ಕನ್ನಡದ ಪ್ರೇಕ್ಷಕರಿಗೆ ರಶ್ಮಿಕಾ ಮಂದಣ್ಣ (Rashmika Mandanna) ಅವರನ್ನು ಕಂಡರೆ ಅಷ್ಟಕ್ಕಷ್ಟೇ ಎಂಬುದಕ್ಕೆ ಸೋಶಿಯಲ್ ಮೀಡಿಯಾ ಕಮೆಂಟ್ಗಳೇ ಸಾಕ್ಷಿ. ಅದರ ಜೊತೆಯಲ್ಲಿ ಈಗ ಅವರು ಇಡೀ ದಕ್ಷಿಣ ಭಾರತದ ಚಿತ್ರರಂಗವನ್ನು ಕೆಣಕುವಂತಹ ಹೇಳಿಕೆ ನೀಡಿದ್ದಾರೆ. ಬಾಲಿವುಡ್ (Bollywood) ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆಯುತ್ತಿರುವ ರಶ್ಮಿಕಾ ಮಂದಣ್ಣ ಅವರು ಹಿಂದಿ ಮಂದಿಯನ್ನು ಓಲೈಸುವ ಭರದಲ್ಲಿ ಇಡೀ ದಕ್ಷಿಣ ಭಾರತದ ಚಿತ್ರರಂಗವನ್ನು (South Film Industry) ಜರಿದಿದ್ದಾರೆ. ಇದು ಅನೇಕರ ಕೋಪಕ್ಕೆ ಕಾರಣ ಆಗಿದೆ. ‘ರೊಮ್ಯಾಂಟಿಕ್ ಸಾಂಗ್ಸ್ ವಿಚಾರದಲ್ಲಿ ಹಿಂದಿ ಚಿತ್ರರಂಗವೇ ಬೆಸ್ಟ್’ ಎಂದು ರಶ್ಮಿಕಾ ಹೇಳಿದ್ದಾರೆ. ಇದನ್ನು ಇಟ್ಟುಕೊಂಡು ಅವರನ್ನು ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡಲು ಆರಂಭಿಸಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಬಾಲಿವುಡ್ನಲ್ಲಿ ನಟಿಸಿದ ಮೊದಲ ಸಿನಿಮಾ ‘ಮಿಷನ್ ಮಜ್ನು’. ಆದರೆ ಕಾರಣಾಂತರಗಳಿಂದ ಅದರ ಬಿಡುಗಡೆ ತಡವಾಯಿತು. ಅದಕ್ಕೂ ಮುನ್ನ ‘ಗುಡ್ ಬೈ’ ರಿಲೀಸ್ ಆಯಿತು. ಈಗ ‘ಮಿಷನ್ ಮಜ್ನು’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. 2023ರ ಜನವರಿ 20ರಂದು ಈ ಚಿತ್ರ ನೇರವಾಗಿ ನೆಟ್ಫ್ಲಿಕ್ಸ್ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ಅದರ ಪ್ರಮೋಷನ್ ಸಲುವಾಗಿ ಮೊದಲ ಸಾಂಗ್ ರಿಲೀಸ್ ಮಾಡಲಾಗಿದೆ.
‘ಮಿಷನ್ ಮಜ್ನು’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ರೊಮ್ಯಾಂಟಿಕ್ ಸಾಂಗ್ಗಳ ಬಗ್ಗೆ ರಶ್ಮಿಕಾ ಮಂದಣ್ಣ ಮಾತನಾಡಿದ್ದಾರೆ. ‘ದಕ್ಷಿಣ ಭಾರತದಲ್ಲಿ ಮಾಸ್ ಮಸಾಲಾ, ಐಟಂ ಸಾಂಗ್ಗಳು ಇರುತ್ತವೆ. ಆದರೆ ರೊಮ್ಯಾಂಟಿಕ್ ಸಾಂಗ್ ವಿಚಾರದಲ್ಲಿ ಬಾಲಿವುಡ್ ಬೆಸ್ಟ್. ಬಾಲಿವುಡ್ನಲ್ಲಿ ನನ್ನ ಮೊದಲ ರೊಮ್ಯಾಂಟಿಕ್ ಹಾಡು ಬರುತ್ತಿದೆ. ನೀವೆಲ್ಲ ಕೇಳಬೇಕು ಅಂತ ನಾನು ಸಖತ್ ಎಗ್ಸೈಟ್ ಆಗಿದೇನೆ’ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಮ್ ಖಾತೆ ಹ್ಯಾಕ್ ಆಯ್ತಾ? ಉಲ್ಟಾ ಅಕ್ಷರದ ಅಸಲಿ ವಿಷಯ ಇಲ್ಲಿದೆ..
ಕನ್ನಡದಲ್ಲಿಯೇ ಬೇಕಾದಷ್ಟು ರೊಮ್ಯಾಂಟಿಕ್ ಹಾಡುಗಳಿವೆ. ದಕ್ಷಿಣ ಭಾರತದಲ್ಲಿ ಇಳೆಯರಾಜ, ಹಂಸಲೇಖ, ರಾಜನ್-ನಾಗೇಂದ್ರ ಅವರಂತಹ ಮಹಾನ್ ಸಂಗೀತ ನಿರ್ದೇಶಕರು ಎಲ್ಲ ಕಾಲಕ್ಕೂ ಸಲ್ಲುವಂತಹ ರೊಮ್ಯಾಂಟಿಕ್ ಹಾಡುಗಳನ್ನು ನೀಡಿದ್ದಾರೆ. ಹಾಗಿದ್ದರೂ ಕೂಡ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್ ಮಂದಿಯೇ ಬೆಸ್ಟ್ ಎಂದು ಹೇಳಿರುವುದು ಸೌತ್ ಸಿನಿಮಾಪ್ರೇಮಿಗಳ ಕೋಪಕ್ಕೆ ಕಾರಣ ಆಗಿದೆ.
ಇದನ್ನೂ ಓದಿ:Varisu: ಪ್ರಪಂಚದಲ್ಲೇ 2ನೇ ಸ್ಥಾನ ಪಡೆದ ರಶ್ಮಿಕಾ ಮಂದಣ್ಣ ಹೊಸ ಸಾಂಗ್ ‘ರಂಜಿದಮೆ..’
ಬಾಲಿವುಡ್ನಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ‘ಗುಡ್ ಬೈ’ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡಲಿಲ್ಲ. ಈಗ ‘ಮಿಷನ್ ಮಜ್ನು’ ಕೂಡ ಕಾನ್ಫಿಡೆನ್ಸ್ ಇಲ್ಲದೇ ಒಟಿಟಿ ದಾರಿ ಹಿಡಿದಿದೆ. ಈ ಸಿನಿಮಾ ಸದ್ದು ಮಾಡಿದರೆ ಮಾತ್ರ ಅವರಿಗೆ ಹಿಂದಿಯಲ್ಲಿ ಹೆಚ್ಚಿನ ಅವಕಾಶಗಳು ಬರಲಿವೆ. ಇಲ್ಲವಾದರೆ ಅವರ ಬಾಲಿವುಡ್ ಪಯಣ ಕಷ್ಟವಾಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:09 pm, Wed, 28 December 22