ಎಐ ಮೂಲಕ ಬದಲಾಯ್ತು ‘ಧುರಂಧರ್ 2’ ಕ್ಲೈಮಾಕ್ಸ್; ಪ್ರೇಕ್ಷಕರ ಬಯಕೆಯಂತೆ ಕಥೆ ಅಂತ್ಯ

ರಣವೀರ್ ಸಿಂಗ್ ಅವರ ‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ದಾಖಲೆ ಬರೆಯುತ್ತಿದೆ. ಅದರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲೂ ಈ ಸಿನಿಮಾ ಬಗ್ಗೆ ಸಖತ್ ಚರ್ಚೆ ನಡಯುತ್ತಿದೆ. ಅಭಿಮಾನಿಯೊಬ್ಬರು ಎಐ ಮೂಲಕ ‘ಧುರಂಧರ್ 2’ ಚಿತ್ರದ ಕ್ಲೈಮ್ಯಾಕ್ಸ್ ಬದಲಾವಣೆ ಮಾಡಿದ್ದಾರೆ.

ಎಐ ಮೂಲಕ ಬದಲಾಯ್ತು ‘ಧುರಂಧರ್ 2’ ಕ್ಲೈಮಾಕ್ಸ್; ಪ್ರೇಕ್ಷಕರ ಬಯಕೆಯಂತೆ ಕಥೆ ಅಂತ್ಯ
Ranveer Singh

Updated on: Mar 23, 2026 | 6:41 PM

ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಅಭಿನಯ ಮತ್ತು ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ (Dhurandhar 2) ಸಿನಿಮಾ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಸಿನಿಮಾ ನೋಡಿದ ಪ್ರೇಕ್ಷಕರು ರಣವೀರ್ (Ranveer Singh) ನಟನೆ ಮತ್ತು ಆದಿತ್ಯ ಧರ್ ಅವರ ನಿರ್ದೇಶನಕ್ಕೆ ಫಿದಾ ಆಗಿದ್ದಾರೆ. ಆದರೆ, ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಅಭಿಮಾನಿಗಳಲ್ಲಿ ಸಣ್ಣದೊಂದು ಬೇಸರವಿತ್ತು. ಈಗ ಆ ಬೇಸರವನ್ನು ಕೃತಕ ಬುದ್ಧಿಮತ್ತೆ (AI) ದೂರ ಮಾಡಿದೆ. ಪ್ರೇಕ್ಷಕರ ಬಯಕೆಯಂತೆ ಒಂದು ಎಐ ವಿಡಿಯೋ ಮಾಡಲಾಗಿದ್ದು, ಅದನ್ನು ನೋಡಿದ ನೆಟ್ಟಿಗರು ಖುಷಿಯಾಗಿದ್ದಾರೆ.

ಸ್ಪಾಯ್ಲರ್ ಇದೆ ಎಚ್ಚರಿಕೆ: ‘ಧುರಂಧರ್ 2’ ಸಿನಿಮಾದ ಅಂತ್ಯದಲ್ಲಿ ಕಥಾನಾಯಕ ತನ್ನ ಊರಿಗೆ ಮರಳುತ್ತಾನೆ. ಅಲ್ಲಿ ತಾನಿಲ್ಲದೆಯೂ ತಾಯಿ ಮತ್ತು ತಂಗಿ ನೆಮ್ಮದಿಯ ಜೀವನ ನಡೆಸುತ್ತಿರುವುದನ್ನು ದೂರದಿಂದಲೇ ನೋಡಿ ಮರುಗುತ್ತಾನೆ. ತನ್ನ ಉಪಸ್ಥಿತಿಯು ಅವರ ಶಾಂತಿಯನ್ನು ಕೆಡಿಸಬಹುದು ಎಂದು ಭಾವಿಸುವ ಆತ, ಭಾರವಾದ ಹೃದಯದಿಂದ ಅಲ್ಲಿಂದ ಗುಟ್ಟಾಗಿ ನಿರ್ಗಮಿಸುತ್ತಾನೆ. ಈ ದೃಶ್ಯವು ಭಾವುಕವಾಗಿದ್ದರೂ, ಅಭಿಮಾನಿಗಳಿಗೆ ಇದು ಸಮಾಧಾನ ನೀಡಿರಲಿಲ್ಲ.

ಅಭಿಮಾನಿಗಳ ಆಸೆಯಂತೆ ಈಗ ಸೋಷಿಯಲ್ ಮೀಡಿಯಾದಲ್ಲಿ ಎಐ ಮೂಲಕ ಸೃಷ್ಟಿಸಲಾದ ಪರ್ಯಾಯ ಕ್ಲೈಮ್ಯಾಕ್ಸ್ ವೈರಲ್ ಆಗಿದೆ. ಈ ಹೊಸ ವಿಡಿಯೋದಲ್ಲಿ ಕಥಾನಾಯಕ ತನ್ನ ತಾಯಿಯನ್ನು ಭೇಟಿಯಾಗುತ್ತಾನೆ. ವರ್ಷಗಳ ನಂತರ ಮಗನನ್ನು ಕಂಡ ತಾಯಿ ಭಾವುಕಳಾಗಿ ತಬ್ಬಿಕೊಳ್ಳುತ್ತಾಳೆ. ನಂತರ ಇಡೀ ಕುಟುಂಬ ಒಂದಾಗಿ ಗ್ರೂಪ್ ಫೋಟೋ ತೆಗೆಸಿಕೊಳ್ಳುವ ಮೂಲಕ ಸುಖಾಂತ್ಯ ಕಾಣುತ್ತದೆ.

ಎಐ ವಿಡಿಯೋ:

ಅಭಿಮಾನಿಗಳು ಈ ವಿಡಿಯೋ ನೋಡಿ, ‘ನಮಗೆ ಬೇಕಾಗಿದ್ದ ಕ್ಲೈಮ್ಯಾಕ್ಸ್ ಇದೇ. AI ತಂತ್ರಜ್ಞಾನದ ಅತ್ಯುತ್ತಮ ಬಳಕೆ ಎಂದರೆ ಇದು’ ಎಂದು ಕಮೆಂಟ್ ಮಾಡಿದ್ದಾರೆ. ಸಿನಿಮಾದಲ್ಲಿ ತೋರಿಸಿರುವ ಮೂಲ ಕ್ಲೈಮ್ಯಾಕ್ಸ್ ಚೆನ್ನಾಗಿದೆ. ಆದರೆ ಪ್ರೇಕ್ಷಕರಿಗೆ ಈ ಕ್ಲೈಮ್ಯಾಕ್ಸ್​ನಿಂದ ಭಾವುಕವಾದ ಸಮಾಧಾನ ಸಿಕ್ಕಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ‘ನಾನು ಮೋದಿಯ ಹೆಮ್ಮೆಯ ಅಂಧಭಕ್ತೆ’: ‘ಧುರಂಧರ್ 2’ ನೋಡಿ ಹೇಳಿಕೆ ನೀಡಿದ ನಟಿ ರೇಣು ದೇಸಾಯಿ

ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಜೊತೆ ಸಾರಾ ಅರ್ಜುನ್, ಸಂಜಯ್ ದತ್, ರಾಕೇಶ್ ಬೇಡಿ, ಅರ್ಜುನ್ ರಾಮ್​ಪಾಲ್, ಆರ್. ಮಾಧವನ್ ಮುಂತಾದವರು ನಟಿಸಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ. ಬಾಕ್ಸ್ ಆಫೀಸ್​​ನಲ್ಲಿ ಹೊಸ ದಾಖಲೆ ಬರೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:38 pm, Mon, 23 March 26

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us