ರಿಜೆಕ್ಟ್ ಮಾಡಿದ ಈ ಐದು ಚಿತ್ರಗಳ ಬಗ್ಗೆ ಅಮಿತಾಭ್ ಬಚ್ಚನ್​ಗೆ ಇದೆ ವಿಷಾದ

ಅಮಿತಾಭ್ ‘ಕಲ್ಕಿ 2898 ಎಡಿ' ಮೂಲಕ ಪ್ರೇಕ್ಷಕರ ಮನ ಗೆಲ್ಲುತ್ತಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ನಿರ್ವಹಿಸಿದ ಅತ್ಯುತ್ತಮ ಪಾತ್ರಗಳಲ್ಲಿ ಇದೂ ಒಂದು. ಆದರೆ, ವೃತ್ತಿಜೀವನದಲ್ಲಿ ತಾವು ತಿರಸ್ಕರಿಸಿದ 5 ಚಿತ್ರಗಳ ಬಗ್ಗೆ ಅವರಿಗೆ ವಿಷಾದ ಇದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ರಿಜೆಕ್ಟ್ ಮಾಡಿದ ಈ ಐದು ಚಿತ್ರಗಳ ಬಗ್ಗೆ ಅಮಿತಾಭ್ ಬಚ್ಚನ್​ಗೆ ಇದೆ ವಿಷಾದ
ರಿಜೆಕ್ಟ್ ಮಾಡಿದ ಈ ಐದೂ ಚಿತ್ರಗಳ ಬಗ್ಗೆ ಅಮಿತಾಭ್ ಬಚ್ಚನ್​ಗೆ ಇದೆ ವಿಷಾದ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jul 04, 2024 | 11:47 AM

ಪ್ರೇಕ್ಷಕರು ‘ಕಲ್ಕಿ 2898 ಎಡಿ’ ಚಿತ್ರವನ್ನು ಇಷ್ಟಪಡುತ್ತಿದ್ದಾರೆ. ಜೂನ್ 27ರಂದು ಬಿಡುಗಡೆಯಾದ ಈ ಸಿನಿಮಾ 700 ಕೋಟಿ ರೂಪಾಯಿ ವ್ಯವಹಾರ ಮಾಡಿದೆ. ಇದರಲ್ಲಿ ಸೌತ್ ಸೂಪರ್ ಸ್ಟಾರ್ ಪ್ರಭಾಸ್ ಜೊತೆಗೆ ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಮತ್ತು ಅಮಿತಾಭ್​ ಬಚ್ಚನ್ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ. 83ರ ಹರೆಯದಲ್ಲೂ ಅಮಿತಾಭ್​ ಈ ಚಿತ್ರದಲ್ಲಿ ಅದ್ಭುತ ನಟನೆ ತೋರಿದ್ದಾರೆ. ಚಿತ್ರದಲ್ಲಿ ಅಶ್ವತ್ಥಾಮನ ಪಾತ್ರದಲ್ಲಿ ಬಿಗ್ ಬಿ ನಟಿಸಿದ್ದಾರೆ.

‘ಕಲ್ಕಿ 2898 ಎಡಿ’ ಮೂಲಕ ಅಮಿತಾಭ್ ಪ್ರೇಕ್ಷಕರ ಮನ ಗೆಲ್ಲುತ್ತಿದ್ದಾರೆ. ಅಮಿತಾಭ್ ವೃತ್ತಿಜೀವನದಲ್ಲಿ ನಿರ್ವಹಿಸಿದ ಅತ್ಯುತ್ತಮ ಪಾತ್ರಗಳಲ್ಲಿ ಇದೂ ಒಂದು. ಆದರೆ, ವೃತ್ತಿಜೀವನದಲ್ಲಿ ತಾವು ತಿರಸ್ಕರಿಸಿದ 5 ಚಿತ್ರಗಳ ಬಗ್ಗೆ ಅವರಿಗೆ ವಿಷಾದ ಇದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

‘ಕೋಯಿ ಮಿಲ್ ಗಯಾ’

‘ಕೋಯಿ ಮಿಲ್ ಗಯಾ’ ಚಿತ್ರದಲ್ಲಿ ಹೃತಿಕ್ ರೋಷನ್, ರೇಖಾ, ಪ್ರೀತಿ ಜಿಂಟಾ ನಟಿಸಿದ್ದರು. ರಾಕೇಶ್ ರೋಷನ್ ಈ ಚಿತ್ರವನ್ನು ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ಚಿತ್ರದಲ್ಲಿ ರೇಖಾ ಅವರ ಗಂಡನ ಪಾತ್ರವನ್ನು ಮಾಡಲು ಅಮಿತಾಭ್​ಗೆ ಅವಕಾಶ ನೀಡಲಾಗಿತ್ತು. ಇದು ವಿಜ್ಞಾನಿಯ ಪಾತ್ರ ಆಗಿತ್ತು. ಆದರೆ, ಬಿಗ್ ಬಿ ಈ ಪಾತ್ರ ಮಾಡಲು ನಿರಾಕರಿಸಿದ್ದರು.

ಕುರ್ಬಾನಿ

ಅಮಿತಾಭ್ ರಿಜೆಕ್ಟ್ ಮಾಡಿದ ಸಿನಿಮಾಗಳ ಸಾಲಿನಲ್ಲಿ ‘ಕುರ್ಬಾನಿ’ ಸಿನಿಮಾ ಕೂಡ ಒಂದು. 1980 ರಲ್ಲಿ ಬಂದ ಈ ಚಿತ್ರವನ್ನು ಅಮಿತಾಭ್ ಬಚ್ಚನ್ ಅವರಿಗೆ ನೀಡಲಾಯಿತು. ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಆ ಸಮಯದಲ್ಲಿ ಅಮಿತಾಭ್ ಬಿಡುವಿಲ್ಲದ ಕಾರಣ ಅವರು ಈ ಚಿತ್ರದಲ್ಲಿ ನಟಿಸಲು ಮಾಡಲು ನಿರಾಕರಿಸಿದರು. ನಂತರ ಈ ಚಿತ್ರದಲ್ಲಿ ವಿನೋದ್ ಖನ್ನಾ ನಾಯಕನಾಗಿ ಆಯ್ಕೆಯಾದರು. ಫಿರೋಜ್ ಖಾನ್ ಈ ಚಿತ್ರವನ್ನು ನಿರ್ದೇಶಿಸಿದರು.

ಸ್ಲಮ್‌ಡಾಗ್ ಮಿಲಿಯನೇರ್

ಅಮಿತಾಭ್ ಅವರ ಜನಪ್ರಿಯ ಕಾರ್ಯಕ್ರಮ ‘ಕೌನ್ ಬನೇಗಾ ಕರೋಡ್ಪತಿ’ ಶೋನ ಸ್ಲಮ್‌ಡಾಗ್ ಮಿಲಿಯನೇರ್’ನಲ್ಲಿ ತೋರಿಸಲಾಯಿತು. ಚಿತ್ರದಲ್ಲಿ ಈ ಕಾರ್ಯಕ್ರಮವನ್ನು ಹೋಸ್ಟ್ ಮಾಡಲು ಅಮಿತಾಭ್​ ಬಚ್ಚನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಅವರು ಈ ಪ್ರಸ್ತಾಪವನ್ನು ತಿರಸ್ಕರಿಸಿದರು. ಇದರ ನಂತರ ಅನಿಲ್ ಕಪೂರ್ ಹೋಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರವು 8 ಆಸ್ಕರ್ ಪ್ರಶಸ್ತಿಗಳನ್ನು ಗೆದ್ದುಕೊಂಡಿತು.

ಮಿಷನ್ ಕಾಶ್ಮೀರ

ವಿಧು ವಿನೋದ್ ಚೋಪ್ರಾ ನಿರ್ದೇಶನದ ‘ಮಿಷನ್ ಕಾಶ್ಮೀರ್’ ಚಿತ್ರದಲ್ಲಿ ‘ಇನಾಯತ್ ಖಾನ್’ ಪಾತ್ರವನ್ನು ಅಮಿತಾಭ್​ಗೆ ನೀಡಲಾಗಿತ್ತು. ಆ ಸಮಯದಲ್ಲಿ ಬಿಗ್ ಬಿ ‘ಮೊಹಬ್ಬತೇ’ ಚಿತ್ರೀಕರಣದಲ್ಲಿ ನಿರತರಾಗಿದ್ದರು. ಹಾಗಾಗಿಯೇ ಅವರು ಈ ಚಿತ್ರವನ್ನೂ ತಿರಸ್ಕರಿಸಿದ್ದರು. 2002ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಹೃತಿಕ್ ರೋಷನ್ ಮತ್ತು ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: 

ಮಿಸ್ಟರ್ ಇಂಡಿಯಾ

‘ಮಿಸ್ಟರ್ ಇಂಡಿಯಾ ಮೇ’ ಚಿತ್ರದಲ್ಲಿ ಅನಿಲ್ ಕಪೂರ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಆದರೆ ಈ ಚಿತ್ರಕ್ಕೆ ಅವರು ಮೊದಲ ಆಯ್ಕೆಯಾಗಿರಲಿಲ್ಲ ಎಂದು ಸಹೋದರ ಬೋನಿ ಕಪೂರ್ ಹೇಳಿದ್ದರು. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಬೋನಿ, ಅಮಿತಾಭ್ ಅವರಿಗೆ ಈ ಚಿತ್ರದ ಪಾತ್ರ ಆಫರ್ ಮಾಡಲಾಗಿತ್ತು. ಆದರೆ, ಕೆಲವು ವಿಷಯಗಳು ಸರಿ ಬರಲಿಲ್ಲ. ಹಾಗಾಗಿ ಅವರು ಈ ಚಿತ್ರವನ್ನು ತಿರಸ್ಕರಿಸಿದರು’ ಎಂದಿದ್ದರು. ಆ ಬಳಿಕ ಸಿನಿಮಾ ಅನಿಲ್ ಕಪೂರ್ ಪಾಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು