AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಧುರಂಧರ್’ ಸಿನಿಮಾದ 4 ಕೋಟಿ ಟಿಕೆಟ್ ಮಾರಾಟ; ಶಾರುಖ್, ಆಮಿರ್ ದಾಖಲೆ ಉಡೀಸ್

ಬ್ಲಾಕ್ ಬಸ್ಟರ್ ‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಮಾಡಿದ ದಾಖಲೆಗಳು ಒಂದೆರಡಲ್ಲ. ಈ ಸಿನಿಮಾದ ಬರೋಬ್ಬರಿ ನಾಲ್ಕು ಕೋಟಿ ಟಿಕೆಟ್​​ಗಳು ಮಾರಾಟ ಆಗಿವೆ ಎಂಬ ಲೆಕ್ಕ ಸಿಕ್ಕಿದೆ. ಇದರಿಂದಾಗಿ, ಮಾರ್ಚ್ 19ರಂದು ರಿಲೀಸ್ ಆಗಲಿರುವ ‘ಧುರಂಧರ್ 2’ ಮೇಲೆ ಬೆಟ್ಟದಷ್ಟು ನಿರೀಕ್ಷೆ ಸೃಷ್ಟಿ ಆಗಿದೆ.

‘ಧುರಂಧರ್’ ಸಿನಿಮಾದ 4 ಕೋಟಿ ಟಿಕೆಟ್ ಮಾರಾಟ; ಶಾರುಖ್, ಆಮಿರ್ ದಾಖಲೆ ಉಡೀಸ್
Sara Arjun, Ranveer Singh
ಮದನ್​ ಕುಮಾರ್​
|

Updated on: Feb 04, 2026 | 7:06 PM

Share

ರಣವೀರ್ ಸಿಂಗ್ ನಟನೆಯ ‘ಧುರಂಧರ್’ (Dhurandhar) ಸಿನಿಮಾ ಹಲವು ದಾಖಲೆಗಳನ್ನು ಮುರಿದಿದೆ. ಬಾಕ್ಸ್ ಆಫೀಸ್​​ನಲ್ಲಿ ಸಾವಿರ ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಈ ಚಿತ್ರದ ಒಟ್ಟು 4 ಕೋಟಿ ಟಿಕೆಟ್​​ಗಳು ಮಾರಾಟ ಆಗಿವೆ! ಈ ಮೂಲಕ ಆಮಿರ್ ಖಾನ್, ಶಾರುಖ್ ಖಾನ್ ಮುಂತಾದ ಸ್ಟಾರ್ ನಟರ ಸಿನಿಮಾಗಳು ಈ ಮೊದಲು ಮಾಡಿದ್ದ ದಾಖಲೆಯನ್ನು ‘ಧುರಂಧರ್’ ಮುರಿದು ಹಾಕಿದೆ. ಪ್ರೇಕ್ಷಕರಿಂದ ಈ ಸಿನಿಮಾಗೆ ಫುಲ್ ಮಾರ್ಕ್ಸ್ ಸಿಕ್ಕಿದೆ.

ಕಳೆದ ವರ್ಷ ಡಿಸೆಂಬರ್ 5ರಂದು ‘ಧುರಂಧರ್’ ಸಿನಿಮಾ ಬಿಡುಗಡೆ ಆಗಿತ್ತು. ಆದಿತ್ಯ ಧಾರ್ ನಿರ್ದೇಶನ ಮಾಡಿದ ಈ ಸಿನಿಮಾ ಮೊದಲ ದಿನ ಗಳಿಸಿದ್ದು 30 ಕೋಟಿ ರೂಪಾಯಿ. ನಂತರ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಬಾಯಿ ಮಾತಿನ ಪ್ರಚಾರ ಚೆನ್ನಾಗಿ ಸಿಕ್ಕಿತು. ಆದ್ದರಿಂದ ಜನರು ಮುಗಿಬಿದ್ದು ಸಿನಿಮಾ ನೋಡಿದರು. ಬರೋಬ್ಬರಿ 4 ಕೋಟಿ ಟಿಕೆಟ್​​ಗ್ಳು ಮಾರಾಟ ಆಗಿವೆ ಎಂಬ ಮಾಹಿತಿ ಸಿಕ್ಕಿದೆ.

ಈ ಮೊದಲು ಶಾರುಖ್ ಖಾನ್ ನಟನೆಯ ‘ಕುಚ್ ಕುಚ್ ಹೋತಾ ಹೈ’ ಸಿನಿಮಾದ 3.5 ಕೋಟಿ ಟಿಕೆಟ್​ಗಳು ಮಾರಾಟ ಆಗಿದ್ದವು. ಆಮಿರ್ ಖಾನ್ ನಟನೆಯ ‘ದಂಗಲ್’ ಸಿನಿಮಾದ 3.7 ಕೋಟಿ ಟಿಕೆಟ್​​​ಳು ಮಾರಾಟ ಆಗಿದ್ದವು. ‘ಪಿಕೆ’ ಸಿನಿಮಾದ 3.5 ಕೋಟಿ ಟಿಕೆಟ್ ಮಾರಾಟ ಮಾಡಲಾಗಿತ್ತು. ಆ ಎಲ್ಲ ಸಿನಿಮಾಗಳನ್ನು ‘ಧುರಂಧರ್’ ಹಿಂದಿಕ್ಕಿದೆ.

ಅಂದಹಾಗೆ, ಈವರೆಗೂ ಭಾರತೀಯ ಚಿತ್ರರಂಗದಲ್ಲಿ 4 ಕೋಟಿಗೂ ಅಧಿಕ ಟಿಕೆಟ್​​ಗಳನ್ನು ಮಾರಾಟ ಮಾಡಿರುವುದು 19 ಸಿನಿಮಾಗಳು ಮಾತ್ರ. ‘ಬಾಹುಬಲಿ 2’, ‘ಶೋಲೆ’, ‘ಮೊಘಲ್ ಎ ಆಜಂ’, ‘ಮದರ್ ಇಂಡಿಯಾ’ ಸಿನಿಮಾಗಳು ಅಂದಾಜು ತಲಾ 10 ಕೋಟಿ ಟಿಕೆಟ್ ಮಾರಾಟ ಮಾಡಿದ್ದವು! ಆ ದಾಖಲೆಯನ್ನು ಮುರಿಯಲು ‘ಧುರಂದರ್’ ಸಿನಿಮಾಗೆ ಸಾಧ್ಯವಾಗಿಲ್ಲ.

ಇದನ್ನೂ ಓದಿ: ‘ಧುರಂಧರ್ 2’ ಸಿನಿಮಾದಲ್ಲಿ ಸಲ್ಮಾನ್ ಖಾನ್? ವೈರಲ್ ಆಗಿದೆ ಫೋಟೋ

‘ಧುರಂಧರ್’ ಸಿನಿಮಾದ ಭಾರಿ ಯಶಸ್ಸಿನಿಂದಾಗಿ ಇದರ ಸೀಕ್ವೆಲ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಮಾರ್ಚ್ 19ರಂದು ‘ಧುರಂದರ್ 2’ ರಿಲೀಸ್ ಆಗಲಿದೆ. ‘ಧುರಂಧರ್’ ಮಾಡಿದ ದಾಖಲೆಯಲ್ಲಿ ‘ಧುರಂಧರ್ 2’ ಸಿನಿಮಾ ಮುರಿಯುತ್ತಾ ಎಂಬುದನ್ನು ಕಾದುನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ದೈವಾರಾಧನೆಯಲ್ಲಿ 'ಮಡಿ' ಎಂದರೆ ಭಯವಲ್ಲ, ಅದು ಪರಮ ಶುಚಿತ್ವದ ಸಂಕೇತ!
ದೈವಾರಾಧನೆಯಲ್ಲಿ 'ಮಡಿ' ಎಂದರೆ ಭಯವಲ್ಲ, ಅದು ಪರಮ ಶುಚಿತ್ವದ ಸಂಕೇತ!
ಇಂದು ಶುಕ್ರವಾರ ಮಹಾಲಕ್ಷ್ಮಿಯ ಆರಾಧನೆಯಿಂದ ಸಕಲ ಐಶ್ವರ್ಯ ಸಿದ್ಧಿ!
ಇಂದು ಶುಕ್ರವಾರ ಮಹಾಲಕ್ಷ್ಮಿಯ ಆರಾಧನೆಯಿಂದ ಸಕಲ ಐಶ್ವರ್ಯ ಸಿದ್ಧಿ!
ಅಮೆರಿಕದ ಯುದ್ಧವಿಮಾನದ ಮೇಲೆ ಇರಾನ್ ದಾಳಿ; ಇಲ್ಲಿದೆ ವಿಡಿಯೋ
ಅಮೆರಿಕದ ಯುದ್ಧವಿಮಾನದ ಮೇಲೆ ಇರಾನ್ ದಾಳಿ; ಇಲ್ಲಿದೆ ವಿಡಿಯೋ
ಲಾರಿ ಪಲ್ಟಿಯಾಗುತ್ತಿದ್ದಂತೆ ಕೂಲ್ ಡ್ರಿಂಕ್ಸ್​ ಬಾಟಲಿಗಳನ್ನು ದೋಚಿದ ಜನ!
ಲಾರಿ ಪಲ್ಟಿಯಾಗುತ್ತಿದ್ದಂತೆ ಕೂಲ್ ಡ್ರಿಂಕ್ಸ್​ ಬಾಟಲಿಗಳನ್ನು ದೋಚಿದ ಜನ!
ಎರಡು ಮಕ್ಕಳ ತಾಯಿ ಹಿಂದೆ ಬಿದ್ದ ಯುವಕ: ಕೊನೆಗೆ ಆಕೆಯನ್ನ ಕೊಂದೇ ಬಿಟ್ಟ
ಎರಡು ಮಕ್ಕಳ ತಾಯಿ ಹಿಂದೆ ಬಿದ್ದ ಯುವಕ: ಕೊನೆಗೆ ಆಕೆಯನ್ನ ಕೊಂದೇ ಬಿಟ್ಟ
ಮಗಳನ್ನು ಶಾಲೆಗೆ ಬಿಟ್ಟ ಮಹಿಳೆಗೆ ಥಳಿಸಿ ಚಿನ್ನ ಕದ್ದ ಕಳ್ಳರು!
ಮಗಳನ್ನು ಶಾಲೆಗೆ ಬಿಟ್ಟ ಮಹಿಳೆಗೆ ಥಳಿಸಿ ಚಿನ್ನ ಕದ್ದ ಕಳ್ಳರು!
ಕಡುವಿನಹೊಸಹಳ್ಳಿಯಲ್ಲಿ ಯುಗಾದಿ ಹೊನ್ನಾರು ಸಂಭ್ರಮ
ಕಡುವಿನಹೊಸಹಳ್ಳಿಯಲ್ಲಿ ಯುಗಾದಿ ಹೊನ್ನಾರು ಸಂಭ್ರಮ
ಟಾಪ್ ಗೇರ್​ನಲ್ಲಿ ವಿರಾಟ್ ಬ್ಯಾಟಿಂಗ್‌ ಅಭ್ಯಾಸ; ವಿಡಿಯೋ ನೋಡಿ
ಟಾಪ್ ಗೇರ್​ನಲ್ಲಿ ವಿರಾಟ್ ಬ್ಯಾಟಿಂಗ್‌ ಅಭ್ಯಾಸ; ವಿಡಿಯೋ ನೋಡಿ
ಹುತ್ತಕ್ಕೆ ಕೈಹಾಕಿ ಹಾವನ್ನೆತ್ತಿ ಆಡಿದ ಬಾಲಕ; ಶಾಕಿಂಗ್ ವಿಡಿಯೋ ನೋಡಿ
ಹುತ್ತಕ್ಕೆ ಕೈಹಾಕಿ ಹಾವನ್ನೆತ್ತಿ ಆಡಿದ ಬಾಲಕ; ಶಾಕಿಂಗ್ ವಿಡಿಯೋ ನೋಡಿ
ಪ್ರಜ್ವಲ್ ಅಶ್ಲೀಲ ವಿಡಿಯೋ ಕೇಸ್: JDS ಕಟ್ಟರ್ ಕಾರ್ಯಕರ್ತರೇ ಆರೋಪಿಗಳು!
ಪ್ರಜ್ವಲ್ ಅಶ್ಲೀಲ ವಿಡಿಯೋ ಕೇಸ್: JDS ಕಟ್ಟರ್ ಕಾರ್ಯಕರ್ತರೇ ಆರೋಪಿಗಳು!