೆ ಮಾಡಿರುವ ದಾಖಲೆಗಳನ್ನು ಸಹ ಹಂಚಿಕೊಂಡಿದ್ದಾಳೆ.

ಮೀನೂ ವಾಸುದೇವನ್ ಹೆಸರಿನ ಅಮೆರಿಕದಲ್ಲಿ ವಾಸವಿರುವ ಭಾರತೀಯ ಮೂಲದ ಯುವತಿ, ತನ್ನಷ್ಟಕ್ಕೆ ತಾನೇ ಸಿದ್ಧಾರ್ಥ್​ಗೆ ಕಿಯಾರಾ ಮಾಟ ಮಾಡಿಸಿದ್ದಾಳೆ, ನಾವು ಕಿಯಾರಾ ಇಂದ ಸಿದ್ಧಾರ್ಥ್ ಅನ್ನು ರಕ್ಷಿಸಬೇಕಿದೆ ಎಂದುಕೊಂಡು ಅಲಿಜಾ ಸಿದ್ ಲವರ್ ಎಂಬುವರನ್ನು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕ ಮಾಡಿದ್ದಾರೆ. ಬಳಿಕ ತನ್ನ ಆತಂಕ ಹೇಳಿಕೊಂಡ ಬಳಿಕ, ಸಿದ್ ಅನ್ನು ಕಾಪಾಡಲು ಸಾಮಾಜಿಕ ಜಾಲತಾಣದ ಮೂಲಕವೇ ಇವರು ‘ಪ್ಲ್ಯಾನ್’ ಮಾಡಿದ್ದಾರೆ.

ಅಲಿಜಾ, ಮಿನೂ ಅನ್ನು ಸಾಮಾಜಿಕ ಜಾಲತಾಣದ ಮೂಲಕವಾಗಿಯೇ ಸಿದ್​ ಹಾಗೂ ಕಿಯಾರಾ ಮನೆಯಲ್ಲಿ ಕೆಲಸ ಮಾಡುವವರು, ಆಪ್ತರು ಎಂದೆಲ್ಲ ಪರಿಚಯಿಸಿ, ಇನ್ನು ಮುಂದೆ ಕಿಯಾರಾ ಏನು ಮಾಡುತ್ತಾಳೆ ಅದೆಲ್ಲದರ ಮೇಲೆ ನಾವು ಕಣ್ಣಿಡೋಣ ಎಂದೆಲ್ಲ ಮಾತನಾಡಿಕೊಂಡಿದ್ದಾರೆ. ಅಸಲಿಗೆ ಅಲಿಜಾ, ಮೀನೂಗೆ ಎಲ್ಲ ನಕಲಿ ವ್ಯಕ್ತಿಗಳನ್ನು ಪರಿಚಯಿಸಿ ಮಿನೂ ಇಂದು ಚೆನ್ನಾಗಿ ಹಣ ಪೀಕಿಸಿದ್ದಾಳೆ. ಮೀನೂ ಸುಮಾರು 50 ಲಕ್ಷಕ್ಕೂ ಹೆಚ್ಚು ಹಣವನ್ನು ಅಲಿಜಾ ಮತ್ತು ಆಕೆ ಪರಿಚಯಿಸಿದ ನಕಲಿ ಕಿಯಾರಾ ಹಾಗೂ ಸಿದ್​ರ ಆಪ್ತರಿಗೆ ಕಳಿಸಿದ್ದಾಳೆ. ಈ ಎಲ್ಲ ಮಾಹಿತಿಯನ್ನು ಮೀನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.

ಇದನ್ನೂ ಓದಿ:ಚಿತ್ರರಂಗದಲ್ಲಿ 10 ವರ್ಷ ಪೂರೈಸಿದ ನಟಿ ಕಿಯಾರಾ ಅಡ್ವಾಣಿ; ಭರ್ಜರಿ ಸೆಲೆಬ್ರೇಷನ್​

ಮೀನೂ ಹಂಚಿಕೊಂಡಿರುವ ಸ್ಕ್ರೀನ್ ಶಾಟ್ಸ್​ಗಳಲ್ಲಿ, ಮೀನೂ ತನ್ನಷ್ಟಕ್ಕೆ ತಾನು ಕಿಯಾರಾ ಅತ್ಯಂತ ಕೆಟ್ಟ ಮಹಿಳೆ. ಆಕೆ ಸಿದ್ಧಾರ್ಥ್ ಮೇಲೆ ಮೋಡಿ ಆತನನ್ನು ಮದುವೆಯಾಗಿದ್ದಾಳೆ, ಸಿದ್ಧಾರ್ಥ್ ಮೇಲೆ ಕಿಯಾರಾ ಮಾಟ ಮಾಡಿದ್ದು, ಸಿದ್ಧಾರ್ಥ್​ರ ಕುಟುಂಬ ಸದಸ್ಯರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾಳೆ. ಕಿಯಾರಾಗೆ ರಾಮ್ ಚರಣ್ ಸೇರಿದಂತೆ ಚಿತ್ರರಂಗದ ಎಲ್ಲರೊಟ್ಟಿಗೆ ಸಂಪರ್ಕವಿದೆ. ಧರ್ಮ ಪ್ರೊಡಕ್ಷನ್​ನ ಬೇಸ್​ಮೆಂಟ್​ನಲ್ಲಿ ಕಿಯಾರಾ, ಕರಣ್ ಜೋಹರ್, ಮನೀಷ್ ಮಲ್ಹೋತ್ರಾ ಇನ್ನಿತರೆ ವ್ಯಕ್ತಿಗಳು ಸಿದ್ಧಾರ್ಥ್ ಮೇಲೆ ಮಾಟ ಮಾಡಿದ್ದಾರೆ ಎಂದೆಲ್ಲ ಊಹಿಸಿಕೊಂಡಿದ್ದಾರೆ.

ಮೀನೂಳ ಈ ಹುಚ್ಚಿನ ಒಳ್ಳೆಯ ಲಾಭ ಪಡೆದಿರುವ ಅಲಿಜಾ ಹಾಗೂ ಇತರರು, ಧರ್ಮ ಪ್ರೊಡಕ್ಷನ್​ನ ಬೇಸ್​ಮೆಂಟ್​ನಲ್ಲಿ ನಡೆದಿದೆ ಎಂದು ಹೇಳಿ ಕೆಲವು ಮಾಟ ಮಂತ್ರಗಳ ಚಿತ್ರ, ವಿಡಿಯೋಗಳನ್ನೆಲ್ಲ ಕಳಿಸಿದ್ದಾರೆ. ಇದನ್ನೆಲ್ಲ ನೋಡಿ ಮೀನೂ ಇನ್ನಷ್ಟು ಗಾಬರಿಯಾಗಿದ್ದಾಳೆ. ಕಿಯಾರಾ ಮತ್ತೊಮ್ಮೆ ಸಿದ್ಧಾರ್ಥ್ ಜೊತೆಗೆ ಸಿನಿಮಾದಲ್ಲಿ ನಟಿಸುತ್ತಿದ್ದಾಳೆ ಅದನ್ನು ಹೇಗಾದರೂ ಮಾಡಿ ತಪ್ಪಿಸಬೇಕು. ನಾವು ಕಾಸ್ಟಿಂಗ್ ಡೈರೆಕ್ಟರ್​ಗೆ ಹತ್ತು ಲಕ್ಷ ಲಂಚ ಕೊಟ್ಟು ಕಿಯಾರಾ-ಸಿದ್ಧಾರ್ಥ್ ಒಟ್ಟಿಗೆ ನಟಿಸದಂತೆ ಮಾಡೋಣ ಎಂದೆಲ್ಲ ಮಾತನಾಡಿಕೊಂಡಿದ್ದಾರೆ.

ಮೀನೂ ಸುಮಾರು 100ಕ್ಕೂ ಹೆಚ್ಚು ಸ್ಕ್ರೀನ್ ಶಾಟ್, ಚಿತ್ರಗಳು, ವಿಡಿಯೋಗಳನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ. ಈಗಲೂ ಸಹ ಸಿದ್​ಗೆ ಕಿಯಾರಾ ಮಾಟ ಮಾಡಿದ್ದನ್ನು ನಂಬಿಕೊಂಡೇ ಇದ್ದಾರೆ. ಆದರೆ ಅಲಿಜಾ ಮತ್ತು ಇತರರು ತಮಗೆ ಮೋಸ ಮಾಡಿದ್ದಾರೆ ಎಂದು ಹೇಳಿದ್ದಾರೆ. ಸಿದ್-ಕಿಯಾರಾ ಈ ಬಗ್ಗೆ ಸೈಬರ್ ಪೊಲೀಸರಿಗೆ ದೂರು ನೀಡಲಿದ್ದಾರೆಯೇ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:13 pm, Wed, 3 July 24