
ರಣ್ವೀರ್ ಸಿಂಗ್ (Ranveer Singh) ವಿರುದ್ಧ ಬಾಲಿವುಡ್ನ ನೌಕರರ ಒಕ್ಕೂಟ ನಿಷೇಧ ಹೇರಿದೆ. ರಣ್ವೀರ್ ಸಿಂಗ್, ‘ಡಾನ್ 3’ ಸಿನಿಮಾದ ಒಪ್ಪಂದ ಮುರಿದಿದ್ದು ಮಾತ್ರವಲ್ಲದೆ ನಷ್ಟ ಪರಿಹಾರ ನೀಡಲು ನಿರಾಕರಿಸಿದ ಕಾರಣಕ್ಕೆ ಈ ನಿಷೇಧ ಹೇರಲಾಗಿದೆ. ರಣ್ವೀರ್ ಸಿಂಗ್ ನಟಿಸುವ ಯಾವುದೇ ಸಿನಿಮಾನಲ್ಲಿ ತಾವು ಕೆಲಸ ಮಾಡುವುದಿಲ್ಲ ಎಂದು ನೌಕರರ ಒಕ್ಕೂಟ ಘೋಷಿಸಿದೆ. ಆದರೆ ಈ ವಿವಾದವನ್ನು ಅಂತ್ಯಗೊಳಿಸಲು ರಣ್ವೀರ್ ಸಿಂಗ್ ಮುಂದಾಗಿದ್ದರಂತೆ, ರಣ್ವೀರ್ ಸಿಂಗ್ ಅವರು ಸಂಧಾನದ ಪ್ರಯತ್ನ ಮಾಡಿದ್ದರಂತೆ. ಆದರೆ ‘ಡಾನ್ 3’ ಸಿನಿಮಾದ ನಿರ್ಮಾಪಕರಾದ ಫರ್ಹಾನ್ ಅಖ್ತರ್ ಮತ್ತು ರಿತೇಷ್ ಸಿದ್ವಾನಿ ಅವರು ರಣ್ವೀರ್ ಆಫರ್ ಅನ್ನು ಸ್ಪಷ್ಟವಾಗಿ ತಿರಸ್ಕರಿಸಿದರಂತೆ.
ರಣ್ವೀರ್ ಸಿಂಗ್ ‘ಡಾನ್ 3’ ಸಿನಿಮಾ ನಿರಾಕರಿಸಿದರ ಪ್ರತಿಯಾಗಿ ಬೇರೊಂದು ಸಿನಿಮಾನಲ್ಲಿ ನಟಿಸುವುದಾಗಿ ಹೇಳಿದ್ದರಂತೆ. ಫರ್ಹಾನ್ ಅಖ್ತರ್ ಅಥವಾ ಅವರ ಸಹೋದರಿ ಜೋಯಾ ಅಖ್ತರ್ ಜೊತೆಗೆ ಹೊಸ ಸಿನಿಮಾನಲ್ಲಿ ಕೆಲಸ ಮಾಡುವ ಆಫರ್ ಅನ್ನು ನೀಡಿದ್ದರು ರಣ್ವೀರ್ ಸಿಂಗ್. ಮೂವರು ಒಟ್ಟಿಗೆ ಕೂತು ನಿರ್ಧರಿಸಿದ ಹೊಸ ಸಿನಿಮಾನಲ್ಲಿ ಕೆಲಸ ಮಾಡುವುದಾಗಿ ಹೇಳಿದ್ದರಂತೆ. ಆದರೆ ಈ ಆಫರ್ ಅನ್ನು ಫರ್ಹಾನ್ ಅಖ್ತರ್ ಮತ್ತು ಅವರ ಪಾರ್ಟನರ್ ರಿತೇಷ್ ಸಿದ್ವಾನಿ ನಿರಾಕರಿಸಿದರಂತೆ.
ಇದನ್ನೂ ಓದಿ:ರಣ್ವೀರ್ ಸಿಂಗ್ಗೆ ಮುಂಚೆ ಬಾಲಿವುಡ್ನಲ್ಲಿ ನಿಷೇಧಕ್ಕೊಳಗಾಗಿದ್ದ ನಟರಿವರು
ಅದು ಮಾತ್ರವೇ ಅಲ್ಲದೆ, ರಣ್ವೀರ್ ಸಿಂಗ್ ಯಾವುದೇ ಸಂಧಾನದ ಪ್ರಯತ್ನ ಅಥವಾ ಸಭೆಯ ಪ್ರಯತ್ನ ಮಾಡುವುದಾದರೆ ಖುದ್ದು ತಾವಿಬ್ಬರೂ ಹಾಜರಿರಲೇ ಬೇಕು ಎಂದು ಸಹ ಫರ್ಹಾನ್ ಮತ್ತು ರಿತೇಷ್ ಹೇಳಿದ್ದಾರೆ. ಈ ಹಿಂದೆ ಆಮಿರ್ ಖಾನ್ ಮನೆಯಲ್ಲಿ ಸಭೆ ನಡೆದಾಗ, ಫರ್ಹಾನ್ ಮತ್ತು ರಿತೇಷ್ ಹಾಜರಿದ್ದರೆ ತಾವು ಸಭೆಗೆ ಬರುವುದಿಲ್ಲ, ಸಭೆ ಪ್ರತ್ಯೇಕವಾಗಿಯೇ ನಡೆಯಬೇಕು ಎಂದು ಫರ್ಹಾನ್ ಅಖ್ತರ್ ಹೇಳಿದ್ದರಂತೆ. ಆ ಸಭೆಯ ಬಳಿಕ ರಣ್ವೀರ್ 10 ಕೋಟಿ ರೂಪಾಯಿ ಪರಿಹಾರ ನೀಡುವುದಾಗಿ ಹೇಳಿದ್ದರಂತೆ. ಆದರೆ ಫರ್ಹಾನ್ ಮತ್ತು ರಿತೇಶ್ ಆ ಆಫರ್ ಅನ್ನು ತಿರಸ್ಕರಿಸಿದ್ದರು.
ರಣ್ವೀರ್ ಸಿಂಗ್ ಅವರು ಫರ್ಹಾನ್ ಅಖ್ತರ್ ಸಹೋದರಿ ಜೋಯಾ ಅಖ್ತರ್ ಜೊತೆಗೆ ಆತ್ಮೀಯ ಗೆಳೆತನ ಹೊಂದಿದ್ದರು. ಜೋಯಾ ನಿರ್ದೇಶನ ಮಾಡಿರುವ ‘ದಿಲ್ ದಡಕ್ನೇ ದೋ’ ಮತ್ತು ‘ಗಲ್ಲಿ ಬಾಯ್’ ಸಿನಿಮಾಗಳಲ್ಲಿ ರಣ್ವೀರ್ ಸಿಂಗ್ ನಟಿಸಿದ್ದರು. ಆದರೆ ಈಗ ಫರ್ಹಾನ್ ಮತ್ತು ಜೋಯಾ ಇಬ್ಬರೂ ಸಹ ರಣ್ವೀರ್ ಸಿಂಗ್ ಜೊತೆಗೆ ಕೆಲಸ ಮಾಡದೇ ಇರಲು ನಿರ್ಧರಿಸಿದ್ದಾರಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ