ರಣವೀರ್ ಸಿಂಗ್ (Ranveer Singh) ಅವರು ಇಂದು (ಜುಲೈ 6) ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಅವರು 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಬಾರಿ ಅವರು ಬರ್ತ್ಡೇಯನ್ನು(Ranveer Singh Birthday) ಪತ್ನಿ ದೀಪಿಕಾ ಪಡುಕೋಣೆ (Deepika Padukone) ಜತೆ ಅಮೆರಿಕದಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಅವರ ಹುಟ್ಟುಹಬ್ಬದ ದಿನ ರಣವೀರ್ ಹಾಗೂ ದೀಪಿಕಾ ಮಧ್ಯೆ ಇರುವ ವಯಸ್ಸಿನ ಅಂತರದ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಹಾಗಾದರೆ, ರಣವೀರ್ ಹಾಗೂ ದೀಪಿಕಾ ಇಬ್ಬರಲ್ಲಿ ಹಿರಿಯರು ಯಾರು? ಆ ಪ್ರಶ್ನೆಗೆ ಈ ಸುದ್ದಿಯಲ್ಲಿದೆ ಉತ್ತರ.
ದೀಪಿಕಾ ಪಡುಕೋಣೆ ಅಮೆರಿಕದಲ್ಲಿದ್ದಾರೆ. ಇತ್ತೀಚೆಗೆ ಕೊಂಕಣಿ ಸಮುದಾಯದವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಭಾಗಿ ಆಗಿದ್ದರು. ರಣವೀರ್ ಸಿಂಗ್ ಕೂಡ ದೀಪಿಕಾ ಜತೆ ಬರ್ತ್ಡೇ ಆಚರಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಕ್ಯಾಲಿಫೋರ್ನಿಯಾಗೆ ತೆರಳಿದ್ದಾರೆ. ರಣವೀರ್ ಸಿಂಗ್ಗೆ ಬರ್ತ್ಡೇ ಪ್ರಯುಕ್ತ ಹಲವರಿಂದ ಶುಭಾಶಯಗಳು ಬರುತ್ತಿವೆ. ಸಾಕಷ್ಟು ಸೆಲೆಬ್ರಿಟಿಗಳು ರಣವೀರ್ ಸಿಂಗ್ಗೆ ಬರ್ತ್ಡೇ ವಿಶ್ ತಿಳಿಸುತ್ತಿದ್ದಾರೆ.
ರಣವೀರ್ ಹಾಗೂ ದೀಪಿಕಾ ಇವರಿಬ್ಬರಲ್ಲಿ ರಣವೀರ್ ಸಿಂಗ್ ದೊಡ್ಡವರು. ರಣವೀರ್ ಸಿಂಗ್ ಜನಿಸಿದ್ದು 1985 ಜುಲೈ 6ರಂದು. ದೀಪಿಕಾ ಪಡುಕೋಣೆ ಹುಟ್ಟಿದ್ದು 1986 ಜನವರಿ 5ರಂದು. ವಯಸ್ಸಿನಲ್ಲಿ ದೀಪಿಕಾಗಿಂತ ರಣವೀರ್ ಸಿಂಗ್ 6 ತಿಂಗಳು ದೊಡ್ಡವರು.
ರಣಬೀರ್ ಕಪೂರ್ ಜತೆ ದೀಪಿಕಾ ಪ್ರೀತಿಯಲ್ಲಿದ್ದರು. ಇಬ್ಬರ ಮಧ್ಯೆ ಬ್ರೇಕಪ್ ಆದ ನಂತರ ರಣವೀರ್ ಜತೆ ದೀಪಿಕಾಗೆ ಪ್ರೀತಿ ಬೆಳೆಯಿತು. ರಣವೀರ್ ಹಾಗೂ ದೀಪಿಕಾ ಹಲವು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಸೆಟ್ನಲ್ಲೇ ಇಬ್ಬರಿಗೂ ಪ್ರೀತಿ ಮೂಡಿತ್ತು. 2018ರಲ್ಲಿ ಇಬ್ಬರೂ ಇಟಲಿಯಲ್ಲಿ ಮದುವೆ ಆದರು. ಈಗ ಇಬ್ಬರೂ ಹಾಯಾಗಿ ಜೀವನ ನಡೆಸಿಕೊಂಡು ಹೋಗುತ್ತಿದ್ದಾರೆ.
ರಣವೀರ್ ಸಿಂಗ್ ಅವರಿಗೆ ಇತ್ತೀಚೆಗೆ ಗೆಲುವು ಸಿಗುತ್ತಿಲ್ಲ. ‘83’ ಚಿತ್ರ ವಿಮರ್ಶೆಯಲ್ಲಿ ಗೆದ್ದರೂ ನಿರೀಕ್ಷಿತ ಮಟ್ಟದಲ್ಲಿ ದುಡ್ಡು ಮಾಡಿಲ್ಲ. ‘ಜಯೇಶ್ಭಾಯ್ ಜೋರ್ದಾರ್’ ಹೀನಾಯ ಸೋಲು ಕಂಡಿತು. ‘ಸರ್ಕಸ್’ ಹಾಗೂ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದ ಕೆಲಸದಲ್ಲಿ ರಣವೀರ್ ಸಿಂಗ್ ಬ್ಯುಸಿ ಆಗಿದ್ದಾರೆ. ಬರ್ತ್ಡೇ ಪ್ರಯುಕ್ತ ಸಿನಿಮಾ ಕೆಲಸಗಳಿಗೆ ಅವರು ಬ್ರೇಕ್ ನೀಡಿದ್ದಾರೆ. ಕೆಲ ದಿನಗಳ ಕಾಲ ಅವರು ದೀಪಿಕಾ ಜತೆ ಸಮಯ ಕಳೆಯಲಿದ್ದಾರೆ.
ಇದನ್ನೂ ಓದಿ: ಮಲಗಿದ್ದ ರಣವೀರ್ ಸಿಂಗ್ ಮೇಲೆ ದಾಳಿ ಮಾಡಲು ಬಂತು ಕರಡಿ; ಇದೆಂಥ ಹುಚ್ಚು ಸಾಹಸ?
ಕೊಂಕಣಿ ಕಲಿಯುವ ಇಚ್ಛೆ ವ್ಯಕ್ತಪಡಿಸಿದ ರಣವೀರ್ ಸಿಂಗ್; ವಿಚಿತ್ರ ಕಾರಣ ವಿವರಿಸಿದ ದೀಪಿಕಾ ಪಡುಕೋಣೆ