ರಣವೀರ್​ಗೆ ಒಂದಾದಮೇಲೆ ಒಂದು ಶಾಕ್; ಅರ್ಧಕ್ಕೆ ನಿಂತ ಮತ್ತೊಂದು ಬಿಗ್ ಬಜೆಟ್ ಸಿನಿಮಾ

ರಣವೀರ್ ಸಿಂಗ್ ಅವರು ಪ್ರಶಾಂತ್ ವರ್ಮಾ ಜೊತೆ ಸಿನಿಮಾ ಮಾಡಬೇಕಿತ್ತು. ಆದರೆ, ಈ ಚಿತ್ರ ಅರ್ಧಕ್ಕೆ ನಿಂತಿದೆ. ಖ್ಯಾತ ತಮಿಳು ನಿರ್ದೇಶಕ ಶಂಕರ್ ಜೊತೆ ರಣವೀರ್ ಸಿಂಗ್ ಮಾಡಬೇಕಿದ್ದ ಚಿತ್ರವೂ ಅರ್ಧಕ್ಕೆ ನಿಂತಿದೆಯಂತೆ. ಇದಕ್ಕೆ ಕಾರಣ ಏನು ಎಂಬುದನ್ನು ಸ್ವತಃ ಶಂಕರ್ ಅವರೇ ರಿವೀಲ್ ಮಾಡಿದ್ದಾರೆ.

ರಣವೀರ್​ಗೆ ಒಂದಾದಮೇಲೆ ಒಂದು ಶಾಕ್; ಅರ್ಧಕ್ಕೆ ನಿಂತ ಮತ್ತೊಂದು ಬಿಗ್ ಬಜೆಟ್ ಸಿನಿಮಾ
ಶಂಕರ್-ರಣವೀರ್
Follow us
ರಾಜೇಶ್ ದುಗ್ಗುಮನೆ
|

Updated on: Jul 03, 2024 | 1:48 PM

ರಣವೀರ್ ಸಿಂಗ್ ನಟನೆಯ ಸಿನಿಮಾಗಳು ಒಂದಾದಮೇಲೆ ಒಂದರಂತೆ ಅರ್ಧಕ್ಕೆ ನಿಲ್ಲುತ್ತಿವೆ. ಅವರು ಹನುಮಾನ್ ನಿರ್ದೇಶಕ ಪ್ರಶಾಂತ್ ವರ್ಮಾ ಜೊತೆ ಸಿನಿಮಾ ಒಂದನ್ನು ಮಾಡಬೇಕಿತ್ತು. ಆದರೆ, ಹೇಳದೇ ಕೇಳದೇ ರಣವೀರ್ ಸಿಂಗ್ ಚಿತ್ರದಿಂದ ಹೊರ ಹೋಗಿದ್ದಾರೆ. ಈಗ ಅವರ ಮತ್ತೊಂದು ಸಿನಿಮಾ ಅರ್ಧಕ್ಕೆ ನಿಂತಿರೋ ಬಗ್ಗೆ ಮಾಹಿತಿ ಸಿಕ್ಕಿದೆ. ಖ್ಯಾತ ತಮಿಳು ನಿರ್ದೇಶಕ ಶಂಕರ್ ಜೊತೆ ರಣವೀರ್ ಸಿಂಗ್ ಮಾಡಬೇಕಿದ್ದ ಚಿತ್ರವೂ ಅರ್ಧಕ್ಕೆ ನಿಂತಿದೆಯಂತೆ.

ತಮಿಳಿನಲ್ಲಿ ರಿಲೀಸ್ ಆಗಿದ್ದ ‘ಅಪರಿಚಿತ್’ ಸಿನಿಮಾ ಸೂಪರ್ ಹಿಟ್ ಆಗಿತ್ತು. ವಿಕ್ರಮ್ ನಟನೆಯ ಈ ಚಿತ್ರಕ್ಕೆ ಶಂಕರ್ ಅವರೇ ನಿರ್ದೇಶನ ಮಾಡಿದ್ದರು. ಈ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡಲು ಶಂಕರ್ ಮುಂದಾಗಿದ್ದರು. ಹಿಂದಿ ರಿಮೇಕ್​ನಲ್ಲಿ ವಿಕ್ರಮ್ ಜಾಗದಲ್ಲಿ ರಣವೀರ್ ಸಿಂಗ್ ನಟಿಸಬೇಕಿತ್ತು. ಆದರೆ, ನಿರ್ಮಾಪಕರ ಬೇಡಿಕೆಯಿಂದ ಈ ಸಿನಿಮಾ ಅರ್ಧಕ್ಕೆ ನಿಂತಿದೆ.

‘ಅಪರಿಚಿತ್ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡುವ ಆಲೋಚನೆ ಇತ್ತು. ಇದರ ಘೋಷಣೆ ಆದ ಬಳಿಕ ಹಲವು ಸಿನಿಮಾಗಳು ಬಂದವು. ಅಪರಿಚಿತ್ ಚಿತ್ರಕ್ಕಿಂತ ದೊಡ್ಡ ಸಿನಿಮಾ ಮಾಡಬೇಕು ಎಂಬುದು ನಮ್ಮ ನಿರ್ಮಾಪಕರ ಉದ್ದೇಶ. ಹೀಗಾಗಿ ಆ ಚಿತ್ರ ಹೋಲ್ಡ್​ನಲ್ಲಿ ಇದೆ. ಈ ಎರಡು (ಅವರ ನಿರ್ದೇಶನದ ‘ಇಂಡಿಯನ್ 2’ ಹಾಗೂ ‘ಗೇಮ್ ಚೇಂಜರ್) ಸಿನಿಮಾಗಳು ರಿಲೀಸ್ ಆದ ಬಳಿಕ ಹೇಗೆ ಮುಂದುವರಿಯಬೇಕು ಎಂಬುದನ್ನು ನಿರ್ಧರಿಸುತ್ತೇವೆ ಎಂದಿದ್ದಾರೆ ರಣವೀರ್.

ಇದನ್ನೂ ಓದಿ: ರಣವೀರ್ ಸಿಂಗ್ ಮೊದಲ ಆಡಿಷನ್ ಹೇಗಿತ್ತು ನೋಡಿ; ನೀವು ನಗೋದು ಗ್ಯಾರಂಟಿ

ರಣವೀರ್ ಸಿಂಗ್ ಕೂಡ ಸದ್ಯ ಸಖತ್ ಬ್ಯುಸಿ ಇದ್ದಾರೆ. ಅವರು ‘ಸಿಂಗಂ ಅಗೇನ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅಜಯ್ ದೇವಗನ್, ಅಕ್ಷಯ್ ಕುಮಾರ್, ದೀಪಿಕಾ ಪಡುಕೋಣೆ ಮೊದಲಾದವರು ಬಣ್ಣ ಹಚ್ಚಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನ ಈ ಚಿತ್ರಕ್ಕೆ ಇದೆ. ದೀಪಾವಳಿಗೆ ಸಿನಿಮಾ ರಿಲೀಸ್ ಆಗಬೇಕಿದೆ.  ಫರ್ಹಾನ್ ಅಖ್ತರ್ ನಿರ್ದೇಶನದ ‘ಡಾನ್ 3’ ಚಿತ್ರದಲ್ಲಿ ರಣವೀರ್ ಬಣ್ಣ ಹಚ್ಚುತ್ತಿದ್ದಾರೆ. ಇನ್ನು, ಶೀಘ್ರವೇ ದೀಪಿಕಾ ಪಡುಕೋಣೆ ತಾಯಿ ಆಗಲಿದ್ದಾರೆ. ಇದು ರಣವೀರ್ ಸಿಂಗ್ ಖುಷಿ ಹೆಚ್ಚಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು