AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rashmika Mandanna: ಸಂಜಯ್​ ಲೀಲಾ ಬನ್ಸಾಲಿ ಆಫೀಸ್​ನಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ; ಶೀಘ್ರದಲ್ಲೇ ಸಿಗಲಿದೆ ಬಿಗ್​ ನ್ಯೂಸ್​

Rashmika Mandanna | Sanjay Leela Bhansali: ಸಂಜಯ್​ ಲೀಲಾ ಬನ್ಸಾಲಿ ಅವರ ಗರಡಿಯಲ್ಲಿ ಪಳಗಿದ ಕಲಾವಿದರಿಗೆ ಚಿತ್ರರಂಗದಲ್ಲಿ ವಿಶೇಷ ಮನ್ನಣೆ ಸಿಗುತ್ತದೆ. ಈಗ ಅವರನ್ನು ರಶ್ಮಿಕಾ ಮಂದಣ್ಣ ಭೇಟಿ ಮಾಡಿರುವುದು ಅಚ್ಚರಿ ಮೂಡಿಸಿದೆ.

Rashmika Mandanna: ಸಂಜಯ್​ ಲೀಲಾ ಬನ್ಸಾಲಿ ಆಫೀಸ್​ನಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ; ಶೀಘ್ರದಲ್ಲೇ ಸಿಗಲಿದೆ ಬಿಗ್​ ನ್ಯೂಸ್​
ರಶ್ಮಿಕಾ ಮಂದಣ್ಣ, ಸಂಜಯ್ ಲೀಲಾ ಬನ್ಸಾಲಿ
TV9 Web
| Edited By: |

Updated on: Dec 29, 2022 | 3:10 PM

Share

ನಟಿ ರಶ್ಮಿಕಾ ಮಂದಣ್ಣ ಅವರನ್ನು ಒಂದು ವರ್ಗದ ಜನರು ಟ್ರೋಲ್​ ಮಾಡುತ್ತಲೇ ಇದ್ದಾರೆ. ಆದರೆ ಯಾರು ಎಷ್ಟೇ ಟ್ರೋಲ್​ ಮಾಡಿದರೂ ರಶ್ಮಿಕಾ ಮಂದಣ್ಣ (Rashmika Mandanna) ಅವರ ಬೆಳವಣಿಗೆಗೆ ಅದರಿಂದ ತೊಂದರೆ ಆಗಿಲ್ಲ. ಒಂದಕ್ಕಿಂತ ಮತ್ತೊಂದು ದೊಡ್ಡ ಸಿನಿಮಾಗಳ ಅವಕಾಶಗಳು ಅವರಿಗೆ ಒಲಿದು ಬರುತ್ತಲೇ ಇವೆ. ದಕ್ಷಿಣ ಭಾರತದಲ್ಲಿ ಸ್ಟಾರ್​ ನಟಿಯಾಗಿ ಬೆಳೆದಿರುವ ಅವರು ಈಗ ಬಾಲಿವುಡ್ (Bollywood)​ ಅಂಗಳದಲ್ಲೂ ತಮ್ಮ ನೆಲೆಯನ್ನು ಭದ್ರ ಪಡಿಸಿಕೊಳ್ಳುತ್ತಿದ್ದಾರೆ. ಅಚ್ಚರಿ ಏನೆಂದರೆ ಖ್ಯಾತ ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿ (Sanjay Leela Bhansali) ಅವರ ಜೊತೆ ರಶ್ಮಿಕಾ ಮಂದಣ್ಣ ಸಿನಿಮಾ ಮಾಡುವ ಸಾಧ್ಯತೆ ದಟ್ಟವಾಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ಅವರು ಬನ್ಸಾಲಿ ಕಚೇರಿಗೆ ಭೇಟಿ ನೀಡಿದ ಫೋಟೋಗಳು ವೈರಲ್​ ಆಗಿವೆ. ಈ ಬಗ್ಗೆ ಶೀಘ್ರದಲ್ಲೇ ದೊಡ್ಡ ಸುದ್ದಿ​ ಹೊರಬರಲಿದೆ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.

ಹಿಂದಿ ಚಿತ್ರರಂಗದಲ್ಲಿ ಸಂಜಯ್​ ಲೀಲಾ ಬನ್ಸಾಲಿ ಅವರು ಸೋಲಿಲ್ಲದ ಸರದಾರನಂತೆ ತಮ್ಮ ಛಾಪು ಮೂಡಿಸಿದ್ದಾರೆ. ‘ಬಾಜಿರಾವ್​ ಮಸ್ತಾನಿ’, ‘ಪದ್ಮಾವತ್​’, ‘ಗಂಗೂಭಾಯಿ ಕಾಠಿಯಾವಾಡಿ’ ಮುಂತಾದ ಸಿನಿಮಾಗಳ ಮೂಲಕ ಅವರು ಯಶಸ್ವಿ ನಿರ್ದೇಶಕ ಎನಿಸಿಕೊಂಡಿದ್ದಾರೆ. ಅಂಥ ಡೈರೆಕ್ಟರ್​ ಜೊತೆ ಸಿನಿಮಾ ಮಾಡುವ ಅವಕಾಶ ಸಿಕ್ಕರೆ ರಶ್ಮಿಕಾ ಮಂದಣ್ಣ ಅವರ ಅದೃಷ್ಟದ ಬಾಗಿಲು ತೆರೆದಂತೆಯೇ ಸರಿ.

ಸಂಜಯ್​ ಲೀಲಾ ಬನ್ಸಾಲಿ ಅವರ ಗರಡಿಯಲ್ಲಿ ಪಳಗಿದ ಕಲಾವಿದರಿಗೆ ಚಿತ್ರರಂಗದಲ್ಲಿ ವಿಶೇಷ ಮನ್ನಣೆ ಸಿಗುತ್ತದೆ. ರಣವೀರ್​ ಸಿಂಗ್​, ದೀಪಿಕಾ ಪಡುಕೋಣೆ ಮುಂತಾದ ಕಲಾವಿದರಿಗೆ ಬನ್ಸಾಲಿ ಅವರು ಗುರು ಸ್ಥಾನದಲ್ಲಿದ್ದಾರೆ. ಈಗ ಅವರನ್ನು ರಶ್ಮಿಕಾ ಮಂದಣ್ಣ ಭೇಟಿ ಮಾಡಿರುವುದು ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ
Image
Rashmika Mandanna: ಎದೆ ಮೇಲೆ ಆಟೋಗ್ರಾಫ್​ ಹಾಕಿ ಅಂತ ಹಠ ಹಿಡಿದ ರಶ್ಮಿಕಾ ಮಂದಣ್ಣ ಅಭಿಮಾನಿ; ಮುಂದೇನಾಯ್ತು?
Image
Rashmika Mandanna: ‘ಇಂದು ನಾನೇ ಗೋಲ್ಡನ್​ ಗರ್ಲ್​’ ಅಂತ ಪೋಸ್​ ನೀಡಿದ ರಶ್ಮಿಕಾ ಮಂದಣ್ಣ; ಆದ್ರೆ ಜನ ಹೇಳಿದ್ದೇನು?
Image
Rashmika Mandanna: ಬಾಲಿವುಡ್​ ಸೇರಿದ ರಶ್ಮಿಕಾ ಮಂದಣ್ಣ ಹೊಸ ಅವತಾರ ಹೇಗಿದೆ ನೋಡಿ; ಫೋಟೋ ವೈರಲ್​
Image
Rashmika Mandanna: ಸೆಲ್ಫಿ ಕೇಳಿದ ಅಭಿಮಾನಿಗಳ ಜತೆ ರಶ್ಮಿಕಾ ಮಂದಣ್ಣ ನಡೆದುಕೊಂಡಿದ್ದು ಹೇಗೆ? ವಿಡಿಯೋ ವೈರಲ್​

ಇದನ್ನೂ ಓದಿ: Rashmika Mandanna: ‘ರೊಮ್ಯಾಂಟಿಕ್​ ಹಾಡುಗಳಲ್ಲಿ ದಕ್ಷಿಣಕ್ಕಿಂತ ಬಾಲಿವುಡ್​ ಬೆಸ್ಟ್​’ ಎಂದ ರಶ್ಮಿಕಾ; ಟ್ರೋಲ್ ಶುರು

ರಶ್ಮಿಕಾ ಮಂದಣ್ಣ ನಟಿಸಿದ ಬಾಲಿವುಡ್​ನ ‘ಗುಡ್​ ಬೈ’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಮಾಡಲಿಲ್ಲ. ಈಗ ಅವರ ಎರಡನೇ ಸಿನಿಮಾ ‘ಮಿಷನ್​ ಮಜ್ನು’ ನೇರವಾಗಿ ಒಟಿಟಿಯಲ್ಲಿ ರಿಲೀಸ್​ ಆಗುತ್ತಿದೆ. 2023ರ ಜನವರಿ 20ರಂದು ಈ ಚಿತ್ರ ನೆಟ್​ಫ್ಲಿಕ್ಸ್​ ಮೂಲಕ ವೀಕ್ಷಣೆಗೆ ಲಭ್ಯವಾಗಲಿದೆ. ಇದರಲ್ಲಿ ಸಿದ್ದಾರ್ಥ್​ ಮಲ್ಹೋತ್ರ ಅವರಿಗೆ ಜೋಡಿಯಾಗಿ ರಶ್ಮಿಕಾ ನಟಿಸಿದ್ದಾರೆ. ಈ ಚಿತ್ರದಿಂದ ಅವರ ವೃತ್ತಿಜೀವನಕ್ಕೆ ದೊಡ್ಡ ಮೈಲೇಜ್​ ಸಿಗುವ ನಿರೀಕ್ಷೆ ಇದೆ.

ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣ ಇನ್​ಸ್ಟಾಗ್ರಾಮ್​ ಖಾತೆ ಹ್ಯಾಕ್​ ಆಯ್ತಾ? ಉಲ್ಟಾ ಅಕ್ಷರದ ಅಸಲಿ ವಿಷಯ ಇಲ್ಲಿದೆ..

‘ಮಿಷನ್​ ಮಜ್ನು’ ಚಿತ್ರದ ಮೊದಲ ಸಾಂಗ್​ ಬಿಡುಗಡೆ ಆಗಿದೆ. ಈ ಸಂದರ್ಭದಲ್ಲಿ ‘ದಕ್ಷಿಣ ಭಾರತಕ್ಕೆ ಹೋಲಿಸಿದರೆ ರೊಮ್ಯಾಂಟಿಕ್​ ಹಾಡುಗಳಲ್ಲಿ ಹಿಂದಿ ಚಿತ್ರರಂಗವೇ ಬೆಸ್ಟ್​’ ಎಂದು ರಶ್ಮಿಕಾ ಹೇಳಿದ್ದಾರೆ. ಅವರ ಈ ಹೇಳಿಕೆಗೆ ಸೌತ್​ ಸಿನಿಮಾಪ್ರಿಯರು ವಿರೋಧ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್