
ರಣ್ವೀರ್ ಸಿಂಗ್, ಬಾಲಿವುಡ್ನ (Bollywood) ಸ್ಟಾರ್ ನಟ. ಸತತ ಸೋಲಿನಿಂದ ಕಂಗೆಟ್ಟಿದ್ದ ರಣ್ವೀರ್ ಸಿಂಗ್ ಅವರಿಗೆ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳು ಮರು ಜೀವವನ್ನೇ ನೀಡಿವೆ. ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳ ಭರ್ಜರಿ ಯಶಸ್ಸು ರಣ್ವೀರ್ ಅವರನ್ನು ಮತ್ತೊಮ್ಮೆ ಬೇಡಿಕೆಯ ನಟರನ್ನಾಗಿ ಮಾಡಿದೆ. ರಣ್ವೀರ್ ಸಿಂಗ್ ಸ್ಟಾರ್ ನಟ ಆಗಿರುವ ಜೊತೆಗೆ ಒಳ್ಳೆಯ ಉದ್ಯಮಿ ಸಹ ಹೌದು. ಅವರು ಹಲವಾರು ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇತ್ತೀಚೆಗಷ್ಟೆ ಅವರು ಹೊಸ ಮದ್ಯದ ಉದ್ಯಮವನ್ನು ಸಹ ಪ್ರಾರಂಭಿಸಿದ್ದು, ಕೆಲ ತಿಂಗಳ ಹಿಂದೆಯಷ್ಟೆ ಕರ್ನಾಟಕದಲ್ಲೂ ತಮ್ಮ ಉದ್ಯಮ ಲಾಂಚ್ ಮಾಡಿದ್ದಾರೆ.
ರಣ್ವೀರ್ ಸಿಂಗ್ ಈಗಾಗಲೇ ‘ಬೋಲ್ಡ್ ಕೇರ್’ ಮತ್ತು ‘ಸೂಪರ್ ಯೂ’ ಉದ್ಯಮಗಳನ್ನು ಹೊಂದಿದ್ದು, ಎರಡೂ ಸಹ ಲಾಭದಾಯಕವಾಗಿವೆ. ‘ಬೋಲ್ಡ್ ಕೇರ್’ ಮೂಲಕ ಲೈಂಗಿಕ ಆರೋಗ್ಯಕ್ಕೆ ಸಂಬಂಧಿಸಿದ ಉತ್ಪನ್ನಗಳನ್ನು ರಣ್ವೀರ್ ಸಿಂಗ್ ಮಾರಾಟ ಮಾಡುತ್ತಿದ್ದಾರೆ. ಸೂಪರ್ ಯೂ ಮೂಲಕ ದೇಹಾರೋಗ್ಯಕ್ಕೆ ಸಂಬಂಧಿಸಿದ ಪ್ರೋಟೀನ್, ಕ್ರಿಯೇಟೀನ್, ಪ್ರೋಟೀನ್ ಬಾರ್ ಇನ್ನೂ ಕೆಲವು ಸಪ್ಲಿಮೆಂಟ್ಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದೀಗ ರಣ್ವೀರ್ ಸಿಂಗ್ ಅವರು ಮದ್ಯದ ಉದ್ಯಮಕ್ಕೆ ಕಾಲಿರಿಸಿದ್ದಾರೆ.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ರಣ್ವೀರ್ ಸಿಂಗ್ ಅವರು ‘ರಂಗೀಲಾ’ ಹೆಸರಿನ ವೋಡ್ಕಾ ಬ್ರ್ಯಾಂಡ್ ಅನ್ನು ಲಾಂಚ್ ಮಾಡಿದ್ದಾರೆ. ಎಬಿಡಿ ಪ್ರೈವೇಟ್ ಲಿಮಿಟೆಡ್ ಜೊತೆ ಕೈಜೋಡಿಸಿದ ‘ರಂಗೀಲಾ’ ವೋಡ್ಕಾ ಲಾಂಚ್ ಮಾಡಿದ್ದಾರೆ. ಈ ವೋಡ್ಕಾವನ್ನು ಇದೇ ವರ್ಷದ ಫೆಬ್ರವರಿ ತಿಂಗಳಲ್ಲಿ ಕರ್ನಾಟಕದಲ್ಲೂ ಲಾಂಚ್ ಮಾಡಲಾಗಿದ್ದು, ರಂಗೀಲಾ ವೋಡ್ಕಾ ಪ್ರಸ್ತುತ ಭಾರತದಾದ್ಯಂತ ಚೆನ್ನಾಗಿ ಮಾರಾಟ ಆಗುತ್ತಿದೆ. ಕರ್ನಾಟಕದಲ್ಲಿ ಈ ರಂಗೀಲಾ ವೋಡ್ಕಾದ 750 ಎಂಎಲ್ ಬಾಟಲಿ ಬೆಲೆ 2400 ರೂಪಾಯಿಗಳು ಇವೆಯಂತೆ.
ಇದನ್ನೂ ಓದಿ:ರಾಜ್ ಬಿ. ಶೆಟ್ಟಿ ನಟನೆಯ ಬಾಲಿವುಡ್ ಸಿನಿಮಾ ಮಹಿಳಾ ವಿರೋಧಿ ಚಿತ್ರ ಅಲ್ಲ; ಸಿಕ್ತು ಸ್ಪಷ್ಟನೆ
ಇನ್ನುಳಿದಂತೆ ರಣ್ವೀರ್ ಸಿಂಗ್ ಮೇಲೆ, ಬಾಲಿವುಡ್ನ ನೌಕರರ ಸಂಘ ನಿಷೇಧ ಹೇರಿದೆ. ‘ಡಾನ್ 3’ ಸಿನಿಮಾದ ಒಪ್ಪಂದ ಮುರಿದು, ನಷ್ಟ ಪರಿಹಾರ ತುಂಬಿಕೊಡಲು ನಿರಾಕರಿಸಿರುವ ಕಾರಣಕ್ಕೆ ನಿರ್ಮಾಪಕ ಫರ್ಹಾನ್ ಅಖ್ತರ್, ರಣ್ವೀರ್ ವಿರುದ್ಧ ದೂರು ನೀಡಿದ್ದರು. ಇದೇ ಕಾರಣಕ್ಕೆ ಇದೀಗ ಹಿಂದಿ ಸಿನಿಮಾ ನೌಕರರ ಸಂಘ ರಣ್ವೀರ್ ವಿರುದ್ಧ ಅನಧಿಕೃತ ನಿಷೇಧ ಹೇರಿದೆ. ಪ್ರಸ್ತುತ ರಣ್ವೀರ್ ಸಿಂಗ್ ಕೈಯಲ್ಲಿ ಯಾವುದೇ ಸಿನಿಮಾಗಳಿಲ್ಲ ಆದರೆ ‘ಧುರಂಧರ್’ ನಿರ್ದೇಶಕ ಆದಿತ್ಯ ಧರ್ ಅವರ ಮುಂದಿನ ಸಿನಿಮಾನಲ್ಲಿ ರಣ್ವೀರ್ ಅವರೇ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:38 pm, Sun, 31 May 26